LatestMysore

ಹುಣಸೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಬಿ.ಆ‌ರ್.ಅಂಬೇಡ್ಕರ್ ಅವರ ಜಯಂತಿಯನ್ನು ಏ.14 ರಂದು ತಾಲ್ಲೂಕು ಆಡಳಿತ ಸರಳವಾಗಿ ಆಚರಿಸಿ, ಪ್ರತ್ಯೇಕ ದಿನದಂದು ಸರ್ವ ಸಮುದಾ-ಯದವರನ್ನು ಆಹ್ವಾನಿಸಿ ಅಂಬೇಡ್ಕರ್ ಚಿಂತನ ಮಂಥನದೊಂದಿಗೆ ಮಹಾನ್ ವ್ಯಕ್ತಿಯನ್ನು ಸರ್ವರೂ ಅಪ್ಪಿಕೊಳ್ಳುವ ಮನಸ್ಥಿತಿ ಸೃಷ್ಟಿಸಬೇಕಾಗಿದೆ ಎಂದು ದಲಿತ ಸಮುದಾಯದ ಮುಖಂಡ ಹರಿಹರ ಆನಂದಸ್ವಾಮಿ ಹೇಳಿದರು.

ನಗರದ ಅಂಬೇಡ್ಕ‌ರ್ ಭವನದಲ್ಲಿ ತಾಲ್ಲೂಕು ಆಡಳಿತ ಕರೆದಿದ್ದ ಬಿ.ಆ‌ರ್.ಅಂಬೇಡ್ಕ‌ರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏ. 14 ರಂದು ಗ್ರಾಮೀಣ ಭಾಗದಲ್ಲಿ ಅಂಬೇಡ್ಕ‌ರ್ ಜಯಂತಿ ಆಚರಿ ಸುವುದರಿಂದ ಯುವಕರು, ಮಹಿಳೆ ಯರು ತಾಲ್ಲೂಕು ಮಟ್ಟದ ಕಾರ್ಯಕ್ರಮ-ದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಪ್ರತ್ಯೇಕ ದಿನ ಆಚರಿಸಲು ಶಾಸಕ ಜಿ.ಡಿ.ಹರೀಶ್ ಗೌಡ ಅವರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ರತ್ನಾಪುರಿ ಪುಟ್ಟಸ್ವಾಮಿ ಮಾತನಾಡಿ, ತಾಲ್ಲೂಕು ಆಡಳಿತ ದಲಿತ ಸಮುದಾಯದ ಕುಂದು ಕೊರತೆ ಸಭೆ ಕರೆಯದೆ ಅಂಬೇಡ್ಕ‌ರ್ ಜಯಂತಿ ಆಚರಿಸುವುದರಲ್ಲಿ ಅರ್ಥವಿಲ್ಲ, ದಲಿತರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಕಳೆದ ವರ್ಷ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ನಿವೇಶನ ನಿಗದಿ ಗೊಳಿಸುವ ಬಗ್ಗೆ ಭರವಸೆ ನೀಡಿದ್ದರು. ನಂತರದಲ್ಲಿ ಏನಾಯಿತು ಎಂದು ತಾಲ್ಲೂಕು ಆಡಳಿತ ಸಮಾಜದ ಮುಖಂಡರ ಗಮನಕ್ಕೆ ತಂದಿಲ್ಲ ಎಂದು ಪುಟ್ಟರಾಜ್ ಸಭೆ ಗಮನಕ್ಕೆ ತಂದರು. ಇದಕ್ಕೆ ರಾಮಕೃಷ್ಣ, ಕೊಳಗಟ್ಟ ಕೃಷ್ಣ, ಚಿಕ್ಕಸ್ವಾಮಿ ಧ್ವನಿಗೂಡಿಸಿದರು.

ತಹಶೀಲ್ದಾ‌ರ್ ಮಂಜುನಾಥ್ ಅವರು ಇದಕ್ಕೆ ಪ್ರತಿಕ್ರಿಯಿಸಿ, ನಗರದ ಸಂವಿಧಾನ ವೃತ್ತದ ಬಳಿ ಲೋಕೋಪಯೋಗಿ ಮತ್ತು ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ 30 ಅಡಿ ನಿವೇಶನ ಕಾಯ್ದಿರಿ ಸಿದ್ದು, ಸಂಬಂಧಿಸಿದ ಸಚಿವಾಲಯಕ್ಕೆ ಅನುಮತಿಗಾಗಿ ಕಡತ ಕಳುಹಿಸಿದೆ. ಶಾಸಕರು ಸಮಾಜ ಕಲ್ಯಾಣ ಸಚಿವ ರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.

ಅಂಬೇಡ್ಕ‌ರ್ ಜಯಂತಿ ಯನ್ನು ಎಲ್ಲ ರಾಜಕೀಯ ಪಕ್ಷದವರು ಒಗ್ಗೂಡಿ ಒಂದೇ ದಿನ ಆಚರಿಸೋಣ, ಪ್ರತ್ಯೇಕವಾಗಿ ಆಚರಿಸುವುದರಿಂದ ಸಮಾಜಕ್ಕೆ ಸಂದೇಶ ವಿಭಿನ್ನವಾಗಿ ತಲಪುತ್ತದೆ ಎಂದು ಕಟ್ಟೆಮಳಲವಾಡಿ ಪುಟ್ಟರಾಜ್ ಸಲಹೆ ನೀಡಿದರು.

ನಾಗರಾಜ್ ಮಲ್ಲಾಡಿ, ನಿಂಗರಾಜ್ ಮಲ್ಲಾಡಿ, ಕೆಂಪರಾಜು ಮಾತನಾಡಿದರು. ಸಭೆಯಲ್ಲಿ ದಲಿತ ಮುಖಂಡ ಕಿರಂಗೂರು ಸ್ವಾಮಿ, ಡಿ.ಕುಮಾರ್, ಬಸವಲಿಂಗಯ್ಯ, ದೇವ ರಾಜ ಒಡೆಯರ್, ದೊಡ್ಡಹೆದ್ದೂರು ನಾಗೇಶ್, ಸಂತೋಷ್, ಪ್ರಸನ್ನ ಕುಮಾರ್, ಶಿವಣ್ಣ, ಆಂಜನೇಯ ಇದ್ದರು.

admin
the authoradmin

Leave a Reply

Translate to any language you want