ArticlesDasaraLatest

ಅರಮನೆಗೆ ಮೆರಗು ತಂದ ಐದು  ಹೆಬ್ಬಾಗಿಲು ಯಾವುದು? ಇವುಗಳ ವಿಶೇಷತೆ ಏನು?

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಸುಂದರ ಅರಮನೆಯನ್ನು ನೋಡಿದ ಬಳಿಕ ಅರಮನೆಯ ಹೊರ ಭಾಗದಲ್ಲಿ ನಾಲ್ಕು ದಿಕ್ಕಿನಲ್ಲಿರುವ ಹೆಬ್ಬಾಗಿಲು ಮತ್ತು ಅರಮನೆ ಮುಂಭಾಗದಲ್ಲಿರುವ ಆನೆ ಬಾಗಿಲನ್ನು ನೋಡಿ ಅಚ್ಚರಿ ಪಡದಿರಲಾರರು.

ಮೈಸೂರು ಅರಮನೆಗೆ ಹೆಬ್ಬಾಗಿಲಾಗಿರುವ ಆನೆ ಬಾಗಿಲು ನಿಜಕ್ಕೂ ಅದ್ಭುತವಾಗಿದೆ. ದಸರಾದ ಎಲ್ಲ ಧಾರ್ಮಿಕ ಕಾರ್ಯಗಳು ಇಲ್ಲಿಯೇ ನಡೆಯುತ್ತದೆ. ಇಲ್ಲಿಯೇ ಗಜಪಡೆಗಳನ್ನು ಸ್ವಾಗತಿಸಲಾಗುತ್ತದೆ.

ಆನೆಬಾಗಿಲು ಅರಮನೆಯ ಪೂರ್ವ ದಿಕ್ಕಿನಲ್ಲಿದೆ. ಇಲ್ಲಿ ಕಂಚಿನ ಬಾಗಿಲಿದೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಎರಡು ಕಂಬಗಳಲ್ಲಿ ನಿಜವಾದ ಆನೆಗಳ ತಲೆಯನ್ನೇ ಅಲಂಕಾರಕ್ಕಾಗಿ ಅಳವಡಿಸಿರುವುದು.

ಇವುಗಳನ್ನು ಜಯ ಚಾಮರಾಜ ಒಡೆಯರ್ ಸೈನ್ಯದೊಡನೆ ಬೇಟೆಗೆ ತೆರಳಿ ಅಲ್ಲಿ ಬೇಟೆಯಾಡಿ ತಂದಿದ್ದು ಎಂದು ಹೇಳಲಾಗಿದೆ.

ಇನ್ನು ಅರಮನೆಗೆ ಇರುವ ಐದು ದ್ವಾರಗಳು ಕೂಡ ವಿಶೇಷತೆಯನ್ನು ಹೊಂದಿವೆ. ಇವುಗಳ ಪೈಕಿ ಅರಮನೆಯ ಎದುರಿನ ಪೂರ್ವಕ್ಕೆ ದೊಡ್ಡ ಕೆರೆ ಮೈದಾನ ಕಡೆಗಿನ ಜಯ ಮಾರ್ತಾಂಡ ದ್ವಾರ ಪ್ರಮುಖವಾಗಿದೆ. ದ್ವಾರದ ಎರಡು ಬದಿ ಹೂ ತೋಟವಿದೆ ಬುರುಜುಗಳಿದ್ದು ಗಮನಸೆಳೆಯುತ್ತದೆ.

ಅರಮನೆಯ ಉತ್ತರಕ್ಕೆ ಬಲರಾಮ ದ್ವಾರವಿದೆ. ಇದರ ಮೂಲಕವೇ ಜಂಬೂಸವಾರಿ ಸಾಗುತ್ತದೆ. ದ್ವಾರದ ಬದಿಯಲ್ಲಿ  ಕೋಟೆ ಆಂಜನೇಯ ಸ್ವಾಮಿ, ಗಣಪತಿ ದೇವಾಲಯವಿದೆ. ದ್ವಾರಕ್ಕೆ ಸೇರಿಕೊಂಡAತೆ ಅರಮನೆ ಆವರಣದ ಒಳಭಾಗದಲ್ಲಿ ದೊಡ್ಡ ಕನ್ನಡಿಯನ್ನಿಡಲಾಗಿದ್ದು ಇದರಲ್ಲಿ ಅರಮನೆಯ ಭವ್ಯದೃಶ್ಯವನ್ನು ವೀಕ್ಷಿಸಬಹುದಾಗಿದೆ.

ಅರಮನೆ ದಕ್ಷಿಣ ಭಾಗದಲ್ಲಿ ವರಹಾ ದ್ವಾರವಿದ್ದು,  ಈ ದ್ವಾರದ ಮೂಲಕವೇ ಪ್ರವಾಸಿಗರಿಗೆ ಅರಮನೆಗೆ ಪ್ರವೇಶ ನೀಡಲಾಗುತ್ತದೆ.

ಕರಿಕಲ್ ತೊಟ್ಟಿ ದ್ವಾರವು ನಗರ ಪಾಲಿಕೆ ಕಡೆಗೆ ಅರ್ಥಾತ್ ಸಯ್ಯಾಜಿರಾವ್ ರಸ್ತೆ ಕಡೆಗೆ ಇದೆ. ಈ ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಬ್ರಹ್ಮಪುರಿ ದ್ವಾರವು ನಗರ ಬಸ್ ನಿಲ್ದಾಣದ ಬಳಿ ಇದೆ ಈ ದ್ವಾರದ ಮೂಲಕ ಎಲ್ಲ ದಿನಗಳಲ್ಲಿ ಪ್ರವೇಶ ಇಲ್ಲ. ದಸರಾ ಸಂದರ್ಭ ದ್ವಾರ ತೆಗೆಯಲಾಗುತ್ತದೆ.

ಅರಮನೆ ಎಷ್ಟು ಸುಂದರವೋ ಅಷ್ಟೇ ವಿಶೇಷತೆಯನ್ನು ಕೂಡ ಹೊಂದಿದೆ. ಹೀಗಾಗಿಯೇ ವಿಶ್ವ ವಿಖ್ಯಾತವಾಗಿ ಗಮನಸೆಳೆಯುತ್ತದೆ. ದಸರಾ ಸಂದರ್ಭದಲ್ಲಿ ಅರಮನೆ ವಿದ್ಯುತ್ ದೀಪಗಳಿಂದ ಮಿನುಗುತ್ತಿದ್ದರೆ ಇಂದ್ರನ ಅಮರಾವತಿಯೇ ಧರೆಗಿಳಿದು ಬಂದಿದೆ ಏನೋ ಎಂಬ ಭಾವ ಮೂಡುತ್ತದೆ.

 

admin
the authoradmin

ನಿಮ್ಮದೊಂದು ಉತ್ತರ