ಸಿದ್ದನಕೊಳ್ಳ: ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಸುಕ್ಷೇತ್ರ ನಿರಂತರ ಅನ್ನದಾಸೋಹ ಕಲಾಪೋಷಕರಮಠ ಸಿದ್ದನಕೊಳ್ಳದ ಶ್ರೀಮಠದ ಆವರಣದಲ್ಲಿ ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದಿಂದ ಕೀರ್ತನ ಮೂವಿ ಮೇಕರ್ಸ್ ಹಾಗೂ ಕೆ ಎಸ್ ಆರ್ ಪ್ರೊಡಕ್ಷನ್ ಬೆಂಗಳೂರ ಅವರ ‘ಹೂಗಾರ’ ಉಪ ಶೀರ್ಷಿಕೆ ‘ಕಂಬದ ಮಲ್ಲ’ ಎಂಬ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಶ್ರೀಮಠದಲ್ಲಿ ಯಶಸ್ವಿಯಾಗಿ ನೆರವೇರಿತು.
ಡಾ.ಶಿವಕುಮಾರ ಸ್ವಾಮೀಜಿ ಮತ್ತು ಉಮೇಶ ಮೇಟಿಯವರು ಕ್ಯಾಮರಾಗುಂಡಿ ಒತ್ತುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ಸಿದ್ದಾರೂಢ ಹೂಗಾರ ಕ್ಲಾಪ್ ಮಾಡುವ ಮೂಲಕ ಡಾ.ಶಿವಕುಮಾರ ಸ್ವಾಮೀಜಿಯವರ ಹಾಡಿನ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿವಾನಂದ ಮುತ್ತಣ್ಣವರ, ಶಿವಾನಂದ ಮೇಟಿ ಚಿತ್ರತಂಡದವರು , ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು. ಸಿದ್ದಾರೂಢ ಹೂಗಾರ ಎಂಬ ಮಲ್ಲಕಂಬದ ಪೈಲ್ವಾನ್ ಅವರ ಜೀವನ ಆಧಾರಿತ ಚಲನಚಿತ್ರವಾಗಿದೆ. ಸಿದ್ದನಕೊಳ್ಳ ಗ್ರಾಮ ಮತ್ತು ಸಿದ್ದನಕೊಳ್ಳಮಠದಲ್ಲಿ ೩೦ ದಿನಗಳ ಕಾಲ ಸತತ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳು, ನಾಲ್ಕು ಸಾಹಸ ದೃಶ್ಯಗಳಿವೆ ಎಂದು ಈಗಾಗಲೇ ‘ಒಬ್ಬಟ್ಟು’ ಚಿತ್ರ ನಿರ್ದೇಶಿಸಿ, ನಿರ್ಮಿಸಿದ್ದ ನಿರ್ದೇಶಕ ಹಾಗೂ ನಿರ್ಮಾಪಕ ಲೋಕೇಶ್ ವಿದ್ಯಾಧರ ಹೇಳಿದರು..

ತಾರಾ ಬಳಗದಲ್ಲಿ ದಶರಥ ನಾಯಕನಾಗಿ, ಅಪೂರ್ವ ನಾಯಕಿಯಾಗಿ ಮತ್ತು ಹಿರಿತೆರೆ, ಕಿರುತೆರೆ ಧಾರಾವಾಹಿಗಳ ಕಲಾವಿದೆ ಸುನಂದಾ ಕಲ್ಬುರ್ಗಿ, ಮಹಾಂತೇಶ ಹಳ್ಳೂರ, ಸಂಗನಗೌಡ ರುದ್ರಗೌಡ್ರ (ಕುರುಡಗಿ), ಜ್ಯೂ.ಉಪೇಂದ್ರ ವೀರೇಶ ಐಹೊಳೆ, ಕಾಮಿಡಿ ಆಕ್ಟರ್ ದಾನಪ್ಪ , ಮುತ್ತುರಾಜ್ ಬುದ್ನಿ , ಭಾವನಾ ಸಿಂಧೆ, ಕಿಟ್ಟಿ ತ ತಾಳಿಕೋಟೆ ಜೊತೆಗೆ ಉತ್ತರ ಕರ್ನಾಟಕದ ಅನೇಕ ಕಲಾವಿದರು ಅಬಿನಯಿಸುತ್ತಿದ್ದಾರೆ.
ತಾಂತ್ರಿಕ ವರ್ಗದಲ್ಲಿ- ಛಾಯಾಗ್ರಹಣ ಸುವಿಶ್, ಜನಾರ್ಧನ್ , ಸಂಗೀತ ರಿದಂ ಕುಟ್ಟಿ, ಸಾಹಿತ್ಯ ಶಿವರಾಜ್ ಆರ್, ಕಿನ್ನಾಳ ರಾಜ್ ,ಲೋಕೇಶ್ ವಿದ್ಯಾಧರ, ಸಂಭಾಷಣೆ ಶಿವಂ ಬಂಗಾರಿ ಸಹಾಯಕ ನಿರ್ದೇಶನ ಸಂತೋಷ್ ,ಶಿವಂ ಬಂಗಾರಿ , ಸಂಕಲನ ಮುತ್ತುರಾಜ್ , ಸಾಹಸ ಸಿದ್ದಾರೂಢ ಹೂಗಾರ , ನೃತ್ಯ ಅಲಿ, ಸಹಕಾರ ಮಹಾಲಕ್ಷ್ಮಿ , ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಇವರಿದ್ದು, ಕಥೆ-ಚಿತ್ರಕಥೆ-ನಿರ್ದೇಶನ ಹಾಗೂ ನಿರ್ಮಾಪಕರು ಲೋಕೇಶ್ ವಿದ್ಯಾಧರ್ ಆಗಿದ್ದಾರೆ.









