ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಪದವಿ ಹಂತದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ನೀಡುವಷ್ಟು ಮಹತ್ವವನ್ನು ಪಠ್ಯೇತರ ಚಟುವಟಿಕೆಗೂ ನೀಡಿ ಎಲ್ಲಾ ವಿಚಾರಗಳನ್ನು ಅರಿತು ಅರಿವಿನ ಜ್ಞಾನ ಬೆಳೆಸಿಕೊಳ್ಳುವಂತೆ ರಂಗಾಯಣದ ಹಿರಿಯ ಕಲಾವಿದೆ ಗೀತಾಮೊಂಟಡ್ಕ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾ.ಸೇ.ಯೋ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪ್ರಧಾನಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ವಿದ್ಯೆ ಎಂಬುದು ನಿರಂತರವಾಗಿದ್ದು ಇದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸೇರಿದಂತೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮುಂದೆ ಬರುವಂತೆ ಸಲಹೆ ನೀಡಿದರು.
ಪ್ರಮುಖವಾಗಿ ಮೊಬೈಲ್ ಬಳಕೆಯನ್ನು ಕಡಿಮೆಮಾಡಿ ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಕೆಮಾಡುವಂತೆ ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಕಿವಿಮಾತು ಹೇಳಿದ ಅವರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಶ್ರದ್ದೆಯಿಂದ ವ್ಯಾಸಂಗ ಮಾಡಿದಲ್ಲಿ ಗುರಿ ತಲುಪಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ವಿಜಯ ಮಾತನಾಡಿ ಕೃಷ್ಣರಾಜನಗರ ಪಟ್ಟಣದ ಸರಕಾರಿ ಪ್ರಥಮ ದರ್ಜೆಕಾಲೇಜು ಈ ಭಾಗದಲ್ಲಿಯೆ ವಿಶಾಲವಾದ ಪ್ರದೇಶ ಮತ್ತು ಕೊಠಡಿಗಳೊಂದಿಗೆ ಭದ್ರತೆಯಲ್ಲಿರುವುದರಿಂದ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕೆ ಯೋಗ್ಯ ಜ್ಞಾನದೇಗುಲವಾಗಿದೆ ಎಂದರು.

ಇಂತಹ ಜ್ಞಾನದೇಗುಲಕ್ಕೆ ಶಾಸಕ ಡಿ.ರವಿಶಂಕರ್ ನೂತನ ಕಟ್ಟಡಕ್ಕೆ ಚಾಲನೆ, ಕ್ರೀಡಾವಿಭಾಗಕ್ಕೆ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಸಹಾಯಧನ, ಎನ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಸಹಾಯಧನದೊಂದಿಗೆ ಹತ್ತು ಹಲವಾರು ಸಹಾಯ ಮಾಡಿಕೊಟ್ಟಿರುವುದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.
ಸಿಡಿಸಿ ಸದಸ್ಯರಾದ ಶಿಕ್ಷಣತಜ್ಞ ರಾಜಯ್ಯ, ಉದ್ಯಮಿ ರಾಜೇಶ್, ನಟರಾಜು, ಬೆಟ್ಟನಾಯಕ, ಸನಾವುಲ್ಲಾಖಾನ್, ಮುಖ್ಯ ಅತಿಥಿ ಅನ್ಸೂರ್‌ಅಹಮದ್ ಮತ್ತಿತರರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಸಂಚಾಲಕಿ ಡಾ.ಎ.ಸುಮಾ, ಎಲ್.ಮಹೇಶ್, ಕ್ರೀಡಾವಿಭಾಗದ ನಿಸಾರ್ ಖಾನ್, ಕಾಲೇಜು ವ್ಯವಸ್ಥಾಪಕ ರಘು, ಪ್ರಾಧ್ಯಾಪಕ ತಿಪ್ಪೇಸ್ವಾಮಿ, ಸುಪ್ರಿತಾ, ಮಮತಾ, ವರದರಾಜು, ಬಾಲು, ಮಹದೇವ್, ಶಂಕರ್, ಮೋಹನ್‌ದೀಕ್ಷೀತ್, ಜಯಾರೂಪ, ಪ್ರಿಯಾಂಕರಾವ್, ಮಹೇಶ್ವರಿ, ರಾಘವೇಂದ್ರ, ಧನಂಜಯ, ಸುಂದರ್, ಕಿರಣ್, ಮಹದೇವ್‌ಕುಮಾರ್, ರಂಗಸ್ವಾಮಿ, ಕಿರಣ್‌ಕುಮಾರ್ ಹಾಗೂ ಕಾಲೇಜಿನ ಭೋಧಕ ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.








