CrimeLatest

ಪ್ರೀತಿಯ ಬಲೆಗೆ ಬೀಳುವ ಮುನ್ನ ಹುಡ್ಗೀರೆ ಹುಷಾರ್… ಪ್ರೀತಿ ಹೆಸರಲ್ಲಿ ದುಷ್ಟಕೃತ್ಯ!

ಕಿರಾತಕನ ಮೊಬೈಲ್ ನಲ್ಲಿತ್ತು ಹುಡ್ಗೀರ ಅಶ್ಲೀಲ ವಿಡೀಯೋ, ಫೋಟೋಗಳು

ಬೆಂಗಳೂರು: ಹಿಂದೂ ಹುಡ್ಗೀರನ್ನು ಟಾರ್ಗೆಟ್ ಮಾಡಿ ಅವರನ್ನು ಪುಸಲಾಯಿಸಿ ಪ್ರೀತಿಸುವ, ಮದುವೆಯಾಗುವ ನಾಟಕವಾಡಿ ಅವರ ಅಶ್ಲೀಲ ಫೋಟೋಗಳನ್ನು ತೆಗೆದಿರಿಸಿಕೊಂಡು ಹೆದರಿಸಿ, ಬೆದರಿಸಿ ತಮಗೆ ಬೇಕಾದಂತೆ ಬಳಸಿಕೊಳ್ಳುವ, ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಹುಬ್ಬಳ್ಳಿ ಬಳಿಕ ಕೊಪ್ಪಳದಲ್ಲಿ ಪ್ರಕಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೊಬ್ಬನ ಮೊಬೈಲ್ ನಲ್ಲಿ ಇದೀಗ ಹತ್ತಾರು ಹಿಂದೂ ಹುಡ್ಗೀರ ಅಶ್ಲೀಲ ಫೋಟೋಗಳು ಸಿಕ್ಕಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ಹಿಂದೂ ಸಂಘಟನೆಗಳು ದೂರು ನೀಡಿವೆ.

ಹಾಗೆನೋಡಿದರೆ ಲವ್ ಜಿಹಾದ್ ಪ್ರಕರಣಗಳು ವ್ಯವಸ್ಥಿತಿವಾಗಿ ನಡೆಯುತ್ತಿವೆ ಎಂಬ ಆರೋಪವನ್ನು ಹಿಂದೂಪರ ಸಂಘಟನೆಗಳು ಮಾಡುತ್ತಲೇ ಬಂದಿದ್ದವು. ಇದರ ನಡುವೆ ಹಿಂದೂ ಹುಡ್ಗೀರ ಕೊಲೆಗಳು ಕೂಡ ನಡೆದಿದ್ದವು. ಇತ್ತೀಚೆಗೆಯಷ್ಟೇ  ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಮೊಬೈಲ್ ನಲ್ಲಿ ಸಿಕ್ಕಿದ್ದ ವೀಡಿಯೋಗಳು ಭಾರೀ ಸುದ್ದಿಯಾಗಿದ್ದವು. ಈತನ ಮುಖವಾಡವನ್ನು ಕಳಚಿಡುವಲ್ಲಿ ಹಿಂದೂ ಸಂಘಟನೆಗಳು ಮಹತ್ತರ ಪಾತ್ರ ವಹಿಸಿದ್ದವು,

ಇದೀಗ ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ಲಿಂ ಯುವಕ ಮುಸ್ತಫಾ ಎಂಬಾತನ  ವಿರುದ್ಧ ದೂರು ಬಂದಿದ್ದು, ಈತನ ಬಳಿಯಿದ್ದ ಹದಿನಾರಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆಗಿನ ಫೋಟೋ ಹಾಗೂ ಅಶ್ಲೀಲ ವಿಡಿಯೊಗಳು ಆತಂಕಕ್ಕೀಡು ಮಾಡಿವೆ. ಈತನ ಕಪಿ ಮುಷ್ಠಿಯಲ್ಲಿ ಸಿಕ್ಕಿ ನರಳಾಡಿದ ಆ ಹುಡ್ಗೀರ ಕಥೆ ಏನಾಗಿದೆಯೋ ಗೊತ್ತಿಲ್ಲ. ಆದರೆ ಈತ ಯುವತಿಯ ಅಶ್ಲೀಲ ವಿಡೀಯೋಗಳನ್ನೇಕೆ ಮಾಡಿಡುತ್ತಿದ್ದ ಇದರ ಹಿಂದಿನ ಉದ್ದೇಶವೇನು? ಎಂಬುದರ ಕುರಿತಂತೆ ತನಿಖೆಗಳು ನಡೆಯಬೇಕಿದೆ.

ಸದ್ಯಕ್ಕೆ ಐನಾತಿ ಮುಸ್ತಫಾ ಹಿಂದೂ ಸಂಘಟನೆಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನ ಹಿಂದೆ ವ್ಯವಸ್ಥಿತ ಜಾಲವಿದ್ದು, ಈತ ಪ್ರೀತಿ ಹೆಸರಲ್ಲಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಅವರಿಗೆ ಡ್ರಗ್ಸ್ ಗಾಂಜಾ ನೀಡಿ ಅಶ್ಲೀಲ ವಿಡಿಯೊಗಳನ್ನ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಆತನ ಮೊಬೈಲ್ ನಲ್ಲಿ ಸಿಕ್ಕ ವೀಡಿಯೋಗಳ ಪ್ರಕಾರ ಆತನೂ ಗಾಂಜಾ, ಡ್ರಗ್ಸ್ ಸೇವನೆ ಮಾಡುತ್ತಿರುವುದು ಪತ್ತೆಯಾಗಿದೆ. ಈತ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಮತ್ತು ಅವರಿಗೆ ಆಸೆ ಆಮಿಷಗಳನ್ನೊಡ್ಡುತ್ತಿದ್ದ ಎಂಬುದು ಹಿಂದೂಪರ ಸಂಘಟನೆಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಐನಾತಿ ಮುಸ್ತಫಾನ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ಅವರು ದೂರು ನೀಡಿದ್ದಾರೆ.

ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಮುಸ್ತಫಾ ವಿದ್ಯಾರ್ಥಿನಿಯೊಂದಿಗೆ ಸಂಶಯಾಸ್ಪದ ಹಾಗೂ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ  ಸ್ಥಳಕ್ಕೆ ಧಾವಿಸಿ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿ ದಾಗ ಆ ಮೊಬೈಲ್ ನಲ್ಲಿ ಮುಸ್ತಫಾನ ಅಸಲಿಯತ್ತು ಬಯಲಾಗಿತ್ತು. ಅಲ್ಲಿ ಮೂರು ಸಾವಿರ ಫೋಟೊಗಳು, ಆರು ಸಾವಿರ ವಿಡಿಯೊಗಳು, ಮತ್ತೊಂದು ಫೋನ್‌ನಲ್ಲಿ ನಾಲ್ಕು ಸಾವಿರ ಯುವತಿಯರ ಫೋಟೊಗಳು ಹಾಗೂ 3,700 ವಿಡಿಯೊಗಳು ಇರುವುದು ಪತ್ತೆಯಾಗಿದೆ ಎಂದು ಆತನ ವಿರುದ್ಧ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಮುಸ್ತಫಾ ವಿರುದ್ಧ ಹಲವು ಅಪರಾಧ ಚಟುವಟಿಕೆಗಳ ಬಗ್ಗೆ ಆರೋಪ ಮಾಡಲಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಪೊಲೀಸರ ತನಿಖೆಯಿಂದ ನೈಜಾಂಶ ಹೊರ ಬರಬೇಕಿದೆ.  ಸದ್ಯ ರಾಜ್ಯದಲ್ಲಿ ಲವ್ ಜಿಹಾದ್ ವಿಚಾರಗಳು ಮುನ್ನಲೆಗೆ ಬಂದಿದ್ದು ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಅದು ಏನೇ ಇರಲಿ ಪ್ರೀತಿ, ಪ್ರೇಮದ ಬಲೆಗೆ ಬೀಳುವ ಮುನ್ನ ಯುವತಿಯರು ಯಾರೇ ಆಗಲಿ ಎಚ್ಚರಿಕೆಯಿಂದ ಇರುವುದು ಒಳಿತು. ಏಕೆಂದರೆ ನಿಮ್ಮ ಬಾಳು ನರಕ ಮಾಡಲು ಕಿರಾತಕರು ರೆಡಿಯಾಗಿರುವುದಂತು ನಿಜ…

ಹೆಚ್ಚಿನ ಕ್ರೈಂ ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ…

admin
the authoradmin

Leave a Reply

Translate to any language you want