LatestMysore

ವಿದ್ಯಾರ್ಥಿಗಳಿಗೆ ಸಹಕಾರಿಯಾದ  ಪಿರಿಯಾಪಟ್ಟಣದಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರ… ಸಂದೇಹಗಳಿಗೆ ಪರಿಹಾರ!

ಪಿರಿಯಾಪಟ್ಟಣ: ಮಲಬಾರ್ ಜುಮಾ ಮಸ್ಜಿದ್ ಸಮಿತಿ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ನ್ಯಾಷನಲ್ ಎಜುಕೇಶನಲ್ ಅಕಾಡೆಮಿ ಅಂಡ್ ಚಾರಿಟೇಬಲ್ ಟ್ರಸ್ಟ್, ಪಿರಿಯಾಪಟ್ಟಣ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಮಲಬಾರ್ ಜುಮಾ ಮಸ್ಜಿದ್  ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ WHAT NEXT? CAREER GUIDANCE & COUNSELING PROGRAMME SSLC, PUC ಮತ್ತು DEGREE ಮುಗಿಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ನಡೆಸಲಾಯಿತು.

ಮಲಬಾರ್ ಜಮಾ ಮಸೀದಿಯ ಅಧ್ಯಕ್ಷರಾದ ಮೊಹಮ್ಮದ್ ರಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರಲ್ಲದೆ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಇದೇ ವೇಳೆ ಹಲವು ರೀತಿಯ ಮಾಹಿತಿಗಳನ್ನು ನೀಡಲಾಯಿತು. ಹುಣಸೂರು ಸರ್ಕಾರಿ ಮಹಿಳಾ ಕಾಲೇಜು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಸರ್ತಾಜ್ ಪಿ.ಹೆಚ್. ಅವರು ಶಿಕ್ಷಣದ ಮಹತ್ವ ಮತ್ತು ಇದರಲ್ಲಿ ಪೋಷಕರ ಪಾತ್ರ ಕುರಿತು ಪ್ರೇರಕ ಭಾಷಣ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಟ್ಟದಪುರ ಪ್ರಥಮ ದರ್ಜೆ ಕಾಲೇಜಿನ  ಸಹಾಯಕ ಪ್ರಾಧ್ಯಾಪಕರಾದ ಶಾಕಿರ್ ವಿ .ಎಮ್ ಅವರು 10th & 12th  ನಂತರ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಬಗ್ಗೆ ಎಳೆ ಎಳೆಯಾಗಿ ಪೂರ್ಣ ಮಾಹಿತಿಯನ್ನು ನೀಡಿದರು. ನಂತರ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಫಜ್ಲುದ್ದೀನ್ ಅವರು ತಾಂತ್ರಿಕ ಶಿಕ್ಷಣ ಮತ್ತು ಸಿಇಟಿ ಸೀಟು ಹಂಚಿಕೆ ಬಗ್ಗೆ ಮಾಹಿತಿ ನೀಡಿದರು.

ನ್ಯಾಷನಲ್ ಎಜುಕೇಶನಲ್ ಅಕಾಡೆಮಿ & ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಮಹಮದ್ ಶಫಿವುಲ್ಲಾ ರವರು  CET, NEET, KEA, UPSC ಪರೀಕ್ಷೆಗಳ ಮಾಹಿತಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಸಂದೇಹ ಗೊಂದಲಗಳ ಬಗ್ಗೆ ವೈಯಕ್ತಿಕವಾಗಿ ಮಾಹಿತಿ  ಪಡೆದುಕೊಳ್ಳುವುದರೊಂದಿಗೆ ಕಾರ್ಯಾಗಾರ ಯಶಸ್ವಿಯಾಯಿತು. ಮಲಬಾರ್ ಜುಮಾ ಮಸೀದಿಯ ಸದಸ್ಯರು ಕಾರ್ಯಕ್ರಮಕ್ಕೆ ಸ್ಥಳಾವಕಾಶ ಮತ್ತು ಸ್ನ್ಯಾಕ್ಷ್ ನೀಡಿ ಪೂರ್ಣ ಪ್ರಮಾಣದೊಂದಿಗೆ ಸಹಕರಿಸಿದ್ದಕ್ಕೆ ಶ್ಲಾಘಿಸಲಾಯಿತು.

ಕಾರ್ಯಕ್ರಮದಲ್ಲಿ ಮಲಬಾರ್ ಜುಮಾ ಮಸೀದಿಯ ಮುನೀರ್ ಬಾಕ್ವಿ ರವರು  ಪ್ರಾರ್ಥಿಸಿದರೆ, ಸೈಯದ್ ಮುದಸಿರ್ ಅಧ್ಯಕ್ಷರು KSGMEWA ಮೈಸೂರು ಜಿಲ್ಲೆ, ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

admin
the authoradmin

Leave a Reply

Translate to any language you want