janamanakannada > Blog > Latest > Mysore > ನಿರ್ಮಲಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಎ.ಎಸ್.ಮಾನ್ವಿ 625ಕ್ಕೆ 617 ಅಂಕ
ಮೈಸೂರು: ಮೇಟಗಳ್ಳಿಯ ಬಿಎಂಸಿ ನಗರದ ನಿವಾಸಿ ಫಾಸ್ಟ್ ಫುಡ್ ವ್ಯಾಪಾರಿ ಎ.ಎಸ್.ಸತೀಶ್ ಹಾಗೂ ಸೌಮ್ಯ ದಂಪತಿಯ ದ್ವಿತೀಯ ಪುತ್ರಿ ನಗರದ ನಿರ್ಮಲಾ ಪಬ್ಲಿಕ್ ಶಾಲೆಯ ಎ.ಎಸ್.ಮಾನ್ವಿ 625ಕ್ಕೆ 617 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮರಾಗಿ ಹೊರ ಹೊಮ್ಮಿ ಸಾಧನೆ ಮಾಡಿದ್ದಾರೆ.
ಕನ್ನಡ(124), ಇಂಗ್ಲಿಷ್(98), ಹಿಂದಿ(100), ಗಣಿತ (95), ವಿಜ್ಞಾನ(100), ಸಮಾಜ ವಿಜ್ಞಾನ(100) ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಈ ಫಲಿತಾಂಶ ಖುಷಿ ತರಿಸಿದೆ. ಹೆಚ್ಚು ಅಂಕ ಬರುವ ನಿರೀಕ್ಷೆಯಿತ್ತು. ಶಾಲಾ ಶಿಕ್ಷಕ, ಪೋಷಕರ ಬೆಂಬಲವೇ ನನ್ನ ಸಾಧನೆಗೆ ಕಾರಣವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಐಎಎಸ್, ಕೆಎಎಸ್ ಆಗಬೇಕೆಂಬ ಹಂಬಲ ಇದೆ ಎಂದು ಸಂತಸ ಹಂಚಿಕೊಂಡರು.
Tags:a s manvi
admin
You Might Also Like
ಮೈಸೂರು ಅರಮನೆ ಸಿಂಹಾಸನಕ್ಕಿದೆ ಪೌರಾಣಿಕ ನಂಟು… ಇದರ ಇತಿಹಾಸವೇ ರೋಚಕ!
adminಸೆಪ್ಟೆಂಬರ್ 20, 2026
ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ
adminಸೆಪ್ಟೆಂಬರ್ 19, 2026








