ಇಂದಿನ (03-07-2026, ಶುಕ್ರವಾರ) ಪಂಚಾಂಗ… ದ್ವಾದಶ ರಾಶಿ ಭವಿಷ್ಯ
ಕೇರಳ ಶ್ರೀ ಆದಿಶಕ್ತಿ ಜೋತಿಷ್ಯರು ಪಂಡಿತ್ ಶೀ ಮಂಜುನಾಥ್ ಶಾಸ್ತ್ರಿ

ಸಂವತ್ಸರ: ಶ್ರೀ ಪರಾಭವ ನಾಮ ಸಂವತ್ಸರ ಆಯನ: ಉತ್ತರಾಯಣ ಋತು: ಗ್ರೀಷ್ಮ ಋತು ಮಾಸ: ಆಷಾಢ ಮಾಸ (ನಿಜ ಆಷಾಢ ಮಾಸ) ಪಕ್ಷ: ಕೃಷ್ಣ ಪಕ್ಷ ತಿಥಿ: ತೃತೀಯಾ ತಿಥಿ (ಮಧ್ಯಾಹ್ನ 1:51 ರವರೆಗೆ), ನಕ್ಷತ್ರ: ಶ್ರವಣ ನಕ್ಷತ್ರ (ಮಧ್ಯಾಹ್ನ 11:46 ರವರೆಗೆ), ಯೋಗ: ಪ್ರೀತಿ ಯೋಗಕರಣ: ಭದ್ರ (ವಿಷ್ಟಿ) ಕರಣ ಸೂರ್ಯೋದಯ: ಬೆಳಿಗ್ಗೆ 05:58ಕ್ಕೆ ಸೂರ್ಯಾಸ್ತ: ಸಂಜೆ 06:50ಕ್ಕೆ ಸೂರ್ಯ ರಾಶಿ: ಮಿಥುನ ರಾಶಿ ಚಂದ್ರ ರಾಶಿ: ಮಕರ ರಾಶಿ ರಾಹು ಕಾಲ: ಬೆಳಿಗ್ಗೆ 10:47 ರಿಂದ 12:24 ರವರೆಗೆ, ಗುಳಿಕ ಕಾಲ: ಬೆಳಿಗ್ಗೆ 07:34 ರಿಂದ 09:11 ರವರೆಗೆ, ಯಮಗಂಡ ಕಾಲ: ಮಧ್ಯಾಹ್ನ 03:37 ರಿಂದ ಸಂಜೆ 05:14 ರವರೆಗೆ, ದಿನಾಂಕ: 3-7-26 ಶುಕ್ರವಾರ

ಇಂದಿನ ದ್ವಾದಶ ರಾಶಿಗಳ ಫಲಾಫಲಗಳು
ಮೇಷ

ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾದೀತು. ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವವರಿಗೆ ಬರಬೇಕಾದ ಹಣ ಬಾರದೇ ಕಷ್ಟವಾಗುವುದು. ಭೂಮಿಗೆ ಸಂಬಂಧಿಸಿದ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದು. ನಿಮ್ಮ ಅತಿಯಾದ ಕಲ್ಪನೆ ಭಗ್ನವಾದೀತು. ಇದರಿಂದ ದುಃಖಿಸುವಿರಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.
ವೃಷಭ

ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈ ಮೀರಿ ಹೋಗುವ ಸಂದರ್ಭವೇ ಇರುವುದು. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ. ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ನಿಮ್ಮ ವಾಹನಕ್ಕೆ ಅನ್ಯರಿಂದ ಅಪಾಯ. ಸೋಲಿಸುವ ಮನೋಭಾವದಿಂದ ಆಟವಾಡುವುದು ಬೇಡ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆ ಆಗಬಹುದು. ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗಿ.
ಮಿಥುನ

ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಬಗೆ ಅರಿಯದಾದೀತು. ಸಂಪತ್ತಿನ ಜೊತೆಗೆ ಶತ್ರುಗಳೂ ಬರುವರು. ದಾನವಾಗಿ ಕೊಟ್ಟಿದ್ದನ್ನು ಮತ್ತೆ ಕೇಳಿ ಪಡೆಯುವಿರಿ. ನಿಮ್ಮವರ ಮೇಲೆ ಕಾಳಜಿ ಹೆಚ್ಚಿರುವುದು. ಕುಟುಂಬವನ್ನು ನಡೆಸುವ ಜವಾಬ್ದಾರಿ ಸಿಗಬಹುದು. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ.
ಕರ್ಕಾಟಕ

ವಾಹನದಿಂದ ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ, ಜಾಗರೂಕತೆಯಲ್ಲಿ ಇರಿ. ನಿಮ್ಮ ನಡೆಯನ್ನು ತಿಳಿಯಲು ಜನರು ಕಷ್ಟಪಡುವರು. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ನಿಮಗೆ ಎಲ್ಲವೂ ಬಂಧನದಂತೆ ಅನ್ನಿಸುವುದು. ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ. ಮನಸ್ಸಿನ ದುಗುಡವನ್ನು ಶಾಂತ ಮಾಡಿಕೊಳ್ಳುವಿರಿ.
ಸಿಂಹ

ಏಕಮುಖವಾದ ನಿರ್ಧಾರವನ್ನು ತೆಗದುಕೊಂಡು ನೀವು ಒಬ್ಬೊಟಿಯಾಗಬೇಕಾದೀತು. ನಿಮ್ಮ ಮಾತು ಪ್ರೇರಣೆಯಾಗಬಹುದು. ಎಲ್ಲರ ಜೊತೆ ಚರ್ಚಿಸಿ ಅವರನ್ನು ತೆಗೆದುಕೊಂಡು ಹೋಗಿ. ಸಿಟ್ಟಿನಿಂದ ಏನನ್ನೂ ಸಾಧಿಸಲಾಗದು ಎಂಬ ಸತ್ಯವು ತಿಳಿಯಬಹುದು. ಪ್ರಯಾಣದಿಂದ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರ ಕಾಡಬಹುದು. ಏಕಾಂಗಿಯಾಗಿ ಎದುರಿಸುವುದು ಕಷ್ಟವಾಗುವುದು.
ಕನ್ಯಾ

ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ಇಂದು ನಿಮ್ಮ ಲೆಕ್ಕಾಚಾರಗಳು ಬುಡಮೇಲಾದೀತು. ಪ್ರಯಾಣ ಮಾಡುವ ಸಂದರ್ಭ ಬರಬಹುದು. ದೂರದ ಯಾತ್ರೆಯು ಕಾರಣಾಂತರಗಳಿಂದ ಮುಂದೆಹೋಗುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರದು.
ತುಲಾ

ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಬೇಸರಪಟ್ಟುಕೊಳ್ಳುವರು. ವಿವಾಹ ಯೋಗವನ್ನು ನಿರ್ಲಕ್ಷಿಸುವುದು ಬೇಡ. ಮಕ್ಕಳು ನಿಮಗೆ ಖುಷಿಯನ್ನು ತಂದುಕೊಟ್ಟಾರು. ಯಾವುದಾದರೊಂದು ಕೌಶಲದ ಕಡೆ ನಿಮ್ಮ ಗಮನ ಹೆಚ್ಚಾಗುವುದು. ಬಂಧುಗಳ ವಿಯೋಗದಿಂದ ಮನಸ್ಸಿಗೆ ಭಾರ. ವಿದ್ಯಾರ್ಥಿಗಳು ಬಹಳ ಸೋಮಸರಿಗಳಾಗುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ.
ವೃಶ್ಚಿಕ

ನಿಮ್ಮ ಪ್ರಮಾಣಿಕ ಪ್ರಯತ್ನವನ್ನು ವಂಚನೆ ಇಲ್ಲದೇ ಮಾಡಿ. ಆರ್ಥಿಕವಾಗಿ ಇಂದು ಸಬಲರಾಗುವಿರಿ. ಕೆಲಸದಲ್ಲಿ ವಿಘ್ನವು ಬರುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ನಿಮ್ಮಕನಸು ನನಸಾಗಬಹುದು. ವಿದ್ಯಾಭ್ಯಾಸದ ವಿಚಾರದಲ್ಲಿ ಮಕ್ಕಳ ಮಾತನ್ನೂ ಕೇಳಿ, ತೀರ್ಮಾನಕ್ಕೆ ಬನ್ನಿ. ಹಿತಶತ್ರುಗಳು ನಿಮಗೆ ಯಶಸ್ಸು ಬಾರದಂತೆ ನೋಡಿಕೊಳ್ಳುವರು. ಮೋಸ ಹೋಗುವಿರಿ. ಸ್ವಲ್ಪ ವಿಳಂಬ ಮಾಡಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ.
ಧನು

ಬೇಡದ್ದನ್ನು ನೀವು ನಿಮ್ಮ ಬಳಿ ಇಟ್ಟುಕೊಳ್ಳುವಿರಿ. ನಿಮ್ಮನ್ನು ಕಂಡು ಹೊಟ್ಟಕಿಚ್ಚು ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ಅವರನ್ನು ನಗಣ್ಯ ಮಾಡಬೇಡಿ. ಅವರನ್ನೇ ದೂರವಿಡಿ ಅಥವಾ ಅವರಿಂದ ನೀವೇ ದೂರವಾಗಿ. ಚರಾಸ್ತಿಯ ವಿಚಾರವಾಗಿ ಮಾತುಗಳು ಮನೆಯಲ್ಲಿ ಬರಬಹುದು. ಆಲಸ್ಯದಿಂದ ವಿಶ್ರಾಂತಿ ಪಡೆಯುವಿರಿ. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.
ಮಕರ

ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಗೃಹನಿರ್ಮಾಣದ ಕಾರ್ಯವು ಹಣಕಾಸಿನ ಅಭಾವದಿಂದ ಸ್ಥಗಿತಗೊಳ್ಳಬಹುದು. ನಿಮ್ಮ ನಿರುದ್ಯೋಗವನ್ನು ಕಂಡು ಯಾರಾದರೂ ತಾತ್ಕಾಲಿಕ ಕೆಲಸವನ್ನು ಕೊಡುವರು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ.
ಕುಂಭ

ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಪ್ರಮುಖ ಕಾರ್ಯಗಳಿಗೆ ಮನೆಯವರ ಸಹಾಯ ಕೇಳುವಿರಿ. ನಿಮ್ಮ ಶಿಸ್ತಿನ ಕೆಲಸದಿಂದ ಕೆಲವರಿಗೆ ಬೇಸರವಾಗಬಹುದು. ದೂರ ಬಂಧುಗಳ ಪರಿಚಯವಾಗಲಿದೆ. ಒತ್ತಡಗಳಿದ್ದರೂ ನೀವು ನಿಮ್ಮ ಕೆಲಸ ಮಾಡಿ ಮುಗಿಸುವಿರಿ. ದಾಂಪತ್ಯದಲ್ಲಿ ಕಲಹವಿದ್ದರೂ ನೆಮ್ಮದಿ ಇರಲಿದೆ. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ಆಪ್ತರೆಂದು ಮಾತಿನಲ್ಲಿ ಹಿಡಿತವಿಲ್ಲದೇ ಏನನ್ನಾದರೂ ಹೇಳುವಿರಿ.
ಮೀನ

ಇಂದು ಲೋಚಿಸದೇ ಯಾವುದೇ ಸಾಹಸ ಕಾರ್ಯದ ಕಡೆ ಮುನ್ನುಗ್ಗಬೇಡಿ. ಯಾರನ್ನೂ ನಿರೀಕ್ಷಿಸುತ್ತ ನಿಮ್ಮನ್ನು ಖಾಲಿ ಬಿಡಲಾರಿರಿ. ಉದ್ಯೋಗದ ನಿಮಿತ್ತ ದೂರ ಪ್ರಯಾಣವು ಅನಿವಾರ್ಯವಾಗುವುದು. ಸಂತಾನದ ಶುಭ ವಾರ್ತೆಯಿಂದ ಇಂದು ಸಂತಸ. ಯೋಜಿತ ಕಾರ್ಯಗಳನ್ನು ಒಂದೊಂದಾಗಿಯೇ ಮಾಡಲು ತೊಡಗಬಹುದು. ಅವಶ್ಯಕತೆ ಇದ್ದರೆ ಮಾತ್ರ ಮುಂದುವರಿಯುವುದು ಉತ್ತಮ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ. ಖುಷಿಯಿಂದ ಸ್ವೀಕರಿಸಿ.








