LatestMysore

ಬಿಳಿಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಜಿ ಡಿ ಹರೀಶ್ ಗೌಡ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಮುಖ್ಯಮಂತ್ರಿ ಮೂಲ ಸೌಕರ್ಯ  ಯೋಜನೆಯಡಿ  1.4 ರೂ. ವೆಚ್ಚದಲ್ಲಿ ಅಭಿವದ್ಧಿ ಕಾಮಗಾರಿಗೆ ಶಾಸಕ ಜಿ ಡಿ ಹರೀಶ್ ಗೌಡ ಬಿಳಿಕೆರೆ ಗ್ರಾಮದ ಬಳಿ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿ, ಗ್ರಾಮ ಸಂಪರ್ಕ ರಸ್ತೆಗಳನ್ನು ಅಭಿವದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ನಾನಾ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ.  2 ಕಿ.ಮೀ. ರಸ್ತೆಯನ್ನು ಡಾಂಬರೀಕರಣ ಗೊಳಿಸಲು 1.4ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ನಿರ್ವಹಣೆಯಾಗಿದ್ದು, ಈ ರಸ್ತೆಯನ್ನು ಡಾಂಬರೀಕರಣಗೊಳಿಸುವ ಜತೆಗೆ ಗುತ್ತಿಗೆದಾರರಿಗೆ 5 ವರ್ಷದವರೆಗೆ ನಿರ್ವಹಣೆ ಮಾಡುವ ಹೊಣೆಯನ್ನು ನೀಡಲಾಗುತ್ತದೆ. ಹಲವು ಗ್ರಾಮಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವ ರಸ್ತೆಯಾಗಲಿದ್ದು, ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ಗ್ರಾಮಸ್ಥರು ಗುತ್ತಿಗೆದಾರರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.

ಗ್ರಾಮ ಸಡಕ್ ಯೋಜನೆ ಯಡಿ ರಸ್ತೆಗಳನ್ನು ಅಭಿವದ್ಧಿ ಪಡಿಸುವ ಮೂಲಕ ನಮ್ಮ ಕ್ಷೇತ್ರದ ವ್ಯಾಪ್ತಿಯ ರಸ್ತೆಗಳು ಡಾಂಬರೀಕಣ ವಾಗುವಂತೆ ಮಾಡಿ ದ್ದಾರೆ. ಇದೊಂದು ಉತ್ತಮ ಯೋಜನೆ ಯಾಗಿದ್ದು, ಗ್ರಾಮ ಸಂಪರ್ಕ ರಸ್ತೆಗಳು ಅಭಿವದ್ಧಿ ಹೊಂದಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಇಇ ಯತೀಶ್ ಕುಮಾರ್, ಕೆಎಂ ಎಪ್ ನಿರ್ಧೆಶಕ ಕೆ ಎಸ್ ಕುಮಾರ್, ಬಿಳಿಕೆರೆ ಮಧು, ಜೆಡಿಎಸ್ ತಾಲೂಕು ಅದ್ಯಕ್ಷ ಸುರೇಂದ್ರ, ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ ಶಿವಶಂಕರ್, ಮುಖಂಡರಾದ ಶಭರೀಶ್, ಮರತಾಯಮ್ಮ, ಯೊಗೇಶ್, ರಾಮನಾಯ್ಕ, ಕಾಳಿದಾಸನಾಯ್ಕ ಚಿಕ್ಕಣ್ಣ ಗಾಗೇನಹಳ್ಳಿ ರಾಜೇಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

admin
the authoradmin

Leave a Reply