ಬೆಂಗಳೂರು: ತನ್ನ ಅತ್ಯಂತ ಜನಪ್ರಿಯ ‘ಹರ್ ಸಫರ್ ಮೇ ದಮ್ ಹೈ’ (ಪ್ರತಿ ಪ್ರಯಾಣದಲ್ಲೂ ಶಕ್ತಿಯಿದೆ) ಅಭಿಯಾನದ ಪ್ರಬಲ ಆಶಯವನ್ನು ಮುಂದುವರಿಸುತ್ತಾ, ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಗಳ ಪ್ರಮುಖ ಪ್ರಾಯೋಜಕರಾದ ‘ಅಪೊಲೊ ಟೈರ್ಸ್’, ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಪೂರ್ತಿದಾಯಕ ಯಾನದ ಮೇಲೆ ಬೆಳಕು ಚೆಲ್ಲುವ ಹೊಸ ಅಧ್ಯಾಯವನ್ನು ಅನಾವರಣಗೊಳಿಸಿದೆ.
ಈ ಅಭಿಯಾನವು ಕ್ರೀಡಾಪಟುಗಳ ಕಠಿಣ ಮತ್ತು ಹೆಚ್ಚಾಗಿ ಜಗತ್ತಿಗೆ ಕಾಣಿಸದ ಪ್ರಯಾಣವನ್ನು ಕೊಂಡಾಡುವ ಅದೇ ಉತ್ಸಾಹವನ್ನು ಮುಂದುವರಿಸಿದ್ದು, ಒಂದು ಮಾರ್ಮಿಕ ಹಾಗೂ ಸಿನಿಮಾ ಶೈಲಿಯ ಆಕರ್ಷಕ ಜಾಹೀರಾತು ಚಿತ್ರದ ಮೂಲಕ ಇದನ್ನು ಪ್ರಸ್ತುತಪಡಿಸಿದೆ. ರಾಷ್ಟ್ರೀಯ ತಾರೆಗಳಾದ ಹರ್ಮನ್‌ಪ್ರೀತ್, ಸ್ಮೃತಿ, ಜೆಮಿಮಾ, ಶೆಫಾಲಿ ಮತ್ತು ರೇಣುಕಾ ಅವರು ಜಾಗತಿಕ ಮನ್ನಣೆ ಪಡೆಯುವ ಮುನ್ನ ಸಾಗಿದ ನಿಶ್ಯಬ್ದ, ಸವಾಲಿನ ಮತ್ತು ಒಂಟಿತನದಿಂದ ಕೂಡಿದ್ದ ಹಾದಿಯನ್ನು ಈ ಚಿತ್ರವು ಆಪ್ತವಾಗಿ ಸೆರೆಹಿಡಿದಿದೆ. ಅವರ ವೈಯಕ್ತಿಕ ಹಾದಿಯ ಭಾವನಾತ್ಮಕತೆಯ ಭಾರ ಮತ್ತು ಅಂತಿಮ ಯಶಸ್ಸಿನ ವಿಜಯೋತ್ಸವವನ್ನು ಬಿಂಬಿಸುವ, ಹೃದಯಸ್ಪರ್ಶಿ ಹಿನ್ನೆಲೆ ಸಂಗೀತ ಹೊಂದಿದೆ.
ಈ ಜಾಹೀರಾತು ಈ ಚಾಂಪಿಯನ್‌ಗಳ ಆರಂಭಿಕ ದಿನಗಳ ಆಳಕ್ಕೆ ಇಳಿದು, ಅವರ ಯಶಸ್ಸನ್ನು ರೂಪಿಸಿದ ವಿಶಿಷ್ಟ ಹೋರಾಟಗಳು ಮತ್ತು ಅಚಲವಾದ ಸದೃಢತೆಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಗಂಡು ಮಕ್ಕಳ ಕ್ರಿಕೆಟ್ ಅಕಾಡೆಮಿಗಳಲ್ಲಿ ತರಬೇತಿ ಪಡೆಯಲು ಯುವ ಶೆಫಾಲಿ ತನ್ನ ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡಿದ್ದರಿಂದ ಹಿಡಿದು, ಹರ್ಮನ್‌ಪ್ರೀತ್ ತನ್ನ ಕನಸನ್ನು ನನಸಾಗಿಸಲು ಸಮಾಜದ ಸಂಪ್ರದಾಯಕ್ಕೆ ಸವಾಲೆಸಿದ್ದು ಒಳಗೊಂಡು, ಈ ಚಿತ್ರವು ಅವರ ದೃಢತೆಗೆ ಗೌರವ ಸಲ್ಲಿಸುತ್ತದೆ.
ಸ್ಮೃತಿ ತನ್ನ ಸಹೋದರನಿಂದ ಪ್ರೇರಣೆ ಪಡೆದಿದ್ದು, ಜೆಮಿಮಾ ಹುಡುಗರೊಂದಿಗೆ ಅಭ್ಯಾಸ ನಡೆಸಿದ್ದು ಮತ್ತು ರೇಣುಕಾ ತರಬೇತಿಗಾಗಿ ದೂರದ ಪ್ರಯಾಣ ಮಾಡುತ್ತಿದ್ದ ದಿನಗಳ ಹೋರಾಟವನ್ನು ಒಳಗೊಂಡಿರುವ ಈ ಚಿತ್ರವು, ಅವರ ಪ್ರತಿಯೊಂದು ಸಾಧನೆಯ ಹಿಂದಿನ ದಿಟ್ಟತನವನ್ನು ಸಂಭ್ರಮಿಸುತ್ತದೆ.
ಈ ಅಭಿಯಾನದ ಕುರಿತು, ಅಪೋಲೋ ಟೈರ್ಸ್ ಲಿಮಿಟೆಡ್‌ನ ಉಪಾಧ್ಯಕ್ಷ ಮತ್ತು ಎಂ.ಡಿ. ನೀರಜ್ ಕನ್ವರ್, ಮಾತನಾಡಿ. ‘ಹರ್ ಸಫರ್ ಮೇ ದಮ್ ಹೈ’ ಅಭಿಯಾನವು ಯಾವಾಗಲೂ ತಲುಪುವ ಗುರಿಯ ಜೊತೆಗೆ, ಅಲ್ಲಿಯವರೆಗಿನ ಪ್ರಯಾಣವನ್ನು ಸಂಭ್ರಮಿಸುವ ಉದ್ದೇಶವನ್ನು ಹೊಂದಿದೆ. ಈ ತತ್ವವನ್ನು ಮುಂದುವರಿಸುತ್ತಾ ನಮ್ಮ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಇದುವರೆಗೆ ಯಾರಿಗೂ ತಿಳಿಯದ ಕಥೆಗಳನ್ನು ಹಂಚಿಕೊಳ್ಳಲು ನಮಗೆ ಅಪಾರ ಹೆಮ್ಮೆಯಾಗುತ್ತಿದೆ.
ಧೈರ್ಯ ಮತ್ತು ದೃಢ ನಂಬಿಕೆಯಿಂದ ಕೂಡಿರುವ ಅವರ ಈ ಯಾನವು ಇಡೀ ದೇಶಕ್ಕೇ ಸ್ಫೂರ್ತಿಯ ಆಕರವಾಗಿದೆ. ಈ ಅಭಿಯಾನವು ಅವರ ಅಚಲವಾದ ಉತ್ಸಾಹಕ್ಕೆ ಸಲ್ಲಿಸುವ ಗೌರವವಾಗಿದೆ. ಅದರೊಂದಿಗೆ ದೃಢತೆ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಬೆಂಬಲಿಸುವ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ಇದು ನಾವು ಒಟ್ಟಾರೆ ಭಾರತೀಯ ಕ್ರಿಕೆಟ್‌ನ ಮೇಲೆ ಇಟ್ಟಿರುವ ಅದೇ ಉತ್ಸಾಹ ಮತ್ತು ಗೌರವವನ್ನು ತೋರ್ಪಡಿಸುತ್ತದೆ ಎಂದರು.
ಈ ಜಾಹೀರಾತು ಚಿತ್ರ ಹಿಂದಿನ ಸೃಜನಶೀಲ ದೃಷ್ಟಿಕೋನ ಕುರಿತು, ಸಿಮ್ರಾನ್ ಕನ್ವರ್ ಅವರು “ಹರ್ಮನ್‌ಪ್ರೀತ್, ಸ್ಮೃತಿ, ಜೆಮಿಮಾ, ಶೆಫಾಲಿ ಮತ್ತು ರೇಣುಕಾ ಅವರ ಅನುಭವಗಳಿಗೆ ಅತ್ಯಂತ ಆಪ್ತವಾದ ಮತ್ತು ವೈಯಕ್ತಿಕವಾದ ಚಿತ್ರವನ್ನು ರೂಪಿಸುವುದು ನಮ್ಮ ದೃಷ್ಟಿಕೋನವಾಗಿತ್ತು. ಇದು ‘ಹರ್ ಸಫರ್ ಮೇ ದಮ್ ಹೈ’ ಅಭಿಯಾನದ ಅದೇ ಮೂಲ ಆಶಯದಿಂದ ಬಂದಿದ್ದರೂ ಸಹ, ಇಲ್ಲಿನ ಕಥಾವಿಧಾನವು ಅವರ ವೈಯಕ್ತಿಕ ಹೋರಾಟಗಳು ಮತ್ತು ವಿಜಯಗಳನ್ನು ಬಿಂಬಿಸುವಂತೆ ವಿಶಿಷ್ಟವಾಗಿ ಸಿದ್ಧಪಡಿಸಲಾಗಿದೆ.
ಈ ಆಪ್ತವಾದ ಕಥೆ ಮತ್ತು ಭಾವನಾತ್ಮಕ ಹಿನ್ನೆಲೆ ಸಂಗೋತದ ಮೂಲಕ, ಪ್ರೇಕ್ಷಕರು ಭಾರತದ ಮಹಿಳಾ ಕ್ರಿಕೆಟ್‌ನ ಹಿಂದಿರುವ ನೈಜ ಹೃದಯವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ದೇಶದ ಕೋಟ್ಯಂತರ ಯುವತಿಯರಿಗೆ ಅವರ ಶ್ರಮದ ಹಾದಿಯೂ ಸಹ ಅತ್ಯಂತ ಮುಖ್ಯವಾದುದು’ ಎಂಬುದನ್ನು ಪ್ರಬಲವಾಗಿ ನೆನಪಿಸಬೇಕು ಎಂದು ನಾವು ಬಯಸಿದ್ದೇವೆ ಎಂದರು.

ಈ ಅಭಿಯಾನದ ವಿಧಾನದ ಕುರಿತು ಮಾತನಾಡುತ್ತಾ, ಅಪೋಲೋ ಟೈರ್ಸ್ ಲಿಮಿಟೆಡ್‌ನ ಮಾರ್ಕೆಟಿಂಗ್ ಗ್ರೂಪ್ ಹೆಡ್ ಉದ್ಯನ್ ಘಾಯ್ ಅವರು, “ಇದು ಕೇವಲ ಒಂದು ಸೂತ್ರವನ್ನು ನಕಲು ಮಾಡುವುದರ ಬಗ್ಗೆ ಅಲ್ಲ; ಈ ಅಭಿಯಾನವು ನಮ್ಮ ಮೂಲ ನಂಬಿಕೆಯ ಪ್ರಾಮಾಣಿಕ ವಿಸ್ತರಣೆಯಾಗಿದೆ. ಮಹಿಳಾ ಕ್ರಿಕೆಟ್‌ನ ಹಿಂದೆ ಇರುವ ಸಾಂಸ್ಕೃತಿಕ ವೇಗ ಮತ್ತು ಉತ್ಸಾಹವನ್ನು ನಿರಾಕರಿಸಲು ಸಾಧ್ಯವಿಲ್ಲ.
ನಮ್ಮ ಕಥಾವಿಧಾನವು ಅತ್ಯಂತ ನೈಜವಾಗಿರುವಂತೆ ನೋಡಿಕೊಳ್ಳುವ ಮೂಲಕ ಹಾಗೂ ಅವರ ವಿಶಿಷ್ಟ ಅನುಭವಗಳಿಗೆ ಆಳವಾಗಿ ಕನೆಕ್ಟ್ ಆಗುವಂತೆ ಮಾಡುವ ಮೂಲಕ ನಾವು ಅದಕ್ಕೆ ಗೌರವ ಸಲ್ಲಿಸಲು ಬಯಸಿದ್ದೇವೆ.
‘ಹರ್ ಸಫರ್ ಮೇ ದಮ್ ಹೈ’ ಅಭಿಯಾನದ ಈ ಹೊಸ ಅಧ್ಯಾಯದ ಮೂಲಕ, ನಾವು ಜಗತ್ತಿನ ಎಲ್ಲರಿಗೂ ಹತ್ತಿರವಾಗುವಂತಹ ದೃಢತೆಯ ಕಥೆಗಳೊಂದಿಗೆ ಪ್ರೇಕ್ಷಕರನ್ನು ತಲುಪುತ್ತಿದ್ದೇವೆ. ಇದರೊಂದಿಗೆ, ಉನ್ನತ ಮಟ್ಟಕ್ಕೆ ಬೆಳೆಯುವ ಪ್ರತಿಯೊಂದು ಸಾಧನೆಯ ಹಾದಿಯನ್ನೂ ಸಹ ಸಮಾನ ಉತ್ಸಾಹದಿಂದ ಕೊಂಡಾಡಲು ಅರ್ಹವಾಗಿದೆ ಎಂಬುದನ್ನು ನಾವು ಮತ್ತೊಮ್ಮೆ ಬಲಪಡಿಸುತ್ತಿದ್ದೇವೆಎಂದರು.
ಈ ಡಿಜಿಟಲ್-ಪ್ರಥಮ ಅಭಿಯಾನವನ್ನು ಉನ್ನತ ಪರಿಣಾಮದ ಡಿಜಿಟಲ್ ಟಚ್ ಪಾಯಿಂಟ್ ಗಳಲ್ಲಿ ಪ್ರದರ್ಶಿಸಲಾಗುತ್ತಿದ್ದು ಯೂಟ್ಯೂಬ್ ಮತ್ತು ಮೆಟಾ ಪ್ಲಾಟ್ ಫಾರಂಗಳಲ್ಲಿ ಕ್ರಿಕೆಟ್ ಉತ್ಸಾಹಿಗಳಿಗೆ ಗರಿಷ್ಠ ಪ್ರಮಾಣದಲ್ಲಿ ತಲುಪುವಂತೆ ಸಮಗ್ರ ವಿತರಣೆಯ ಕಾರ್ಯತಂತ್ರ ಹೊಂದಲಾಗಿದೆ. ಈ ಅಭಿಯಾನವು ಸ್ಥಳೀಕರಿಸಿದ ಡಿಜಿಟಲ್ ಒಒಎಚ್, ಉದ್ದೇಶಿತ ಇನ್ ಫ್ಲುಯೆನ್ಸರ್ ಸಹಯೋಗಗಳು ಮತ್ತು ಸಂವಹನೀಯ ಸಾಮಾಜಿಕ ಮಾಧ್ಯಮದ ಆಕ್ಟಿವೇಷನ್ ಗಳ ಬೆಂಬಲ ಪಡೆದಿದೆ ಎಂದು ತಿಳಿಸಿದ್ದಾರೆ.








