ಸಾಲಿಗ್ರಾಮ(ಸಂಘಟನೆ ಮಂಜುನಾಥ್): ಅತೀ ಹೆಚ್ಚು ಮತಗಳನ್ನು ನೀಡಿ ಐತಿಹಾಸಿಕ ಗೆಲುವು ನೀಡಿದ ಕ್ಷೇತ್ರದ ಮತದಾರರ ಋಣವನ್ನು ಎಷ್ಟೆ ಸೇವೆ ಸಲ್ಲಿಸಿದರೂ ತೀರಿಸಲಾಗದು ಆದರೂ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಜನತೆಗೆ ಸೇವೆ ಸಲ್ಲಿಸುವ ಮೂಲಕ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ಪ್ರಾಥಮಿಕ ಪಶುಚಿಕಿತ್ಸಾಲಯ ಉದ್ಘಾಟನೆ, 20ಲಕ್ಷ ರೂಪಾಯಿಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ, 95ಲಕ್ಷ ರೂಪಾಯಿಗಳಲ್ಲಿ ರಸ್ತೆ ಕಾಮಗಾರಿ ಹಾಗೂ ಸಂಗೊಳ್ಳಿರಾಯಣ್ಣ ಪ್ರತಿಮೆ ಉದ್ಘಾಟಿಸಿ ಮಾತನಾಡಿದರು.

ಮೊದಲಿಗೆ ನಮಗೆ ಅಧಿಕಾರ ಇಲ್ಲದಿದ್ದಾಗಲೂ ಲಕ್ಷ್ಮಿಪುರ ಗ್ರಾಮದಲ್ಲಿ ವೈಯುಕ್ತಿಕವಾಗಿ ದೇವಾಲಯಗಳ ಅಭಿವೃದ್ದಿ, ರಸ್ತೆ ನಿರ್ಮಾಣ, ಕುಡಿಯುವ ನೀರು, ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಈ ಗ್ರಾಮಕ್ಕೆ ಪಶುಚಿಕಿತ್ಸಾಲಯ ತೆರೆಯಲಾಗಿದ್ದು, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ರಸ್ತೆ, ಚರಂಡಿ ನಿರ್ಮಾಣಕ್ಕೆ ಒತ್ತುಕೊಟ್ಟು ಕೆಲಸ ಮಾಡಲಾಗುತ್ತಿದ್ದು ಗ್ರಾಮದಲ್ಲಿ ಈವರೆಗೆ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಹೇಳಿದ ಅವರು ಇದಕ್ಕಾಗಿ ಕೂಡಲೇ 2005ರಿಂದ 2026ರವರೆಗೆ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದ್ದು ಇಂತಹ ಅಭಿವೃದ್ದಿಪಥದಲ್ಲಿರುವ ಗ್ರಾಮದಲ್ಲಿ ಗ್ರಾಮದ ಸಂಗೊಳ್ಳಿರಾಯಣ್ಣ ಯುವಕರ ಸಂಘದ ವತಿಯಿಂದ ಸಂಗೊಳ್ಳಿರಾಯಣ್ಣನವರ ಪ್ರತಿಮೆ ಅನಾವರಣ ಮಾಡುತ್ತಿರುವುದು ಸರ್ವರಿಗೂ ಸಂಗೊಳ್ಳಿರಾಯಣ್ಣನವರ ಆದರ್ಶ, ಮಾರ್ಗದರ್ಶನಗಳನ್ನು ಸ್ಮರಣೆ ಮಾಡುತ್ತಾ ಅವರು ಹಾಕಿಕೊಟ್ಟ ಹೋರಾಟದ ಮನೋಭಾವ ಬೆಳೆಸಿಕೊಂಡು ಗ್ರಾಮದ ಅಭಿವೃದ್ದಿಯಲ್ಲಿ ಮುನ್ನೆಡೆಯಲು ಸಹಕಾರಿಯಾಗಿದೆ ಎಂದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಾರಿ ಮುಖ್ಯಮಂತ್ರಿಗಳಾಗಿದ್ದಾಗಲೇ ನಮಗೆ ಅಧಿಕಾರ ಇಲ್ಲದಿದ್ದರೂ ಲಕ್ಷ್ಮಿಪುರಕ್ಕೆ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದ್ದು ಮುಂದೆಯೂ ಸಹ ಮಾಡಲಾಗುವುದು ಎಂದರು.

ಪಶುವೈದ್ಯ ಇಲಾಖೆ ಜಿಲ್ಲಾ ಉಪನಿರ್ದೆಶಕ ಡಾ.ಎಂ.ನಾಗರಾಜ್, ತಹಸೀಲ್ದಾರ್ ರುಕಿಯಾಬೇಗಂ ಮಾತನಾಡಿದರು. ಪಶುಸಹಾಯಕ ನಿರ್ದೆಶಕ ಡಾ.ರಾಮು, ಡಾ.ಸುರೇಂದರ್, ತಾ.ಪಂ.ಮಾಜಿ ಸದಸ್ಯ ಸಣ್ಣಪ್ಪ, ಗ್ರಾಮದ ಮುಖಂಡರಾದ ಎಲೆಕ್ಟ್ರಿಕ್ ಮಂಜು, ಪಾಪಣ್ಣ, ಕಿರಣ್, ಗ್ರಾಮದ ಯಜಮಾನ ತುಳಸಿ, ಮಹೇಶ್, ಡಿಸ್ ಮಂಜು, ಶರತ್, ಮಂಜುನಾಥ್, ಸಣ್ಣೇಗೌಡ ಹಾಗೂ ಗ್ರಾಮದ ಯುವಕರ ಸಂಘದ ಪದಾಧಿಕಾರಿಗಳು, ಮಹಿಳೆಯರು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಾಗಿದ ಗ್ರಾಮದ ಭಾರಿ ಸಂಖ್ಯೆಯ ಜನತೆ ಸಂಗೊಳ್ಳಿರಾಯಣ್ಣನವರ ಭಾವಚಿತ್ರದೊಂದಿಗೆ ಬೆಳ್ಳಿರಥದಲ್ಲಿ ಭವ್ಯ ಮೆರವಣಿಗೆ ನಡೆಸಿದರು.








