
ಗದಗ: ನಗರದ ರೋಟರಿ ಗದಗ ಸೆಂಟ್ರಲ್ ವತಿಯಿಂದ ಸೇವಾಲಾಲ ನಗರದಲ್ಲಿನ ರೋಟರಿ ಭವನದಲ್ಲಿ ಚಾರ್ಟರ್ ಡೇ ಆಚರಿಸಲಾಯಿತು.
ರೋಟರಿ ಅಧ್ಯಕ್ಷ ಚೇತನ ಅಂಗಡಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿರ್ಶಿಯ ಪ್ರಸಿದ್ದ ಮಕ್ಕಳ ತಜ್ಞ ವೈದ್ಯರಾದ ರೊ. ಡಾ.ದಿನೇಶ ಆರ್ ಹೆಗಡೆ ಮತ್ತು ರೋಟರಿ ಗದಗ್ ರೆವಿನ್ಯೂ ಡಿಸ್ಟ್ರಿಕ್ಟ್ 3170ರ ಅಸಿಸ್ಟೆಂಟ್ ಗವರ್ನರ್ ವಿ.ಕೆ.ಗುರುಮಠ ಆಗಮಿಸಿದ್ದರು.
ಕೇಕ್ ಕತ್ತರಿಸುವ ಮೂಲಕ ಚಾರ್ಟರ್ ಡೇ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ.ದಿನೇಶ ಹೆಗಡೆಯವರು ರೋಟರಿಯ ಮಹತ್ವ ಮತ್ತು ತಾವು ವೈದ್ಯರಾಗಿ ರೋಟರಿಯಲ್ಲಿ ಸಲ್ಲಿಸುವ ಸೇವೆಯ ಕುರಿತು ಕೆಲವು ಆಕಸ್ಮಿಕ ಒದಗುವ ಸಂದರ್ಭಗಳನ್ನು ನಿಭಾಯಿಸಿ ಸೇವಾ ಮನೋಭಾವ ಸಾರ್ಥಕ ಪಡಿಸಿಕೊಂಡಿದ್ದನ್ನು ಹೇಳಿದರು.
ಗುರುಮಠ ಮತ್ತು ಅಧ್ಯಕ್ಷ ಚೇತನ ಅಂಗಡಿಯವರು ಚಾರ್ಟರ್ ಡೇ ಮಹತ್ವ, ಆಚರಣೆಗೆ ಬಂದ ಹಿನ್ನಲೆ ಕುರಿತು ಮಾತನಾಡಿದರು. ರೋಟರಿ ಪರಿವಾರದ ದಂಪತಿಗಳಿಗೆ ಫನ್ ಗೇಮ್ಸ್ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು, ನಂತರ ಮಿಮಿಕ್ರಿ ಶೋ ಜರುಗಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಾಜು ಉಮ್ನಾಬಾದಿ, ಖಜಾಂಚಿ ಡಾ.ಪ್ರಭು ಗಂಜಿಹಾಳ, ಮಾಜಿ ಅಸಿಸ್ಟಂಟ್ ಗವರ್ನರ್ ಎಂ.ಸಿ.ಐಲಿ, ಸುರೇಶ ಅಬ್ಬಿಗೇರಿ, ಲಿಂಗರಾಜು ಗುಡಿಮನಿ, ವಿಜಯಕುಮಾರ ಹಿರೇಮಠ, ಶ್ರೀಕಾಂತ ಲಕ್ಕುಂಡಿ, ಮಂಜುನಾಥ ಬೇಲೇರಿ, ಎಸ್.ಆಯ್.ಅಣ್ಣಿಗೇರಿ, ಪರಶುರಾಮ ನಾಯ್ಕರ್, ರಾಜಣ್ಣ ಮುಧೋಳ, ರಾಜು ಕುರಡಗಿ, ಪ್ರಕಾಶ ಉಗಲಾಟ, ಆರ್.ಬಿ.ದಾನಪ್ಪಗೌಡ್ರ , ಚಂದ್ರಗೌಡ ಹಿರೇಗೌಡರ, ಶಶಿಧರ ದಿಂಡೂರ , ಮಲ್ಲಿಕಾರ್ಜುನ ಚಂದಪ್ಪನವರ, ಮಂಜುನಾಥ ಕಬಾಡಿ, ಮುರಗೇಶ ಎಂ ಬಡ್ನಿ, ಕೆ.ವಿ.ಪಾಟೀಲ ಹಾಗೂ ರೋಟರಿ ಸದಸ್ಯರು ಮತ್ತು ಪರಿವಾರದವರು ಉಪಸ್ಥಿತರಿದ್ದರು.









