CinemaLatest

ಸಪ್ತಸ್ವರ ಸಾಮ್ರಾಜ್ಞಿ ಆಶಾಭೋಸ್ಲೆ ಇನ್ನು ನೆನಪು ಮಾತ್ರ… ಹಾಡಿನಾಚೆಗಿನ ಬದುಕು ಹೇಗಿತ್ತು?

ಆಶಾ ಭೋಸ್ಲೆ ಅವರು ಇನ್ನಿಲ್ಲ ಎಂಬ ಸುದ್ದಿ ಹೊರ ಬಂದ ಕ್ಷಣವೇ ಸಂಗೀತ ಪ್ರೇಮಿಗಳು ಒಂದು ಕ್ಷಣ ಸ್ತಬ್ದರಾಗಿದ್ದಂತು ನಿಜ… ಅವರ ಹಾಡುಗಳನ್ನು ಕೇಳುತ್ತಾ ಗುನುಗುತ್ತಾ ಬೆಳೆದವರಿಗೆ ಏನೋ ಕಳೆದುಕೊಂಡ ಅನುಭವವಾಗುವುದು ಸಹಜ… ಹಾಡು ಅದರಾಚೆಗಿನ ಅವರ ಬದುಕಿನ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿ ಓದುಗರಿಗೆ ತಲುಪಿಸುವ ಕೆಲಸವನ್ನು ಜರೂರಾಗಿ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಮಾಡಿದ್ದಾರೆ. ಅವರಿಗೊಂದು ಮನತುಂಬಿದ ಧನ್ಯವಾದಗಳು…

ಸಪ್ತಸ್ವರ ಸಾಮ್ರಾಜ್ಞಿ ಆಶಾಭೋಸ್ಲೆ ಅವರು 8.9.1933ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು. ಇವರ ಪೋಷಕರಾದ ಶ್ರೀಮತಿ ಸೇವಂತಿ ಮತ್ತು ಖ್ಯಾತ ವಾದ್ಯಸಂಗೀತ ವಿದ್ವಾನ್ ಪಂಡಿತ್ ದೀನನಾಥ್ ಮಂಗೇಶ್ಕರ್ ರವರ ಮೂರನೇ ಪುತ್ರಿ.

ಇವರ ಇಬ್ಬರು ಸೋದರಿಯರು ಲತಾಮಂಗೇಶ್ಕರ್ ಮತ್ತು ಉಷಾಮಂಗೇಶ್ಕರ್. 16ನೇ ವಯಸ್ಸಿನಲ್ಲಿದ್ದಾಗ ಮನೆಯವರೆಲ್ಲರ ವಿರೋಧದ ನಡುವೆಯೂ ಲವ್ ಮಾಡಿ ಮದುವೆಯಾದ ಧೀರಯುವತಿ. ಅಡುಗೆಯಲ್ಲಿ ನಿಷ್ಣಾತರಾಗಿದ್ದ ಈ ಮರಾಠಿ ಮೊಗ್ಗು ತನ್ನದೇ ವಿಶಿಷ್ಟ ವಿಶೇಷ ಅಭಿರುಚಿಯ ರುಚಿರುಚಿ ಖಾದ್ಯಗಳನ್ನು ಉಣಬಡಿಸುವ ಹೋಟೆಲ್/ ಕ್ಯುಸಿನ್ ಗಳನ್ನು ಪ್ರಪಂಚದಾದ್ಯಂತ ಸ್ಥಾಪಿಸಿ ಎಲ್ಲ ಬಗೆಯ ಜನರ ಎಲ್ಲರ ನಾಲಿಗೆಯ ಅಚ್ಚುಮೆಚ್ಚಿನ ಔತಣದ ಅಮ್ಮ ಎನಿಸಿಕೊಂಡರು. ಬಹುಮುಖ ಪ್ರತಿಭೆಯ ಆಶಾಭೋಸ್ಲೆ ಹೀರೋಯಿನ್ಸ್ ಮೆಲೋಡಿ ಹಾಡಿಗೂ ಜೈ ಹೆಲೆನ್ ರಂಥ ಐಟಂ ಡ್ಯಾನ್ಸ್ ಸಾಂಗ್ಗೂ ಸೈ ಮಾತ್ರವಲ್ಲ ಉತ್ತಮ ನೃತ್ಯಗಾರ್ತಿಯೂ ಹೌದು.

ಕಳೆದ 80ವರ್ಷ ಕಾಲ ಕನ್ನಡ ಭಾಷೆ ಸೇರಿದಂತೆ ಪ್ರಪಂಚದ 22 ಭಾಷೆಗಳಲ್ಲಿ 12000ಕ್ಕೂ ಹೆಚ್ಚಿನ ಗೀತೆ-ಚಿತ್ರಗೀತೆ ಹಾಡುವ ಮೂಲಕ ಗಿನ್ನಿಸ್ ಪುಸ್ತಕದ ದಾಖಲೆಯ ಪುಟ ಸೇರಿದ ವೀರವನಿತೆ. 500ಕ್ಕೂ ಹೆಚ್ಚಿನ ಹಾಡುಗಳು ಹೆಲೆನ್ ರವರ ಡ್ಯಾನ್ಸ್ ಗೆ ಹಾಡಿದ್ದಲ್ಲದೇ ಹೆಲೆನ್ ನಟಿಸಿದ ಸಿನಿಮಾಗಳ ಪಾತ್ರಗಳಿಗೆ ಆಕೆಗೆ ಕಂಠದಾನವನ್ನೂ ಮಾಡಿದ್ದಾರೆ.

ಭಾರತ ಸರ್ಕಾರದ ಪದ್ಮವಿಭೂಷಣ ಪುರಸ್ಕಾರ, ಪ್ರತಿಷ್ಠಿತ ದಾದಾಸಾಹೇಬಫಾಲ್ಕೆ ಪ್ರಶಸ್ತಿ ಒಳಗೊಂಡಂತೆ ಹಲವಾರು ರಾಜ್ಯ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ ಪಡೆದರು. ಡಾ.ರಾಜಕುಮಾರ್ ನಟಿಸಿದ ದೂರದಬೆಟ್ಟ ಚಿತ್ರದಲ್ಲಿ ಈ ಸ್ವರ ಸರಸ್ವತಿ ಹಾಡಿದ ಕನ್ನಡ ಚಿತ್ರಗೀತೆ: “ಸವಾಲು ಹಾಕಿ ಸೋಲಿಸೊ ಎಲ್ಲರ….” ಪಿ.ಬಿ.ಶ್ರೀನಿವಾಸ್ ಜತೆ ಹಾಡಿದ ಈ ಗೀತೆಗೆ ಸಂಗೀತ ಸಾರ್ವಭೌಮ ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ್ದರು.

ಮಹಾನ್ ಗಾಯನಕಿಶೋರಿ ನಳಪಾಕ ಆಹಾರಿ ನಗುಮೊಗದ ನಾರಿ ನೃತ್ಯಕಿಶೋರಿ ಇತ್ಯಾದಿ ಪ್ರತಿಭೆಗಳ ಪರ್ವತವೇ ಆಗಿದ್ದ ಅಶಾಭೋಸ್ಲೇ 93 ವಸಂತ ಋತುಗಳನ್ನು ಕಂಡುಂಡರು. ಕಡೆಗೂ ಇವರ ತವರುಮನೆಯ ಮಂಗೇಶಿದೇವರ ಆಣತಿಯಂತೆ ಈದಿನ 12ನೇ ಏಪ್ರಿಲ್ 2026ರಂದು ಭಾನುವಾರ ಅಂಗಾಂಗ ವೈಫಲ್ಯದ ಕಾರಣ ಮುಂಬೈ ಆಸ್ಪತ್ರೇಲಿ ತಮ್ಮ ಕೊನೆ ಉಸಿರೆಳೆದರು.

ತನ್ನದೇ ಸುಮಧುರ ಕಂಠದಿಂದ ಹಾಡಿ ಕುಣಿಸುವಂತೆ, ತಲೆದೂಗುವಂತೆ ಮಾಡುತ್ತಿದ್ದ ಆಶಾ ಭೋಸ್ಲೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಸುಖಕ್ಕಿಂತ ದುಃಖವನ್ನುಂಡಿದ್ದೇ ಜಾಸ್ತಿ ಎಂದರೆ ತಪ್ಪಾಗಲಾರದು. ಏಕೆಂದರೆ ಮೊದಲ ವಿವಾಹದ ಸಂಬಂಧ ಮುರಿದು ಬಿದ್ದ ನಂತರ ಎರಡನೇ ಮದುವೆಯಾದರೂ ಸಹ ನೆಮ್ಮದಿಯ ಜೀವನ ಸಿಗಲೇಇಲ್ಲ. ಕಾಲಕ್ರಮೇಣ ಹೆತ್ತ ಮಗಳು ಆತ್ಮಹತ್ಯೆಗೆ ಶರಣಾದಳು, ಓರ್ವ ಮಗನು ಕ್ಯಾನ್ಸರ್ ನಂಥ  ಭಯಂಕರ ಖಾಯಿಲೆಗೆ ತುತ್ತಾದನು. ಇಷ್ಟೆಲ್ಲ ನೋವಿನ ದುರಂತ ಜೀವನದ ನಡುವೆಯೂ ಸದಾ ನಗುನಗುತ್ತ ಎಲ್ಲರನ್ನು ನಗಿಸುತ್ತಿದ್ದ ದುರಂತಮಯ ಜೀವನದ ಜೀವ  ಅವರಾಗಿದ್ದರು. ಆದರೆ ನಟಸಾರ್ವಭೌಮ ಡಾ.ರಾಜ್‍ಕುಮಾರ್ ನಿಧನರಾದ ದಿನಾಂಕದಂದೇ ಅವರು ನಿಧನರಾದುದು ಎಂಥ ಅದ್ಭುತ ಆಶ್ಚರ್ಯ?!

ತುಂಬಿದ ಕುಟುಂಬದಲ್ಲಿ ಹುಟ್ಟಿಬೆಳೆದ ಆಶಾಭೋಸ್ಲೆ ತಮ್ಮದೇ ಆದ ತುಂಬು ಜೀವನ ನಡೆಸುತ್ತಾ ಇಳಿ ವಯಸ್ಸಿನಲ್ಲಿ ಮಕ್ಕಳು ಮೊಮ್ಮಕ್ಕಳು ಬಂಧು ಬಳಗದ ಜೊತೆಯಲ್ಲಿ ಖುಷಿಖುಷಿಯಲ್ಲಿ ಬದುಕು ಸಾಗಿಸುವಾಗಲೆ ಆಕಾಶವಾಣಿಯು: “ಇಹಲೋಕದಲ್ಲಿ ಹಾಡಿ ಕುಣಿದುದು ಸಾಕು, ಸ್ವರ್ಗಲೋಕದಲ್ಲೂ ಹಾಡಿ ಕುಣಿದು ಎಲ್ಲರನ್ನು ಮನರಂಜಿಸಲು ಬನ್ನಿರಿ” ಎಂದು ವಿಧಿಯು ನೀಡಿದ ಆಹ್ವಾನದ ಮೇರೆಗೆ ಈ ಲೋಕದ ಸಂಬಂಧ ಮುಗಿಸಿ ಪರಲೋಕ ಸೇರಿದರೂ, ಇಡೀವಿಶ್ವದ ಸ್ವರಸಾಮ್ರಾಜ್ಞಿಯು ಆಚಂದ್ರಾರ್ಕ ಅಜರಾಮರ.

ಗಾನಕೋಗಿಲೆಯೆ ನಿಮಗಿದೋ ಕುಮಾರಕವಿಯ ಮನಃಪೂರ್ವಕ ಶ್ರದ್ಧಾಂಜಲಿ, ಹೃದಯಪೂರ್ವಕ ಭಾಷ್ಪಾಂಜಲಿ…

admin
the authoradmin

19 Comments

  • A wonderful and an extraordinary writing on ASHA BHOSLE the LEGENDARY PLAYBACK SINGER of INDIAN CINEMAS. Heart-felt congratulations dear NATRAJ 👏. K.C.BELLIYAPPA, (former Vice chancellor, Arunachal Pradesh Central university) Mysore city south, MYSORE

  • A wonderful article with an extraordinary writing style on ASHA BHOSLE the LEGENDARY PLAYBACK SINGER of INDIAN CINEMAS. Heart-felt congratulations dear NATRAJ 👏. K.C.BELLIYAPPA, (former Vice chancellor, Arunachal Pradesh Central university) Mysore city south, MYSORE

  • Bollywood, Sandalwood matthu Bharathiya cinema fieldna ever green playback singer ASHA BHOSLE ravara article excellent and exciting sir 😀 👏 👍. Rajaram bhosle, shivaji floor & huller mills, mission hospital road, mandi mohalla Mysore

  • Bollywood, Sandalwood matthu Bharathiya cinema fieldna ever green playback singer ASHA BHOSLE ravara article excellent and exciting sir 😀 👏 👍. Very much Thanks to shri nataraj kavigalu. Rajaram bhosle, Chatrapati Shivaji floor & huller mills, Mission hospital road, Mandi mohalla Mysore city.

  • ಸಪ್ತಸ್ವರ ಸಾಮ್ರಾಜ್ಞಿ ಎಂಬುದು ಸಮಯೋಚಿತ-ಸಂದರ್ಭೋಚಿತ ಬರವಣಿಗೆ.
    ಗಾನಕೋಗಿಲೆ ಲತಾಜೀಯವರ ಸೋದರಿ ಆಶಾಭೋಸ್ಲೆಯವರ ಕುರಿತಾದ ಕುಮಾರಕವಿಯವರ ಈ ಲೇಖನ ಅಮೋಘ ಹಾಗೂ ಅಧ್ಬುತ. ಧನ್ಯವಾದಗಳು ಸರ್.
    ಗಮಕ ವಾಚನ ವಿದ್ವಾನ್ ರಾ.ರಾಮಕೃಷ್ಣ, ಬೋಗಾಧಿ ಎರಡನೇ ಹಂತ, ಮೈಸೂರು.

  • ಗಾಯನ ಕೋಗಿಲೆ ಆಶಾ ಭೋಸ್ಲೆಯವರ ಬಗ್ಗೆ ಕುಮಾರಕವಿಯವರ ಲೇಖನದ ಬಗ್ಗೆ ಎರಡನೇ ಮಾತೇಇಲ್ಲ. ಬರವಣಿಗೆಯ ಶೈಲಿ ಮತ್ತು ಪದಪುಂಜಗಳು ಸಮರ್ಥ ಶ್ಲಾಘನೀಯ. ಅನೇಕಾನೇಕ ವಂದನೆಗಳು, ಸತ್ಯನಾರಾಯಣ, ಸರಸ್ವತಿಪುರದ ಕುವೆಂಪು ನಗರ ನಿಯರ್ ಕಾಮಾಕ್ಷಿ ಆಸ್ಪತ್ರೆ, ಮೈಸೂರು.

  • ಸಪ್ತಸ್ವರ ಸಾಮ್ರಾಜ್ಞಿ ಎಂಬುದು ಸಮಯೋಚಿತ-ಸಂದರ್ಭೋಚಿತ ಬರವಣಿಗೆ.
    ಗಾನಕೋಗಿಲೆ ಲತಾಜೀಯವರ ಸೋದರಿ ಆಶಾಭೋಸ್ಲೆಯವರ ಕುರಿತಾದ ಕುಮಾರಕವಿಯವರ ಈ ಲೇಖನ ಅಮೋಘ ಹಾಗೂ ಅಧ್ಬುತ. ಧನ್ಯವಾದಗಳು ಸರ್. ಗಮಕ ವಿದ್ವಾನ್ ರಾ.ರಾಮಕೃಷ್ಣ, ಬೋಗಾಧಿ 2ನೇ ಹಂತ, ಮೈಸೂರು.

  • Very much informative article about legendary PBS Asha Bhosleji. Fantastic writeup by NATRAJ sir 👏 👍 👌 🙌 😀
    Srikanth rathod, Navi Mumbai, Maharashtra

  • Very much informative article about legendary PBS Asha Bhosleji. Fantastic writeup by KUMARAKAVI NATARAJ sir 👏 👍 👌 🙌 😀. Srikanth rathod, Navi Mumbai, Maharashtra

  • ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಬಿ.ಎಂ.ಲವಕುಮಾರ್, ಬನ್ನೂರು ಕೆ.ರಾಜು, ಕಾಳಿಹುಅಂಡಿ ಶಿವಕುಮಾರ್ ಕುಮಾರಕವಿ ನಟರಾಜ ಮುಂತಾದ ಎಲ್ಲರ ಲೇಖನಗಳು ಅತಿಉತ್ತಮ. ಆದರೆ ನಟರಾಜ ಕವಿಗಳು ಬರೆಯುವ ಗದ್ಯ-ಪದ್ಯ ಎರಡೂ ಪ್ರಾಕಾರಗಳಲ್ಲಿ ನಮ್ಮ ರಾಜ್ಯದ, ದೇಶದ, ಪ್ರಪಂಚದ, ಸಾಮಾಜಿಕ, ರಾಜಕೀಯ, ಕ್ರೀಡೆ, ಪತ್ರಿಕೋದ್ಯಮ, ಸಿನಿಮ, ವ್ಯಕ್ತಿತ್ವ, ಸ್ಥಳಮಹಿಮೆ, ಆಧ್ಯಾತ್ಮಿಕ, ಸಾಧಕರು, ಹೀಗೆ ಎಲ್ಲಾ ಕ್ಷೇತ್ರದ ಬಗ್ಗೆ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಕವನ, ಲೇಖನ, ವಿಮರ್ಶೆ, ದಾಖಲೆ, ಅಂಕಿ-ಅಂಶ, ಸರಳತೆ, ಶೈಲಿ, ಸಿರಿಕನ್ನಡ ಭಾಷೆಯಲ್ಲಿ ಜೋಡಿಸುವ ಪದಪುಂಜ, ಪ್ರಾಸ, ಪ್ಯಾರಾಗ್ರಾಫ್, ಎಲ್ಲವೂ ವಿಶೇಷ ವಿಶಿಷ್ಟ ಅರ್ಥಪೂರ್ಣ. ಕುಮಾರಕವಿಯವರ ಪ್ರತಿಯೊಂದು ಲೇಖನವೂ ಒಂದಲ್ಲಒಂದು ರೀತಿಯಲ್ಲಿ ಓದಿಸಿಕೊಂಡು ಹೋಗುವಂಥ ಆಕರ್ಷಕ ರೀತಿಯಲ್ಲಿರುತ್ತದೆ. ಹೀಗಾಗಿ ಈ ಅಭಿಪ್ರಾಯ ಬರೆದಿರುವೆ. ಇದು ಖಂಡಿತ ಹೊಗಳಿಕೆಯಲ್ಲ. ವಾಸ್ತವ ಏನೆಂದರೆ ಕುಮಾರಕವಿ ಪರಿಚಯ ಕಿಂಚಿತ್ತೂ ನನಗಿಲ್ಲ, ಅವರನ್ನು ನೋಡಿಯೂ ಇಲ್ಲ, ಅವರ ಬಗ್ಗೆ ಯಾರೂ ನನಗೆ ಶಿಫಾರಸ್ಸು ಮಾಡಿಲ್ಲ, ಮರೆತಿದ್ದೆ, ಇದಕ್ಕೆಲ್ಲ ಕಾರಣ ಅಥವ ಸ್ಫೂರ್ತಿ ಎಂದರೆ ಇವರ ಇತ್ತೀಚಿನ ಲೇಖನಗಳು ಅದರಲ್ಲೂ ಈಗ ನಾನು ಓದಿದ ಆಶಾಭೋಸ್ಲೆಯವರ ಅಮೋಘ ಲೇಖನ. ಕಣ್ತುಂಬಿ ಮನತುಂಬಿ ಬಂತು. ಜನಮನ ಕನ್ನಡ ಪತ್ರಿಕೆಯ ಸಂಪಾದಕರಿಗೆ ಮತ್ತು ಕುಮಾರಕವಿ ಸೇರಿದಂತೆ ಪ್ರತಿಯೊಬ್ಬ ಲೇಖಕರಿಗೂ ಮುಂಬೈ ಕನ್ನಡಿಗನ ಮನಃಪೂರ್ವಕ ಧನ್ಯವಾದಗಳು ಅಭಿಷೇಕ್ ಶೆಟ್ಟಿ, ಬಾಂದ್ರಾ(ಪಶ್ಚಿಮ)ಮುಂಬೈ ಮಹಾನಗರ, ಮಹಾರಾಷ್ಟ್ರ.

  • ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಬಿ.ಎಂ.ಲವಕುಮಾರ್, ಬನ್ನೂರು ಕೆ.ರಾಜು, ಕಾಳಿಹುಂಡಿ ಶಿವಕುಮಾರ್ ಮುಂತಾದ ಎಲ್ಲರ ಲೇಖನಗಳು ಅತಿಉತ್ತಮ. ಆದರೆ ನಟರಾಜ ಕವಿಗಳು ಬರೆಯುವ ಗದ್ಯ-ಪದ್ಯ ಎರಡೂ ಪ್ರಾಕಾರಗಳಲ್ಲಿ ನಮ್ಮ ರಾಜ್ಯದ, ದೇಶದ, ಪ್ರಪಂಚದ, ಸಾಮಾಜಿಕ, ರಾಜಕೀಯ, ಕ್ರೀಡೆ, ಪತ್ರಿಕೋದ್ಯಮ, ಸಿನಿಮ, ವ್ಯಕ್ತಿತ್ವ, ಸ್ಥಳಮಹಿಮೆ, ಆಧ್ಯಾತ್ಮಿಕ, ಸಾಧಕರು, ಹೀಗೆ ಎಲ್ಲಾ ಕ್ಷೇತ್ರದ ಬಗ್ಗೆ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಕವನ, ಲೇಖನ, ವಿಮರ್ಶೆ, ದಾಖಲೆ, ಅಂಕಿ-ಅಂಶ, ಸರಳತೆ, ಶೈಲಿ, ಸಿರಿಕನ್ನಡ ಭಾಷೆಯಲ್ಲಿ ಜೋಡಿಸುವ ಪದಪುಂಜ, ಪ್ರಾಸ, ಪ್ಯಾರಾಗ್ರಾಫ್, ಎಲ್ಲವೂ ವಿಶೇಷ ವಿಶಿಷ್ಟ ಅರ್ಥಪೂರ್ಣ. ಕುಮಾರಕವಿಯವರ ಪ್ರತಿಯೊಂದು ಲೇಖನವೂ ಒಂದಲ್ಲಒಂದು ರೀತಿಯಲ್ಲಿ ಓದಿಸಿಕೊಂಡು ಹೋಗುವಂಥ ಆಕರ್ಷಕ ರೀತಿಯಲ್ಲಿರುತ್ತದೆ. ಹೀಗಾಗಿ ಈ ಅಭಿಪ್ರಾಯ ಬರೆದಿರುವೆ. ಇದು ಖಂಡಿತ ಹೊಗಳಿಕೆಯಲ್ಲ. ವಾಸ್ತವ ಏನೆಂದರೆ ಕುಮಾರಕವಿ ಪರಿಚಯ ಕಿಂಚಿತ್ತೂ ನನಗಿಲ್ಲ, ಅವರನ್ನು ನೋಡಿಯೂ ಇಲ್ಲ, ಅವರ ಬಗ್ಗೆ ಯಾರೂ ನನಗೆ ಶಿಫಾರಸ್ಸು ಮಾಡಿಲ್ಲ, ಮರೆತಿದ್ದೆ, ಇದಕ್ಕೆಲ್ಲ ಕಾರಣ ಅಥವ ಸ್ಫೂರ್ತಿ ಎಂದರೆ ಇವರ ಇತ್ತೀಚಿನ ಲೇಖನಗಳು ಅದರಲ್ಲೂ ಈಗ ನಾನು ಓದಿದ ಆಶಾಭೋಸ್ಲೆಯವರ ಅಮೋಘ ಲೇಖನ. ಕಣ್ತುಂಬಿ ಮನತುಂಬಿ ಬಂತು. ಜನಮನ ಕನ್ನಡ ಪತ್ರಿಕೆಯ ಸಂಪಾದಕರಿಗೆ ಮತ್ತು ಕುಮಾರಕವಿ ಸೇರಿದಂತೆ ಪ್ರತಿಯೊಬ್ಬ ಲೇಖಕರಿಗೂ ಮುಂಬೈ ಕನ್ನಡಿಗನ ಮನಃಪೂರ್ವಕ ಧನ್ಯವಾದಗಳು ಅಭಿಷೇಕ್ ಶೆಟ್ಟಿ, ಬಾಂದ್ರಾ(ಪಶ್ಚಿಮ)ಮುಂಬೈ, ಮಹಾರಾಷ್ಟ್ರ.

  • ದೈಹಿಕವಾಗಿ ಪ್ರಪಂಚ ತೊರೆದ ಆಶಾಭೋಸ್ಲೆಯವರ ಕುರಿತು ನಟರಾಜಕವಿಗಳು ಬರೆದ ಶ್ರೇಷ್ಠ ಲೇಖನದ ಬಗ್ಗೆ ಮುಂಬೈನ ಕನ್ನಡ ಪುತ್ರ ಅಭಿಷೇಕ್ ಶೆಟ್ಟಿಯವರ ಅನಿಸಿಕೆ ಅಭಿಪ್ರಾಯ ಸರಿಯಾಗೇ ಇದೆ. ಇದೇ ನನ್ನದೂ ಅಭಿಪ್ರಾಯ ಹಾಗೂ ಆಶಯ. ಎಲ್ಲರಿಗೂ ವಂದನೆಗಳು. ಶ್ರೀಮತಿ ಉಮಾಶಿವಕುಮಾರ್, ಬೆಳಗಾವಿ.

  • ನಿಮ್ಮ ಪತ್ರಿಕೆಯ ಪ್ರತಿಯೊಂದು ಅಂಕಣ, ಬರಹ, ವಿಚಾರ, ಕವನ, ಕವಿತೆ ಎಲ್ಲವೂ ಸೂಪರ್ ಡೂಪರ್, ಇದೇ ರೀತಿಯಲ್ಲಿ ಇವತ್ತಿನ ಆಶಾಭೋಸ್ಲೆಯವರ ಲೇಖನವೂ ಸೂಪರ್….ಆಗಿದೆ. ಲೇಖಕ ಮತ್ತು ಪ್ರಕಾಶಕರಿಗೆ ಧನ್ಯವಾದಗಳು. ಉಮಾಪತಿ, ಮಾಜಿ ಯೋಧ, ಓರ್ಗಾವ್, ಕೆಜಿಎಫ್, ಕೋಲಾರ.

  • ನಿಮ್ಮ ಪತ್ರಿಕೆಯ ಪ್ರತಿಯೊಂದು ಅಂಕಣ, ಬರಹ, ವಿಚಾರ, ಕವನ, ಕವಿತೆ ಎಲ್ಲವೂ ಸೂಪರ್ ಡೂಪರ್, ಇದೇ ರೀತಿಯಲ್ಲಿ ಇವತ್ತಿನ ಆಶಾಭೋಸ್ಲೆಯವರ ಲೇಖನವೂ ಸೂಪರ್….ಆಗಿದೆ. ಲೇಖಕ ಮತ್ತು ಪ್ರಕಾಶಕರಿಗೆ ಧನ್ಯವಾದಗಳು. ಉಮಾಪತಿ, ಮಾಜಿ ಯೋಧ, ಓರ್ಗಾವ್, ಕೆಜಿಎಫ್, ಕೋಲಾರ, ಕರ್ನಾಟಕ.

  • ದೈಹಿಕವಾಗಿ ಪ್ರಪಂಚ ತೊರೆದ ಆಶಾಭೋಸ್ಲೆಯವರ ಕುರಿತು ನಟರಾಜಕವಿಗಳು ಬರೆದ ಶ್ರೇಷ್ಠ ಲೇಖನದ ಬಗ್ಗೆ ಮುಂಬೈನ ಕನ್ನಡ ಪುತ್ರ ಅಭಿಷೇಕ್ ಶೆಟ್ಟಿಯವರ ಅನಿಸಿಕೆ ಅಭಿಪ್ರಾಯ ಸರಿಯಾಗೇ ಇದೆ. ಇದೇ ನನ್ನದೂ ಅಭಿಪ್ರಾಯ ಹಾಗೂ ಆಶಯ. ಎಲ್ಲರಿಗೂ ವಂದನೆಗಳು. ಶ್ರೀಮತಿ ಉಮಾ ಶಿವಕುಮಾರ್, ಬೆಳಗಾವಿ.

  • ದೈಹಿಕವಾಗಿ ಪ್ರಪಂಚ ತೊರೆದ ಆಶಾಭೋಸ್ಲೆಯವರ ಕುರಿತು ನಟರಾಜಕವಿಗಳು ಬರೆದ ಶ್ರೇಷ್ಠ ಲೇಖನದ ಬಗ್ಗೆ ಮುಂಬೈನ ಕನ್ನಡ ಪುತ್ರ ಅಭಿಷೇಕ್ ಶೆಟ್ಟಿಯವರ ಅನಿಸಿಕೆ ಅಭಿಪ್ರಾಯ ಸರಿಯಾಗೇ ಇದೆ. ಇದೇ ನನ್ನದೂ ಅಭಿಪ್ರಾಯ ಹಾಗೂ ಆಶಯ. ಎಲ್ಲರಿಗೂ ವಂದನೆಗಳು. ಉಮಾ ಶಿವಕುಮಾರ್, ಬೆಳಗಾವಿ.

  • ಈ ಹಿಂದೆ ನಮ್ಮ ತಂದೆ ಮತ್ತು ನಮ್ಮ ಸಂಪಾದಕತ್ವದ “ವರ್ತಮಾನ್” ದಿನ ಪತ್ರಿಕೆಯಲ್ಲಿ ಕುಮಾರಕವಿ ಬೋ.ನಾ.ನಟರಾಜರು ಕವಿತೆ, ಲೇಖನ, ಚುಟುಕು ಕಥನಕವನ, ಸಿನಿಮಾರಂಗದ “ಸಮಗ್ರ ಕನ್ನಡ ಚಿತ್ರಾವಲೋಕನ” (ಪ್ರತಿ ಶುಕ್ರವಾರ) “ಅನುಭವಾಮೃತ ಅನರ್ಘ್ಯರತ್ನಗಳು”(ಪ್ರತಿ ಮಂಗಳವಾರ) ಹಾಗೂ ಪ್ರತಿವರ್ಷ ಆಗಸ್ಟ್ 15ರ ಸ್ವತಂತ್ರ ದಿನಾಚರಣೆ ವಿಶೇಷ ಸಂಚಿಕೆಯಲ್ಲೂ ನೂರಾರು ಲೇಖನ, ಸ್ಥಿರಶೀರ್ಷಿಕೆ ಅಂಕಣವನ್ನು ಅಂದಾಜು 35 ವರ್ಷಕಾಲ ಬರೆದಿದ್ದಾರೆ. ಪ್ರಸ್ತುತ ಅತಿಹೆಚ್ಚಿನ ಸಾಧನೆಯೊಂದಿಗೆ ಬಹಳಎತ್ತರಕ್ಕೆಬೆಳೆದಿರುವ ನನಗಿಂತ ಕಿರಿಯ ವಯಸ್ಸಿನ ಇವರಿಗೆ ದೇವರು ಆರೋಗ್ಯ ಸೌಖ್ಯ ಆಯುಷ್ಯ ನೆಮ್ಮದಿ ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. ಅಂದಹಾಗೆ ಜನಮನ ಕನ್ನಡ ಪತ್ರಿಕೆಯಲ್ಲಿ ಬರುವ ಕುಮಾರಕವಿಯ ಎಲ್ಲ ಬರವಣಿಗೆಯು ಅಮೋಘ ಅಧ್ಬುತ. ಈಗಷ್ಟೇ ಆಶಾಭೋಸ್ಲೆಯವರ ಲೇಖನ ಓದಿದೆ, ಸಮರ್ಥ ವಾಗಿ ಬರೆದಿದ್ದಾರೆ, ಸಂತೋಷವಾಯ್ತು.-ಎಂ.ಟಿ.ಜಯರಾಮ್, ಬೃಂದಾವನ ಬಡಾವಣೆ, ಮೈಸೂರು.

  • ಕುಮಾರಕವಿ ಬೋ.ನಾ.ನಟರಾಜರು ನನಗೆ ಚಿರಪರಿಚಿತರಾದ ಬಹುಮುಖ ಪ್ರತಿಭೆಯ ವ್ಯಕ್ತಿ-ಶಕ್ತಿ, ವಾಗ್ಮಿಯೂ ಹೌದು. ಈ ಹಿಂದೆ ನಮ್ಮ ತಂದೆಯವರ ಮತ್ತು ಆನಂತರ ನನ್ನ ಸಂಪಾದಕತ್ವದ “ವರ್ತಮಾನ್” ದಿನಪತ್ರಿಕೆಯಲ್ಲಿ ಕವಿತೆ, ಲೇಖನ, ಚುಟುಕು ಕಥನಕವನ, ಸಿನಿಮಾರಂಗದ “ಸಮಗ್ರ ಕನ್ನಡ ಚಿತ್ರಾವಲೋಕನ” (ಪ್ರತಿ ಶುಕ್ರವಾರ) “ಅನುಭವಾಮೃತ ಅನರ್ಘ್ಯರತ್ನಗಳು”(ಪ್ರತಿ ಮಂಗಳವಾರ) ಹಾಗೂ ಪ್ರತಿವರ್ಷ ಆಗಸ್ಟ್ 15ರ ಸ್ವತಂತ್ರ ದಿನಾಚರಣೆ ವಿಶೇಷ ಸಂಚಿಕೆಯಲ್ಲೂ ನೂರಾರು ಲೇಖನ, ಸ್ಥಿರಶೀರ್ಷಿಕೆ ಅಂಕಣವನ್ನು ಅಂದಾಜು 35 ವರ್ಷಕಾಲ ಬರೆದಿದ್ದಾರೆ. ಪ್ರಸ್ತುತ ಅತಿಹೆಚ್ಚಿನ ಸಾಧನೆಯೊಂದಿಗೆ ಬಹಳಎತ್ತರಕ್ಕೆಬೆಳೆದಿರುವ ನನಗಿಂತ ಕಿರಿಯ ವಯಸ್ಸಿನ ಇವರಿಗೆ ದೇವರು ಆರೋಗ್ಯ ಸೌಖ್ಯ ಆಯುಷ್ಯ ನೆಮ್ಮದಿ ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. ಅಂದಹಾಗೆ ಜನಮನ ಕನ್ನಡ ಪತ್ರಿಕೆಯಲ್ಲಿ ಬರುವ ಕುಮಾರಕವಿಯ ಎಲ್ಲ ಬರವಣಿಗೆಯು ಅಮೋಘ ಅಧ್ಬುತ. ಈಗಷ್ಟೇ ಆಶಾಭೋಸ್ಲೆಯವರ ಲೇಖನ ಓದಿದೆ, ಸಮರ್ಥ ವಾಗಿ ಬರೆದಿದ್ದಾರೆ, ಸಂತೋಷವಾಯ್ತು.-ಎಂ.ಟಿ.ಜಯರಾಮ್, ಬೃಂದಾವನ ಬಡಾವಣೆ, ಮೈಸೂರು.

  • ಕುಮಾರಕವಿ ಬೋ.ನಾ.ನಟರಾಜರು ನನಗೆ ಚಿರಪರಿಚಿತರಾದ ಬಹುಮುಖ ಪ್ರತಿಭೆಯ ವ್ಯಕ್ತಿ-ಶಕ್ತಿ, ವಾಗ್ಮಿಯೂ ಹೌದು. ಈ ಹಿಂದೆ ನಮ್ಮ ತಂದೆಯವರ ಮತ್ತು ಆನಂತರ ನನ್ನ ಸಂಪಾದಕತ್ವದ “ವರ್ತಮಾನ್” ದಿನಪತ್ರಿಕೆಯಲ್ಲಿ ಕವಿತೆ, ಲೇಖನ, ಚುಟುಕು ಕಥನಕವನ, ಸಿನಿಮಾರಂಗದ “ಸಮಗ್ರ ಕನ್ನಡ ಚಿತ್ರಾವಲೋಕನ” (ಪ್ರತಿ ಶುಕ್ರವಾರ) “ಅನುಭವಾಮೃತ ಅನರ್ಘ್ಯರತ್ನಗಳು”(ಪ್ರತಿ ಮಂಗಳವಾರ) ಹಾಗೂ ಪ್ರತಿವರ್ಷ ಆಗಸ್ಟ್ 15ರ ಸ್ವತಂತ್ರ ದಿನಾಚರಣೆ ವಿಶೇಷ ಸಂಚಿಕೆಯಲ್ಲೂ ನೂರಾರು ಲೇಖನ, ಸ್ಥಿರಶೀರ್ಷಿಕೆ ಅಂಕಣವನ್ನು ಅಂದಾಜು 35 ವರ್ಷಕಾಲ ಬರೆದಿದ್ದಾರೆ. ಪ್ರಸ್ತುತ ಅತಿಹೆಚ್ಚಿನ ಸಾಧನೆಯೊಂದಿಗೆ ಬಹಳಎತ್ತರಕ್ಕೆಬೆಳೆದಿರುವ ನನಗಿಂತ ಕಿರಿಯ ವಯಸ್ಸಿನ ಇವರಿಗೆ ದೇವರು ಆರೋಗ್ಯ ಸೌಖ್ಯ ಆಯುಷ್ಯ ನೆಮ್ಮದಿ ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. ಅಂದಹಾಗೆ ಜನಮನ ಕನ್ನಡ ಪತ್ರಿಕೆಯಲ್ಲಿ ಬರುವ ಕುಮಾರಕವಿಯ ಎಲ್ಲ ಬರವಣಿಗೆಯು ಅಮೋಘ ಅಧ್ಬುತ. ಈಗಷ್ಟೇ ಆಶಾಭೋಸ್ಲೆಯವರ ಲೇಖನ ಓದಿದೆ, ಸಮರ್ಥ ವಾಗಿ ಬರೆದಿದ್ದಾರೆ, ಸಂತೋಷವಾಯ್ತು.-ಎಂ.ಟಿ.ಜಯರಾಮ್, ಬೃಂದಾವನ ಬಡಾವಣೆ, 4ನೇಹಂತ, ಮೈಸೂರು.

Leave a Reply

Translate to any language you want