LatestMysore

ಕೆ.ಆರ್.ನಗರ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ: ನಿಯಮ ಉಲ್ಲಂಘನೆ ಆರೋಪ

 ಕೆ.ಅರ್.ನಗರ(ಸಂಘಟನೆ ಮಂಜುನಾಥ್): ಇದೇ ಏಪ್ರಿಲ್ 19 ರ ಭಾನುವಾರ ನಡೆಯುವ ಕೆ.ಆರ್.ನಗರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ನಿಯಮ ಉಲ್ಲಂಘಿಸಿ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ ಎಂದು ಶಿಕ್ಷಕರ ಸಂಘದ  ಅಧ್ಯಕ್ಷ ಚಿಕ್ಕಕೊಪ್ಪಲು ಸಿ‌.ಎನ್.ಸ್ವಾಮಿ ದೂರಿದ್ದಾರೆ

ಈ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಉಮೇದು ವಾರರು ಮತ್ತು ಸೂಚಕರು ಕಡ್ಡಾಯವಾಗಿ ಸಹಿ ಮಾಡಿ, ಐದು ವರ್ಷಗಳ ಸದಸ್ಯತ್ವದ ವೇತನ ದೃಢೀಕರಣ ಪತ್ರ ಮತ್ತು ಶಿಕ್ಷಕರ ಸಂಘದ ವಂತಿಕೆಗೆ ನೀಡಿರುವ ರಸೀದಿಗಳನ್ನು ಕಡ್ಡಾಯವಾಗಿ ಲಗತಿಸಬೇಕು ಇದೇ ರೀತಿ ಒಬ್ಬ ಅಭ್ಯರ್ಥಿಗೆ  5 ಜನ ಸದಸ್ಯರು ಅನುಮೋದಕರು ಸಹಿ ಇರಬೇಕು ಎಂಬ ಶಿಕ್ಷಕರ ಸಂಘದ ಮಾರ್ಗಸೂಚಿ ನಿಯಮವನ್ನು ಅನುಸರಿಸದೇ ಗಾಳಿಗೆ ತೂರಲಾಗಿದೆ ಎಂದು ದೂರಿದ್ದಾರೆ

ನಮ್ಮ ತಂಡದ ಅಭ್ಯರ್ಥಿಗಳಾದ ಸ್ವಾಮಿ ಸಿಎನ್, ಪ್ರಸನ್ನ, ಧನಂಜಯ ಎಂ ಕೆ, ಸುಕನ್ಯಾ ಜಿಹೆಚ್, ಸಣ್ಣ ಮಲ್ಲಿಗೆ ಸ್ಪರ್ಧಿಸಿದ್ದು ನಾವೆಲ್ಲರೂ ಕರಾರುವಕ್ಕಾಗಿ ಸಲ್ಲಿಸಿದ್ದು ನಮ್ಮ ವಿರುದ್ಧ ತಂಡದ ಅಭ್ಯರ್ಥಿಗಳಾದ ಭಾಸ್ಕರ್, ತುಳಸಿ ರಾಮ ನಾಯಕ, ಪ್ರಸನ್ನ ಕುಮಾರ್ ಬಿವಿ, ಶೀಲಾ ಬಿ, ರುಕ್ಮಣಿ ರವರುಗಳು ಮತ್ತು ಇವರಿಗೆ ಅನುಮೋದಕರು ಹಾಗೂ ಸೂಚಕರು ಯಾವುದೇ ವಂತಿಕೆಯ ರಶೀದಿಗಳನ್ನ ಲಗತಿಸಿರುವುದಿಲ್ಲ ಎಂದು ಮಾಹಿತಿ ನೀಡಿದರು

ಸೋಮವಾರ ನಾಮಪತ್ರಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಅಭ್ಯರ್ಥಿಯಾದ ನಾನು ರಾಜ್ಯ ಸಂಘದ ಮಾರ್ಗಸೂಚಿಯನ್ನು  ಅನುಸರಿಸಿ ನಾಮಪತ್ರಗಳನ್ನು ಪರಿಶೀಲಿಸಬೇಕೆಂದರೂ ಕೆ.ಆರ್‌. ನಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಅಧಿಕಾರಿಗಳು ಇದ್ಯಾವುದನ್ನು ಪರಿಗಣಿಸದೆ ಎಲ್ಲವೂ ಕ್ರಮವಾಗಿದೆ ಎಂದು ತಿಳಿಸಿ ರಾಜ್ಯ ಸಂಘದ ಬೈಲಾವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು

ಈ ಸಬಂಧ ಶಾಲಾ ಶಿಕ್ಷಕರ ಸಂಘದ ಚುನಾವಣಾ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದಂತಾಗಿದೆ ನಮಗೆ ನ್ಯಾಯ ಸಿಗಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತಿದ್ದೇವೆ ಎಂದು ಸಿ.ಎನ್ ಸ್ವಾಮಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ದೊಡ್ಡವಡ್ಡರಗುಡಿ ಪ್ರಶನ್ನ, ಎಂ.ಕೆ.ಧನಂಜಯ, ಜಿ.ಎಚ್.ಸುಕನ್ಯಾ, ಸಣ್ಣ ಮಲ್ಲಿಗೆ ಇದ್ದರು

admin
the authoradmin

Leave a Reply

Translate to any language you want