LatestMysore

ಸೇವಾಕಾರ್ಯಗಳೊಂದಿಗೆ  ಎಸ್.ಬಸವರಾಜು ರವರ  ಸಂಭ್ರಮದ ಹುಟ್ಟುಹಬ್ಬಾಚರಣೆ

ಮೈಸೂರು(ಹೆಚ್.ಪಿ.ನವೀನ್ ಕುಮಾರ್) : ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸಲಾಯಿತು.

ಸಾವಿರಾರು ಜನರಿಗೆ ಅನ್ನದಾನ ಮಾಡಲಾಯಿತು. ಜತೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನೂರಾರು ಜನರು ರಕ್ತದಾನ ಮಾಡಿದರು. ಬಸವಮಾರ್ಗ ನಾಲ್ಕು ಶಾಖೆಯಲ್ಲೂ ಕೇಕ್ ಕಟ್ ಮಾಡಿಸಿ ಹಾರ, ತುರಾಯಿ ಹಾಕಿ ಅಭಿಮಾನಿಗಳು  ಸನ್ಮಾನ ಮಾಡಿದರು. ಪಟಾಕಿ ಹೊಡೆದು ಸಂಭ್ರಮಿಸಿದರು.

ನಾನು 17 ವರ್ಷಗಳ ಕಾಲ ಕುಡಿತದ ಚಟಕ್ಕೆ ದಾಸನಾಗಿದ್ದೆ. ಆ ಸಮಯದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೆ. ಆ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬವನ್ನು ಮದ್ಯಪಾನದೊಂದಿಗೆ ಆಚರಿಸಲಾಗುತ್ತಿತ್ತು. ನಾನು ಕುಡಿದು, ಇತರರಿಗೂ ಕುಡಿಸುತ್ತಿದ್ದ ಆಚರಣೆಯಾಗಿತ್ತು. ಆದರೆ ಈಗ ವ್ಯಸನ ಬಿಟ್ಟಬೇಲೆ ನನ್ನ ಜನ್ಮದಿನದ ಪರಿಕಲ್ಪನೆ ಬದಲಾಗಿದೆ.

ಸ್ನೇಹಿತರು, ಸಿಬ್ಬಂದಿಗಳು ಹಾಗೂ ಅಭಿಮಾನಿಗಳು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಕುಡಿತ ಬಿಟ್ಟರೆ ಎಲ್ಲವೂ ಸಿಗುತ್ತದೆ ಎನ್ನುವುದಕ್ಕೆ ನಾನೇ ಸ್ಪಷ್ಟ ಉದಾಹರಣೆ. ನಮ್ಮಂತ ಅಮಲು ರೋಗಿಗಳು ವ್ಯಸನಮುಕ್ತ ಜೀವನ ಮಾಡುವುದೇ ದೊಡ್ಡ ಸಾಧನೆ. ನನ್ನ ಜನ್ಮದಿನವನ್ನು ಈ ದಿನ ವಿಶೇಷವಾಗಿ ಆಚರಿಸಲಾಗುತ್ತದೆ. ಇದಕ್ಕೆ ನಾನು ಸದಾಕಾಲ ಋಣಿಯಾಗಿರುತ್ತೇನೆ ಎಂದು ಭಾವುಕರಾದರು.

admin
the authoradmin

Leave a Reply

Translate to any language you want