LatestMysore

ಗ್ರಾಮೀಣ ಜನರು ಇಂದಿಗೂ ದೈವವನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ:ಜಿಪಂ ಮಾಜಿ ಸದಸ್ಯ ರಾಮಕೃಷ್ಣೇಗೌಡ

ಹರವೆ ಕಲ್ಲಹಳ್ಳಿ  ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ದೇವಸ್ಥಾನ ಉದ್ಘಾಟನೆ

 ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಗ್ರಾಮೀಣ ಜನರು ಇಂದಿಗೂ ದೈವವನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಮಕೃಷ್ಣೇಗೌಡ ಹೇಳಿದರು.

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಕಲ್ಲಹಳ್ಳಿ  ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ  ಗ್ರಾಮೀಣ ರೈತಾಪಿ ವರ್ಗದ ಜನರು ಇಂದಿಗೂ ಯಾವುದೇ ಪ್ರಾರಂಭದ ಕೆಲಸ ಮಾಡಲು ದೈವ ನಂಬಿಕೆಯಿಂದ ಪೂಜೆ ಸಲ್ಲಿಸಿ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಇಂದಿನ ಯುವ ಪೀಳಿಗೆಯ ಕೂಡ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ದೇವರನ್ನು ನಂಬುವಂತಹ ಕಾರ್ಯವಾಗುತ್ತಿದೆ

ದೇವರಲ್ಲಿ ನಂಬಿಕೆ ಇಟ್ಟರೆ ಯಾರನ್ನು ಕೈ ಬಿಡುವುದಿಲ್ಲ, ಗ್ರಾಮೀಣ ಯುವಕರು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ತಂದೆ ತಾಯಂದಿರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವುದರ ಜೊತೆಗೆ ಗುರು ಹಿರಿಯರಲ್ಲಿ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ರೈತ ಮಕ್ಕಳಿಗೆ ಹೆಣ್ಣು ಸಿಗುವಂತೆ ದೇವರು ಕರುಣಿಸಲಿ ಎಂದು ಹಾರೈಸಿದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಯತೀಶ್ ಮಾತನಾಡಿ ಹೆಚ್ಚು ದೇವರದಲ್ಲಿ ನಂಬಿಕೆ ಇಡುವ ಯಾವುದಾದರೂ ದೇಶವಿದ್ದರೆ ಅದು ಭಾರತ ದೇಶ ಮಾತ್ರ, ಅದಮ್ಯ ಭಕ್ತಿಯನ್ನು ಇಟ್ಟುಕೊಂಡಿರುವ ದೇಶ, ರಾಜ ಮಹಾರಾಜರು ಕೂಡ ತಮ್ಮ ಯಶಸ್ಸಿಗೆ ವರ ಬೇಡುತ್ತಿದ್ದರು. ಯಾವುದೇ ಕೆಲಸ ಮಾಡಲು ದೇವರ ಆಶೀರ್ವಾದ ಮುಖ್ಯ ಇಂದಿನ ಯುವಕರೇ ಸೇರಿ ದೇವಸ್ಥಾನ ನಿರ್ಮಾಣವಾಗಲು ಶ್ರಮಿಸಿದ್ದಾರೆ ಯುವಕರಿಗೆಲ್ಲ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಎಂದರು.

ದೇವಸ್ಥಾನದ ಉದ್ಘಾಟನೆಯ ಮಹಾ ಮಂಗಳಾರತಿಯನ್ನು ಶಾಸಕ ಜಿ.ಡಿ. ಹರೀಶ್ ಗೌಡರ ಪತ್ನಿ ವರ್ಷ ಹರೀಶ್ ಗೌಡ, ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರ ಮಾತೃಶ್ರೀ ರತ್ನಮ್ಮ ಪ್ರೇಮ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ರಘು ಕಲ್ಮುಣಿಕೆ, ಸೇವಕ ಹಾಗೂ ತಾಲೂಕು ಜೆಡಿಎಸ್ ಮುಖಂಡ ಹರವೆ ಶ್ರೀಧರ್, ಕಲ್ಲಹಳ್ಳಿ ಗ್ರಾಮದ ಯಜಮಾನ ಲೋಕೇಶ್, ಹಿರೀಕ್ಯಾತನಹಳ್ಳಿ ಗ್ರಾಮದ ಯಜಮಾನ ಜಗದೀಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಆಶಾ ಮಹೇಶ್, ನಾಗರಾಜು,  ನಾಗೇಶ್, ಸುರೇಶ್, ಸ್ವಾಮಿಗೌಡ, ಪುಟ್ಟರಾಜು, ಹೇಮಂತ್, ಹರೀಶ್ ಕಾವಲ್, ಕೊತ್ತೇಗೌಡ ರಾಮಕೃಷ್ಣೇಗೌಡ, ರಾಜೇಗೌಡ, ನ್ಯಾಯಬೆಲೆ ಅಂಗಡಿ ಮಾಲೀಕ ಪುಟ್ಟರಾಜು, ಕೆಇಬಿ ಗುತ್ತಿಗೆದಾರ ನಾಗೇಶ್, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು

admin
the authoradmin

Leave a Reply

Translate to any language you want