ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಲೋಕಸಭೆ ಮತ್ತ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ಐತಿಹಾಸಿಕ ಮೀಸಲಾತಿ ನೀಡುವ ವಿಧೇಯಕವನ್ನು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ವಿರೋಧಿಸುವ ಮೂಲಕ ದೇಶದ ಮಹಿಳೆಯರಿಗೆ ಅಪಮಾನ ಮಾಡಿವೆ ಎಂದು ಜಿಲ್ಲಾ ಬಿಜೆಪಿ ಮಹಿಳಾಮೋರ್ಚಾ ಅಧ್ಯಕ್ಷೆ ತಿರುಮಲೇಶ್ವರಿ ಹೇಳಿದರು.
ಪಟ್ಟಣದ ಭಾವಸಾರ್ ಭವನದಲ್ಲಿ ತಾಲೂಕು ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿರೋಧಪಕ್ಷಗಳ ಇಂತಹ ನಿಲುವಿನಿಂದ ದೇಶದಲ್ಲಿನ 70ಕೋಟಿ ಮಹಿಳೆಯರಿಗೆ ಅಪಮಾನ ಮಾಡಿದಂತಾಗಿದ್ದು ದೇಶದ ಮಹಿಳೆಯರು ಮುಂದಿನ ದಿನಗಳಲ್ಲಿ ಇವರಿಗೆ ತಕ್ಕಪಾಠ ಕಲಿಸಲಿದ್ಧಾರೆ ಎಂದು ಗುಡುಗಿದ ಅವರು, ಸೋನಿಯಾಗಾಂಧಿ, ಇಂದಿರಾಗಾಂಧಿ, ಪ್ರಿಯಾಂಕಗಾಂಧಿ ಈ ಮೂವರು ಮಾತ್ರ ಲೋಕಸಭಾ ಸದಸ್ಯರಾಗಬೇಕೆ ಬೇರೇ ಯಾವ ಸಾಮಾನ್ಯ ಕುಟುಂಬದ ಹೆಣ್ಣುಮಕ್ಕಳು ದಲಿತ ಹಾಗೂ ಹಿಂದುಳಿದ ವರ್ಗದ ಮಹಿಳೆಯರು ಸಂಸತ್ತಿಗೆ ಹೋಗಬಾರದೆ ಎಂದು ಪ್ರಶ್ನಿಸಿದರು.
ಕಾಂಗ್ರೇಸ್ ಮತ್ತು ಮಿತ್ರಪಕ್ಷಗಳಿಗೆ ಮಹಿಳಾ ಸಬಲೀಕರಣದಬಗ್ಗೆ ಕಾಳಜಿ ಇಲ್ಲ ಎಂಬುದು ಈ ನಡವಳಿಕೆಯಿಂದ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಾರಿಶಕ್ತಿ ವಿಧೇಯಕದ ವಿರುದ್ದ ಮತಹಾಕಿ ಮಹಿಳೆಯರ 30ವರ್ಷಗಳ ಕನಸನ್ನು ನುಚ್ಚುನೂರು ಮಾಡಿದ್ಧಾರೆ ಎಂದು ಕಿಡಿಕಾರಿದರು.

ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕುಂಬರಹಳ್ಳಿಸೋಮಣ್ಣ, ರಾಜ್ಯಮುಖಂಡ ಮಿರ್ಲೆವರದರಾಜ್, ರಾಜ್ಯಮಹಿಳಾಮೋರ್ಚಾ ಉಪಾಧ್ಯಕ್ಷೆ ಪ್ರಫುಲ್ಲಾಮಲ್ಲಾಡಿ, ಮಾತನಾಡಿ ಕಾಂಗ್ರೇಸ್ ಮತ್ತು ಮಿತ್ರಪಕ್ಷಗಳ ಕ್ರಮವನ್ನು ಖಂಡಿಸಿದರಲ್ಲದೆ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣಭಾರತದ ರಾಜ್ಯಗಳಿಗೆ ಅನ್ಯಾಯವಾಗಿಲ್ಲ ರಾಜ್ಯದಲ್ಲಿ ಲೋಕಸಭಾಸ್ಥಾನಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದ್ದು ಇದರಿಂದ ಲೋಕಸಭಾ ಹುದ್ದೆಗಳ ಸಂಖ್ಯೆ ಹೆಚ್ಚಾಗಲಿದೆಯೇ ಹೊರತು ಕಡಿಮೆಯಾಗುವುದಿಲ್ಲ ಇಂತಹ ಜನಸ್ನೇಹಿ ವಿಧೇಯಕದೊಂದಿಗೆ ನಾರಿಶಕ್ತಿ ಮಹಿಳಾವಿಧೇಯಕವನ್ನು ವಿರೊಧಪಕ್ಷಗಳು ವಿರೋಧಿಸುತ್ತಿರುವುದು ಸರಿಯಲ್ಲ ಎಂದರು.
ಜಿಲ್ಲಾ ಗ್ರಾಮಾಂತರ ಪ್ರಧಾನಕಾರ್ಯದರ್ಶಿ ಪರೀಕ್ಷಿತ್ ರಾಜೇಅರಸ್, ತಾಲೂಕು ಬಿಜೆಪಿ ಅಧ್ಯಕ್ಷ ಹೊಸೂರು ಶ್ರೀಧರ್ಮ ಮತ್ತಿತರರು ವಿಧೇಯಕದ ಕುರಿತು ಮಾತನಾಡಿದರು. ಮಹಿಳಾಮೋರ್ಚಾ ಅಧ್ಯಕ್ಷೆ ನಳಿನಿ, ಪ್ರಧಾನಕಾರ್ಯದರ್ಶಿ ನಂದಿನಿ, ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ದಾಕ್ಷಾಯಿಣಿ, ಸ್ವಪ್ನಾನಾಗೇಶ್, ತಾಲೂಕು ಮಾಧ್ಯಮ ವಕ್ತಾರ ಬ್ಯಾಡರಹಳ್ಳಿ ಗೋಪಾಲ್ ರಾಜ್, ಪ್ರಧಾನಕಾರ್ಯದರ್ಶಿ ಉಮಾಶಂಕರ್, ಪುರುಷೋತ್ತಮ್, ಮಂಜೇಗೌಡ, ಮಹಾದೇವ, ಪ್ರವೀಣ್ ಶಿವಾಜಿ, ಮತ್ತಿತರ ಮುಖಂಡರು ಹಾಗೂ ಮಹಿಳಾಮೋರ್ಚಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.








