ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನರ್ ಸಂಘಟನೆಗೆ ಅಭಿಯಾನ: ಜಾರ್ಖಂಡ್ ಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್

ಹುಣಸೂರು(ಮನುಕುಮಾರ್): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಸೋನಿಯಾ ಗಾಂಧಿ, ಅವರ ನಿರ್ದೇಶನದಂತೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚಿಂತನೆಗಳನ್ನು ತಳ ಮಟ್ಟದಲ್ಲಿ ಜಾರಿಗೊಳಿಸಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನರ್ ಸಂಘಟನೆಗೆ ಅಭಿಯಾನ ಆರಂಭವಾಗಿದೆ ಎಂದು ಎಐಸಿಸಿ ಉಸ್ತುವಾರಿ ಜಾರ್ಖಂಡ್ ಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಸಂಘಟನ್ ಸೃಜನ್ ಅಭಿಯಾನ್ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸಂಘಟನೆಯ ಅತ್ಯಂತ ಪ್ರಮುಖ ಆಧಾರದಾರರಾದ ಬೂತ್ ಮಟ್ಟದ ಸದೃಢ ಕಾರ್ಯಕರ್ತರು, ಬ್ಲಾಕ್ ಅದ್ಯಕ್ಷರು, ಯುವಕಾಂಗ್ರೇಸ್, ಆದ್ದರಿಂದಲೇ ನಿಮ್ಮೊಂದಿಗೆ ಬ್ಲಾಕ್ ಮಟ್ಟದಲ್ಲಿ ಚರ್ಚಿಸಲು ಬಂದಿದ್ದೇನೆ ಕಾಂಗ್ರೆಸ್ ಸಂಘಟನೆ ಗ್ರಾಮ, ವಾರ್ಡ್ ಮತ್ತು ಬೂತ್ ಮಟ್ಟದವರೆಗೆ ಬಲಿಷ್ಠವಾ ಗಿರಬೇಕು ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರೂ ಪಕ್ಷದ ಸಿದ್ಧಾಂತಗಳು ಮತ್ತು ಜನಪರ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ಮಾಡಬೇಕು ಸಮಸ್ಯೆಗಳಿಗಾಗಿ ಹೋರಾಡಬೇಕು. ಕಾಂಗ್ರೆಸ್‌ನ ಸಿದ್ಧಾಂತಗಳಿಗೆ ಸಂಪೂರ್ಣ ಬದ್ದರಾಗಿರಬೇಕು. ನೀವು ನಿಜವಾದ ಸಂಗತಿಗಳನ್ನು ಪ್ರಾಮಾಣಿಕನಾಗಿ ನನ್ನೊಂದಿಗೆ ಹಂಚಿಕೊಂಡಾಗ ಮಾತ್ರ ನಾನು ನಿಮ್ಮ ಮಾತುಗಳನ್ನು ಸರಿಯಾದ ರೀತಿಯಲ್ಲಿ ನಾಯಕತ್ವದವರೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಅದ್ಯಕ್ಷರಾಗಿ, ಕಾರ್ಯಕರ್ತರಾಗಿ ಬಿಜೆಪಿ, ಜೆಡಿಎಸ್ ಪಕ್ಷದ ದೂರಾಡಳಿತದ ಬಗ್ಗೆ, ನಮ್ಮ ಕಾಂಗ್ರೆಸ್ ಪಕ್ಷದ ಗ್ರಾರಂಟಿ ಹಾಗೂ ಅಭಿವೃದ್ಧಿಯ ಬಗ್ಗೆ ಮನೆ-ಮನೆಗೆ ಮಾಹಿತಿ ನೀಡುವುದರಲ್ಲಿ ದೇಶ ಹಾಗೂ ರಾಜ್ಯದಲ್ಲಿ ವಿಫಲವಾಗಿರುವ ಬಗ್ಗೆ ತಿಳಿದುಕೊಂಡು ಹೈಕಮಾಂಡ್ ಗೆ ಮಾಹಿತಿ ನೀಡಲಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೀವು ಪಕ್ಷಕ್ಕಾಗಿ ಏನು ಮಾಡುತ್ತಿದ್ದಾರೆ. ಯಾವ ರೀತಿಯ ಸಂಘಟನೆಯಲ್ಲಿ ತೊಡಗಿದ್ದಾರೆ. ಹಾಗೂ ತಾಲ್ಲೂಕು, ಜಿಲ್ಲೆಯ ಕಾಂಗ್ರೆಸ್ ನ ಅಧ್ಯಕ್ಷರು ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಮಗ್ರ ಮಾಹಿತಿ ಈ ಅಭಿಯಾನ್ ದಡ್ಡಿ ಪಡೆದು ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯದಲ್ಲಿ ಸದೃಡವಾದ ಪಕ್ಷವನ್ನು ಕಟ್ಟುವ ಉದ್ದೇಶದಿಂದ ಈ ಅಭಿಯಾನ ಪ್ರಾರಂಭವಾಗಿದೆ ಎಂದರು.

ಸಂಘಟನಾ ಸೃಜನ ಅಭಿಯಾನದ ಅಂಗವಾಗಿ ನಡೆದ ವಿಧಾನಸಭಾ ಕ್ಷೇತ್ರ ಮಟ್ಟದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಹಿಳಾ, ಯುವ ಕಾಂಗ್ರೆಸ್, ಅಧ್ಯ ಕ್ಷರು, ಬ್ಲಾಕ್ ಸೇವಾ ದಳ, ಪ್ರಚಾರ ಸಮಿತಿ, ಕಾರ್ಮಿಕ ವಿಭಾಗ, ಅಲ್ಪ ಸಂಖ್ಯಾಂತರ ವಿಭಾಗ, ಹಿಂದುಳಿದ ವರ್ಗ, ಎಸ್.ಟಿ.ಎಸ್.ಸಿ ಘಟಕಗಳು, ಗ್ಯಾರಂಟಿ ಅಭಿವೃದ್ಧಿ ಸಮಿತಿ ಸದಸ್ಯರು, ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ನಿಗಮದ ಸದಸ್ಯರು, ಹಾಗೂ ವಿವಿಧ ವಿಭಾಗಗಳ ಪ್ರತಿನಿಧಿ ಗಳ ಜೊತೆಗೆ ಎಐಸಿಸಿ ಉಸ್ತುವಾರಿ ಜಾರ್ಖಂಡ್ ಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್ ರವರು ಒನ್.ಟು.ಓನ್ ಮಾಹಿತಿ ಪಡೆದರು.
ಬೂತ್ ಸಮಿತಿ ಗಳ ರಚನೆಯನ್ನು ಶೀಘ್ರು ಪೂರ್ಣ ಗೊಳಿಸಲು, ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡಲು ಹಾಗೂ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕತ್ವದ ಚಿಂತನೆಯಂತೆ ಸಂಘಟನೆ ಬಲಗೊಳಿಸಲು ತೀರ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್. ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವಪ್ರಸಾದ್, ಕೆಪಿಸಿಸಿ ವಕ್ತಾರ ಬಸವರಾಜು, ಕಾರ್ಯಧ್ಯಕ್ಷ ದೇವರಾಜ್, ಬ್ಲಾಕ್ ಅದ್ಯಕ್ಷರಾದ ಪ್ರೇಮ್ ಕುಮಾರ್, ರವಿಪ್ರಸನ್ನ, ಬಾಲ್ ಸುಂದರ್ , ಸುನೀತಾ ಜಯರಾಮೇಗೌಡ, ಮುಖಂಡರಾದ ಬಸವರಾಜ್, ಕುನ್ನೇಗೌಡ, ಗೌರಮ್ಮ ಸೋಮಶೇಖರ್, ಅಣ್ಣಯ್ಯನಾಯಕ್, ಕೆಂಪನಾಯಕ್, ಅಕ್ರಮ- ಸಕ್ರಮ ಸದಸ್ಯ ಕುಮಾರ್, ಗ್ಯಾರಂಟಿ ಅಭಿವೃದ್ಧಿ ಅದ್ಯಕ್ಷ ರಘು. ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು







