ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು “ಎಕ್ಸ್ ಪ್ಲೋರಿಕಾ”ಸಹಕಾರಿ: ಫಾದರ್ ಫಿಲಿಕ್ಸ್ ಎಸ್.ಜೆ

ಹಾಸನ: ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಗಿಸಲು “ಎಕ್ಸ್ ಪ್ಲೋರಿಕಾ”ರೀತಿಯ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಫಾದರ್ ಫಿಲಿಕ್ಸ್ ಎಸ್.ಜೆ ಅಭಿಪ್ರಾಯಪಟ್ಟರು.
ಹಾಸನದ ಬಿ.ಕಾಟಿಹಳ್ಳಿಯಲ್ಲಿರುವ ಸಂತ ಜೋಸೆಫರ ಕಾಲೇಜಿನಲ್ಲಿ 2026 ನೇ ಸಾಲಿನ ರಾಜ್ಯಮಟ್ಟದ ಸಾಂಸ್ಕೃತಿಕ, ಕ್ರೀಡಾ ಮತ್ತು ಆಟೋ ಎಕ್ಸ್ಪೋ (ಎಕ್ಸ್ ಪ್ಲೋರಿಕಾ) “ಎಕ್ಸ್ ಪ್ಲೋರಿಕಾ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಫಾ. ಮ್ಯಾಕ್ಸಿಮ್ ಡಯಾಸ್ ಎಸ್.ಜೆ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಮತ್ತು ಸಮಗ್ರ ಬೆಳವಣಿಗೆಗೆ ಇಂತಹ ಚಟುವಟಿಕೆಗಳು ಸಹಾಯಕವಾಗುತ್ತವೆ ಎಂದು ಹೇಳಿದರು. ಕಾಲೇಜಿನ ಸ್ಟುಡೆಂಟ್ ಗೌರ್ನರ್ ಅನಿಲ್ ಎಂ.ಎಸ್ ಮಾತನಾಡಿ, ಕಾರ್ಯಕ್ರಮದ ರೂಪುರೇಷೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಸ್ಟಂಟ್, ಬಾಕ್ಸ್ ಕ್ರಿಕೆಟ್, ಇ-ಸ್ಪೋರ್ಟ್ಸ್, ಬಿಸಿನೆಸ್ ಕ್ವಿಜ್, ಚರ್ಚಾ ಸ್ಪರ್ಧೆ, ಟೀಮ್ ಬಿಲ್ಡಿಂಗ್, ಮೆಹಂದಿ, ಗುಂಪು ನೃತ್ಯ, ರೀಲ್ಸ್ ಮೇಕಿಂಗ್, ಗ್ರೂಪ್ ಸಾಂಗ್ , ಫ್ಯಾಶನ್ ವಾಕ್ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಪ್ರೇಕ್ಷಕರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ವಿವಿಧ ಪದವಿ ಕಾಲೇಜಿನ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.







