LatestMysore

ಶಾಸಕ ಡಿ.ರವಿಶಂಕರ್ ವಿರುದ್ಧ  ಜಿ.ಪಂ.ಮಾಜಿ ಸದಸ್ಯ ಅಮಿತ್ ವಿ ದೇವರಹಟ್ಟಿ ವಾಗ್ದಾಳಿ.. ರಾಜಕೀಯ ಸವಾಲ್ …

ಕೆ.ಆರ್.ನಗರ(ಜಿಟೆಕ್ ಶಂಕರ್): ಕಳೆದ 3 ವರ್ಷಗಳಿಂದ ಶಾಸಕರಾಗಿರುವ ಡಿ.ರವಿಶಂಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಸ್ವಜಾತಿಯವರನ್ನೆ ವಂಚಿಸುತ್ತಿದ್ದಾರೆ ಎಂದು ಜಿ.ಪಂ.ಮಾಜಿ ಸದಸ್ಯ ಅಮಿತ್ ವಿ ದೇವರಹಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ನಡೆದ ಕುರುಬ ಸಮಾಜದ ಪ್ರಮುಖ ನಾಯಕರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಮತ್ತು ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಅಭಿನಂದನಾ ಸಮಾರಂಭದಲ್ಲಿ‌ ಮಾತನಾಡಿದರು.

ತನಗೆ ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳದೆ ಕ್ಷೇತ್ರವನ್ನು ಅಭಿವೃದ್ಧಿ ಯಿಂದ ವಂಚಿತವನ್ನಾಗಿ ಮಾಡಿರುವ ಶಾಸಕರು ತಮ್ಮ ರಾಜಕೀಯ ಜೀವನದುದ್ದಕ್ಕು ಅವರಿವರನ್ನು ಎತ್ತಿಕಟ್ಟಿ ಕ್ಷುಲ್ಲಕ ರಾಜಕಾರಣ‌ ಮಾಡುತ್ತಿದ್ದು ಇದಕ್ಕೆ ಮುಂದಿನ ವಿಧಾನ ಸಭಾ ಚುನಾವಣೆಲ್ಲಿ ಕ್ಷೇತ್ರದ ಮತದಾನ ಪ್ರಭುಗಳು ತಕ್ಕ ಉತ್ತರ ನೀಡುವರು ಎಂದರು.

ಶಾಸಕರ 3 ವರ್ಷಗಳ ದುರಾಡಳಿತ ಮತ್ತು ಅಭಿವೃದ್ಧಿ ವಿರೋಧಿ ನೀತಿಯಿಂದ ಬೇಸತ್ತಿರುವ ಕುರುಬ ಸಮಾಜದ ನೂರಾರು‌ ಮುಖಂಡರು ಕಾಂಗ್ರೆಸ್ ತ್ಯಜಿಸಿದ ಸ್ವಯಂ ಪ್ರೇರಿತರಾಗಿ ಜೆಡಿಎಸ್ ಸೇರ್ಪಡೆ ಯಾಗುತ್ತಿರುವ ಮುಖಂಡರುಗಳಿಗೆ ತಮ್ಮ‌ಹಿಂಬಾಕರ ಮೂಲಕ ಅನಗತ್ಯ ತೊಂದರೆ ನೀಡುತ್ತಿರುವ ಶಾಸಕ ಡಿ.ರವಿಶಂಕರ್ ರಣ ಹೇಡಿ ರಾಜಕಾರಣಿ ಎಂದು ಜರೆದರು.

ಇಂತಹ ಗೊಡ್ಡು ಬೆದರಿಕೆ ಮತ್ತು ದಡ್ಡ‌ ರಾಜಕಾರಣಕ್ಕೆ ಹೆದರಿಕೊಳ್ಳಲು ನಾನು ಫಲಾನುಭವಿ ರಾಜಕಾರಣಿ ಅಲ್ಲ ಅದಕ್ಕೆ ಪ್ರತಿರೋಧವೊಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸಲ್ಪಡುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ತೊಡೆ ತಟ್ಟಿ ಸ್ವಾಭಿಮಾನದ ರಾಜಕಾರಣ ಮಾಡುತ್ತಿರುವ ಹೆಚ್.ವಿಶ್ವನಾಥ್ ಅವರ ರಕ್ತದ ಕುಡಿ ಎಂದು ಸವಾಲೆಸೆದರು.

ರಾಜಕೀಯವಾಗಿ ಅನಾಥವಾಗಿ ಎಚ್.ವಿಶ್ವನಾಥ್ ಅವರಿಗೆ ಮೋಸ ಮಾಡಿ ಕಾಂಗ್ರೆಸ್ ತೊರೆದು ಬಿಜೆಪಿ ಮತ್ತು ಕೆಜೆಪಿ ಸುತ್ತುತ್ತಿದ್ದ ಶಾಸಕರು ಮತ್ತು ಅವರ ತಂದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ರಾಜಕೀಯ ಪುನರ್ ಜನ್ಮ‌ ನೀಡಿದ ನಮ್ಮ ತಂದೆಯವರಿಗೆ ಮೋಸ ಮಾಡಿದವರು ರಾಜಕೀಯವಾಗಿ‌ ಉದ್ದಾರವಾಗಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಶಾಪ ಹಾಕಿದರು.

ವಿಶ್ವನಾಥ್ ಅವರಿಗೆ ಮೋಸ ಮಾಡಿದವರು ಉದ್ಧಾರ ಆಗಲ್ಲ

ರಾಜಕೀಯವಾಗಿ ಪುನರ್ ಜನ್ಮ ನೀಡಿದ ಎಚ್.ವಿಶ್ವನಾಥ್ ಅವರಿಗೆ ಮೋಸ ಮಾಡಿದವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಎಂದು‌ ಪರೋಕ್ಷವಾಗಿ ಶಾಸಕ ಡಿ.ರವಿಶಂಕರ್ ಮತ್ತು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಕುಟುಕಿದರು.

ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ‌ ಮಂಗಳವಾರ ನಡೆದ ಕುರುಬ ಸಮಾಜದ ಮುಖಂಡರ ಸೇರ್ಪಡೆ ಕಾರ್ಯಕ್ರಮ ದಲ್ಲಿ‌ ಮಾತನಾಡಿದ ಅವರು ನನ್ನ 22 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಜಾತಿ ಮತ್ತು ಪಕ್ಷ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಸಾಲಿಗ್ರಾಮವನ್ನು ತಾಲೂಕು ಮಾಡಿಸುವುದರ ಜತೆಗೆ ಬಡ ವಿದ್ಯಾರ್ಥಿಗಳು, ವಿಕಲಚೇತನರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ತೃಪ್ತಿ ನನಗಿದೆ ಎಂದರು.

15 ವರ್ಷಗಳ ಶಾಸಕ ಮತ್ತು ಸಚಿವ ಸ್ಥಾನದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಸಮುದಾಯದ ಜನರಿಗೆ ಅನಗತ್ಯ ತೊಂದರೆ ನೀಡದೆ ಎಲ್ಲರನ್ನು ಸೋದರರಂತೆ ಕಂಡಿದ್ದು ಅಧಿಕಾರವಿಲ್ಲದಿದ್ದರೂ  ಪ್ರತಿ ವಾರ ಮೈಸೂರು ಗೃಹ ಕಚೇರಿಯಲ್ಲಿ ಸಾವಿರಾರು ಜನರ ಸಮಸ್ಯೆ ಆಲಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿ.ಪಂ.ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ತಾ.ಪಂ.ಮಾಜಿ ಅಧ್ಯಕ್ಷ ನಾಗಣ್ಣ, ಗ್ರಾ.ಪಂ.ಮಾಜಿ ಸದಸ್ಯ ಮೇಲೂರು ಗೌತಮ್ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಯಾದ ಕುರುಬ ಸಮಾಜದ ಕೆಂಚನಹಳ್ಳಿ ಗ್ರಾಮದ  ಮುಖಂಡರಾದ ಜೆ.ಸತೀಶ್, ಕೆ.ಮಹದೇವ, ಕೆ.ಸಿ.ಶಿವಕುಮಾರ್, ರೇವಣ್ಣ, ಅಶೋಕ, ಕೆ.ಪಿ.ಮಹದೇವ್, ನಿಂಗರಾಜೇಗೌಡ, ಜವರೇಗೌಡ, ರಮೇಶ, ಸುರೇಶ, ಚಂದ್ರು ಯೋಗೇಶ, ರಂಗೇಗೌಡ, ಮುತ್ತು, ದೇವರಾಜು, ತಮ್ಮೇಗೌಡ, ಯೋಗೀಶ, ಕೆ.ಹೆಚ್.ರಘು, ಲೋಕೇಶ್, ದಿವಾಕರ್, ಮಹದೇವ್, ದೊಡ್ಡಯ್ಯ, ಶೇಖರ, ಮಹದೇವ, ವಿನಯಕುಮಾರ್, ಕರಿಗೌಡ, ಪ್ರಸನ್ನ, ಕಿರಣ, ದರ್ಶನ್ ಸೇರಿದಂತೆ ನೂರಕ್ಕು ಅಧಿಕ ಮಂದಿ‌ಯನ್ನು ಸಾ.ರಾ.ಮಹೇಶ್ ಶಾಲು ಹಾಕಿ ಸ್ವಾಗತಿಸಿದರು.

ಸಾಲಿಗ್ರಾಮ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳುಮಧು,  ಜೆಡಿಎಸ್ ಮುಖಂಡರಾದ ಬಿ.ಹೆಚ್.ಮಹದೇವ್, ಗುರುಪ್ರಸಾದ್, ಸಿ.ಬಿ.ಲೋಕೇಶ್, ತಂದ್ರೆರವಿ, ಯಜಮಾನ್ ಮಾಲೇಗೌಡ, ಬಿ.ರಾಜು, ಅನೀಫ್ ಗೌಡ, ಅನಿಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply

Translate to any language you want