FoodLatest

ಬ್ರೆಡ್ ಬದಲಿಗೆ ಬ್ರೆಡ್ ರೋಸ್ಟ್ ಸೇವಿಸಿ… ಇದನ್ನು ತಯಾರಿ ಮಾಡೋದು ಸುಲಭ

ಕೆಲವೊಮ್ಮೆ ಕೈಗೆ ಸಿಕ್ಕಿದನ್ನು ಸೇವಿಸಿ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ  ಹೋಗಬೇಕಾದ  ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಇದರ ನಡುವೆ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಮನೆಯಲ್ಲಿರುವ ಬ್ರೆಡ್ ಹಸಿವು ತಣಿಸಿರುತ್ತದೆ.   ಕೆಲವರು ಅಡುಗೆ ಮಾಡೋ ಬದಲಿಗೆ  ಬ್ರೆಡ್ ತಿಂದು ಸುಮ್ಮನಾಗುತ್ತಾರೆ. ಹೀಗೆ ಬ್ರೆಡ್ ತಿನ್ನುವವರು ಸ್ವಲ್ಪ ಸಮಯ ನೀಡಿದರೆ ಮಾಮೂಲಿ ಬ್ರೆಡ್ ಬದಲಿಗೆ ರುಚಿಯಾದ ಬ್ರೆಡ್ ರೋಸ್ಟ್ ತಯಾರಿಸಿ ಸೇವಿಸಬಹುದಾಗಿದೆ.

ಬೇಕಾಗುವ ಪದಾರ್ಥಗಳು: ತುಪ್ಪ ಅಥವಾ ಎಣ್ಣೆ, ಮೈದಾ- 4ರಿಂದ 6 ಚಮಚ ಈರುಳ್ಳಿ-2 ಹಸಿಮೆಣಸು- 4ರಿಂದ 6 ಆಲೂಗೆಡ್ಡೆ- 100ಗ್ರಾಂ ಬೀನ್ಸ್-100ಗ್ರಾಂ ಕ್ಯಾರೆಟ್- ಒಂದು ಶುಂಠಿ ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ, ಸಕ್ಕರೆ- ಅರ್ಧ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಚಿಟಿಕೆಯಷ್ಟು, ಉಪ್ಪು, ಅರಶಿನ ಪುಡಿ

ಮಾಡುವ ವಿಧಾನ: ಮೊದಲಿಗೆ ಆಲೂಗೆಡ್ಡೆಯನ್ನು ಬೇಯಿಸಿ ಅದನ್ನು ಪುಡಿಮಾಡಿಟ್ಟುಕೊಳ್ಳಬೇಕು. ತರಕಾರಿಗಳನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಿ. ಮತ್ತೊಂದು ಕಡೆ  ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಅದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಹಸಿಮೆಣಸು, ಬೀನ್ಸ್, ಕ್ಯಾರೆಟ್ ಮತ್ತು ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್  ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಅರಶಿನ ಪುಡಿ, ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಬೇಕು.

ಆ ನಂತರ ಆಲೂಗೆಡ್ಡೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದಕ್ಕೆ ಕೊತ್ತಂಬರಿ ಹಾಕಿ ಮೈದಾ ಹಾಕಿ ಚೆನ್ನಾಗಿ ಕಲೆಸಿ ಬಳಿಕ ಈ ಮಸಾಲೆ ಪದಾರ್ಥಗಳನ್ನು ಬ್ರೆಡ್ ಮೇಲೆ ಹಾಕಿ ತಾವಾದಲ್ಲಿಟ್ಟು ಬೇಯಿಸಿ ಸ್ವಲ್ಪ ಎಣ್ಣೆ ಹಾಕಿ ರೋಸ್ಟ್ ಮಾಡಿದರೆ ಬ್ರೆಡ್ ರೋಸ್ಟ್ ರೆಡಿ..

admin
the authoradmin

Leave a Reply