ArticlesLatest

ಲೋಕಗುರು ಶ್ರೀ ಶಂಕರಾಚಾರ್ಯರು….‌ ನಿಮಗಿದೋ ಕವನದೊಂದಿಗೆ ಕೋಟಿ ನಮನ

ಸನಾತನ ಧರ್ಮದ ಜ್ಯೋತಿಯ ಬೆಳಗಲು.

ಶ್ರೀ ಶಂಕರರು ಕಾಲಟಿಯಲ್ಲಿ ಅವತರಿಸಲು..

ಕಾಶ್ಮೀರ ರಿಂದ ಕನ್ಯಾ ಕುಮಾರಿ ಯವರಿಗೆ ಪರಿಕ್ರಮಿಸಿ..

ಅದ್ವೈತ ಸಿದ್ಧಾಂತ ದ ತಿರುಳು ಪ್ರತಿಪಾದಿಸಿ……….1

 

ಶ್ರೀ ಗುರು ಭಗವತ್ಪಾದರ ಗುರು ದೈವವಾಗಿ ಸ್ವೀಕರಿಸಿ.

ಧರ್ಮವ ಸಾರುತ. ನರ್ಮದಾ ತಟಕೆ ಆಗಮಿಸಿ..

ವೇದ ಉಪನಿಷತ್ತುಗಳ ದಾರಿ ದೀಪ.

ಸಾಕಾರಗೊಂಡಿತು ಅದ್ವೈತದ ತತ್ವ ಸ್ವರೂಪ….2

 

ಶಿವಾನಂದ ಲಹರಿ.. ಸೌಂದರ್ಯ ಲಹರಿಯ  ಹಿರಿಮೆ

ವಿವೇಕಾಚೂಡಾಮಣಿ ಅಷ್ಟಲಕ್ಷ್ಮೀ ಸ್ತೋತ್ರದ ಗರಿಮೆ..

ಭಜಗೋವಿಂದಂ ಭವ ಬಂಧನದ ಮೋಹವ ನೀಗಿಸಲು..

ಅನ್ನಪೂರ್ಣ ಸ್ತೋತ್ರ ಜ್ಞಾನ ದ ಹಸಿವು ತಣಿಸಲು…..3

 

ಉತ್ತರದಲ್ಲಿ ಬದರಿಜ್ಯೋತಿ   ,ಪೂರ್ವದಲ್ಲಿ ಪುರಿ.

ದಕ್ಷಿಣದಲ್ಲಿ ಶಾರದಾ ಪೀಠ , ಪಶ್ಚಿಮದಲ್ಲಿ ದ್ವಾರಕಾ ಪೀಠ ..

ಮಹತ್ಕಾರ್ಯಗಳು ಮಹಾನ್ ಕೃತಿಗಳು ದಿವ್ಯ ಬದುಕಿಗೆ ಸೋಪಾನ.

ಪುನೀತಗೊಂಡು ಪಾಮರರ ಜೀವನ ಪಾವನ..4

 

ನಾನೆಂಬ ಅಹಂಕಾರವ ಬಡಿದೋಡಿಸಿದ ಪುಣ್ಯ ಪುರುಷ..

ಕಲಿಸಿದೆ ಸಕಲ ಚರಾಚರ ಜೀವರಾಶಿಗಳೊಡನೆ ಸಾಮರಸ್ಯ ಜೀವನ..

ಹೇ  ಲೋಕಗುರು . ಶ್ರೀ.ಶಂಕರಾಚಾರ್ಯ.. ಗುರುವೇರಣ್ಯ..

ನಿನಗಿದೋ ನಮ್ಮ ಕೋಟಿ ನಮನ…5

admin
the authoradmin

Leave a Reply

Translate to any language you want