ಚಂದನವನದ ಚರಿತ್ರೆಯಲ್ಲಿ ತನ್ನ ಸೌಂದರ್ಯ ಮತ್ತು ನಟನೆ ಮೂಲಕ ಪ್ರೇಕ್ಷಕರ ಸೆಳೆದ ಹಲವು ನಟಿಯರಿದ್ದಾರೆ. ಅವರ ಪೈಕಿ ಒಬ್ಬರು ವೆಂಕಟಮಹಾಲಕ್ಷ್ಮಿ ಅಲಿಯಾಸ್ ಜೂಲಿ ಲಕ್ಷ್ಮಿ.. ಬೆಳ್ಳಿತೆರೆ ಮತ್ತು ಕಿರುತೆರೆಯ ಮೂಲಕ ಕನ್ನಡಿಗರ ಮನಗೆದ್ದವರು. ಇವರ ಸಿನಿಜರ್ನಿಯನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ…

ವೆಂಕಟಮಹಾಲಕ್ಷ್ಮಿ ಎಂದರೆ ಯಾರಿಗೂ ಗೊತ್ತಾಗಲಾರದು ಆದರೆ ಲಕ್ಷ್ಮಿ ಎಂದ ತಕ್ಷಣ ನಟಿ ಲಕ್ಷ್ಮಿ ಕಣ್ಮುಂದೆ ಬಂದು ಬಿಡುತ್ತಾರೆ.. ಮತ್ತೆ ಅವರ ನಟನೆ ಹತ್ತಾರು ಸಿನಿಮಾಗಳು ನಮ್ಮ ಕಣ್ಣಮುಂದೆ ಹಾದು ಹೋಗಲು ಶುರುಮಾಡುತ್ತವೆ. ಇಂತಹ ಲಕ್ಷ್ಮಿ ಬಾಲನಟಿಯಾಗಿ ಬಣ್ಣ ಹಚ್ಚಿದವರು ಆ ನಂತರ ಜೂಲಿ ಸಿನಿಮಾ ಅವರ ಸಿನಿಮಾ ಬದುಕನ್ನೇ ಬದಲಾಯಿಸಿ ಬಿಟ್ಟಿತು… ಜೂಲಿ ಲಕ್ಷ್ಮಿಯಾಗಿ ಚಿತ್ರರಂಗದಲ್ಲಿ ಜನಮನಸೆಳೆದದ್ದು ಇತಿಹಾಸ…
ಇದನ್ನೂಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…
“ಸತೀಸುಲೋಚನ” 3.3.1934ರಂದು ತೆರೆಕಂಡ ಕನ್ನಡದ ಮೊಟ್ಟಮೊದಲ ವಾಕ್ಚಿತ್ರದ ನಿರ್ದೇಶಕ ವೈ.ವಿ.ರಾವ್ (ಯರ್ರಗುಡಿಪತಿ ವರದರಾವ್) ಮತ್ತು ರುಕ್ಮಿಣಿ (ತಮಿಳು ಚಿತ್ರಗಳ ಖ್ಯಾತ ನಟಿ) ದಂಪತಿಗೆ ಪುತ್ರಿಯಾಗಿ ವೆಂಕಟಮಹಾಲಕ್ಷ್ಮಿ 13ನೇ ಡಿಸೆಂಬರ್ 1951ರಂದು ಮದ್ರಾಸ್(ಚೆನ್ನೈ) ನಗರದ ವಿಪ್ರ ಕುಟುಂಬದಲ್ಲಿ ಜನಿಸಿದರು. ಭಾರತೀಯ ಸಂಸ್ಕೃತಿ ನಾಗರಿಕತೆ ಪರಂಪರೆ ಪಧ್ಧತಿ ಪ್ರಕಾರ ತಮ್ಮ ಮುದ್ದಾದ ಹೆಣ್ಣುಮಗುವಿಗೆ ಶಾಲಾ ವಿದ್ಯಾಭ್ಯಾಸದ ಜತೆಗೆ ನೃತ್ಯ, ಸಂಗೀತ ತರಬೇತಿಯನ್ನೂ ಕೊಡಿಸಿದರು.

ಈಕೆಯ ಟ್ಯಾಲೆಂಟ್ ಗುರ್ತಿಸಿದ ನಿರ್ಮಾಪಕ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯು “ವೀರಸಂಕಲ್ಪ” ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಲು ಅವಕಾಶ ನೀಡಿದರು.
ಇದನ್ನೂಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯನಟಿ ಎಂ.ವಿ.ರಾಜಮ್ಮ…
ಈಕೆ 1964ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಡಾ.ರಾಜ್ ಕುಮಾರ್ ನಟಿಸಿ ದೊರೆ-ಭಗವಾನ್ ನಿರ್ಮಿಸಿ 1968ರಲ್ಲಿ ತೆರೆಕಂಡ ಚಿತ್ರ “ಗೋವಾದಲ್ಲಿ ಸಿಐಡಿ 999” ಮೂಲಕ ಹೀರೋಯಿನ್ ಆಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. 1974ರ ಚಟ್ಟಕ್ಕಾರಿ ಮಲಯಾಳಂ ಚಿತ್ರದ ಹಿಂದಿ ರೀಮೇಕ್ “ಜೂಲಿ”ಫಿಲಂ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿ ಜೂಲಿಲಕ್ಷ್ಮಿ ಎಂದೇ ಪ್ರಸಿದ್ಧರಾದರು.

ಕಾಲ ಕ್ರಮೇಣ 2012ರಲ್ಲಿ ಬಿಡುಗಡೆಯಾದ ಎಸ್.ಪಿ.ಬಾಲಸುಬ್ರಮಣ್ಯಂ-ಲಕ್ಷ್ಮಿ ನಟಿಸಿದ ಎರಡೇ ಪಾತ್ರಗಳುಳ್ಳ “ಮಿಥುನಂ” ತೆಲುಗು ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿ ವಿಶ್ವದಾಖಲೆ ಸೃಷ್ಟಿಸಿದರು. ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಬಂಗಾಳಿ ಮರಾಠಿ ಸಪ್ತಭಾಷಾ ತಾರೆಯಾಗಿ ಒಟ್ಟಾರೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮೇರುನಟಿ ಎನಿಸಿದರು.
ಇದನ್ನೂಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯನಟಿ ಕಮಲಾಬಾಯಿ
ವಿವಿಧ ರಾಜ್ಯಗಳ ಶ್ರೇಷ್ಟನಟಿ ಪ್ರಶಸ್ತಿ ಸೇರಿದಂತೆ ರಾಷ್ಟ್ರ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ, ಸೈಮಾ ಪ್ರಶಸ್ತಿ, ನಂದಿ ಅವಾರ್ಡ್, ಬಂಗಾಳಿ ಚಲನಚಿತ್ರ ಪತ್ರಿಕೋದ್ಯಮಿಗಳ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿ ಗಳಿಸಿದರು. “ಮಕ್ಕಳಸೈನ್ಯ” ಕನ್ನಡ ಚಿತ್ರ ಸೇರಿದಂತೆ ಕೆಲವು ತಮಿಳು ತೆಲುಗು ಚಿತ್ರಗಳ ನಿರ್ದೇಶಕಿಯಾಗಿ ಸೈಎನಿಸಿಕೊಂಡ ಇವರು ಹಲವು ಚಿತ್ರಗಳ ನಿರ್ಮಾಣ ಜವಾಬ್ಧಾರಿಯನ್ನು ನಿಭಾಯಿಸಿದ್ದಾರೆ. ಸತತ 50 ವರ್ಷಕಾಲ ಭಾರತೀಯ ಸಿನಿಲೋಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಅತಿರಥ ಮಹಾರಥ ನಾಯಕನಟರೊಡನೆ ಅಭಿನಯಿಸುವ ಮುಖೇನ ಸಾರ್ಥಕ ಕಲಾಸೇವೆ ಸಲ್ಲಿಸಿದ್ದಾರೆ.

ಇವರ ಪ್ರತಿಭೆಯನ್ನು ಗುರ್ತಿಸಿದ ಹಾಲಿವುಡ್, ಚೀನಾ ದೇಶದ ಚಿತ್ರನಿರ್ಮಾಪಕರು ಆಹ್ವಾನಿಸಿದರೂ ನಯವಾಗಿ ತಿರಸ್ಕರಿಸಿ, ತಾಯಿನಾಡು ಮತ್ತು ಮಾತೃಭಾಷೆಗೆ ಮಾತ್ರ ಮನ್ನಣೆ ನೀಡುವಲ್ಲಿ ದೇಶಭಕ್ತಿ ಪರಂಪರೆ ಮೆರೆದ ಕಲಾವಿದೆ. ಇದು ಕತೆಯಲ್ಲ ಜೀವನ, ಡ್ರಾಮಾ ಜೂನಿಯರ್ಸ್, ವೀಕೆಂಡ್ ವಿತ್ ರಮೇಶ್, ಮುಂತಾದ ಟಿ.ವಿ. ರಿಯಾಲಿಟಿ ಶೋಗಳಲ್ಲದೆ, ಧಾರಾವಾಹಿಯಲ್ಲೂ ನಟಿಸಿ ನಾಡಿನಾದ್ಯಂತ ಮನೆಮಾತಾದರು.

ಒಂದುಕಾಲಕ್ಕೆ ಡಾ.ರಾಜ್ ಕುಮಾರ್-ಲಕ್ಶ್ಮಿ ಸಿನಿಮಾಗಳಲ್ಲದೇ, ಶ್ರೀನಾಥ್, ವಿಷ್ಣುವರ್ಧನ್ ಜತೆ ನಟಿಸಿದ ಚಿತ್ರಗಳು ಅದ್ಧೂರಿ ಯಶಸ್ಸು ಕಂಡವು. ಅಂಬರೀಷ್-ಲಕ್ಶ್ಮಿ ಜೋಡಿಯ “ಅಂತ” ಚಿತ್ರವು ಹಲವು ಭಾಷೆಗೆ ಡಬ್-ರೀಮೇಕ್ ಆಗಿ ದೇಶಾದ್ಯಂತ ಸಂಚಲನ ಉಂಟು ಮಾಡಿತು.
ಇದನ್ನೂಓದಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿಲಕ್ಷ್ಮೀಬಾಯಿ…
ಈಕೆಯ ಜತೆ ನಟಿಸಿದ ಹೀರೋಗಳ ಪೈಕಿ ಅತ್ಯಂತ ಯಶಸ್ವಿ ಜೋಡಿ ಎನಿಸಿ ಇತಿಹಾಸ ಬರೆದುದ್ದು ಅನಂತನಾಗ್-ಲಕ್ಷ್ಮಿ ಜೋಡಿ ಎಂಬುದು ಅತಿಶಯೋಕ್ತಿಅಲ್ಲ.

ಹತ್ತಾರು ಫಿಲಂ ಜ್ಯುಬ್ಲಿ ಪ್ರದರ್ಶನ ಕಂಡು ಬಾಕ್ಸಾಫೀಸ್ ದಾಖಲೆ ಮಾಡಿವೆ. ಇಂಥ ಅಧ್ಬುತ ಸಿನಿಮಾಗಳ ಕೆಲವು ಉದಾಹರಣೆ… ನಾ ನಿನ್ನ ಮರೆಯಲಾರೆ, ಟೋನಿ, ಒಲವು ಗೆಲುವು, ಕಿಲಾಡಿ ಜೋಡಿ, ರವಿಚಂದ್ರ, ನಾನೊಬ್ಬಕಳ್ಳ, ಚಂದನದ ಗೊಂಬೆ, ಬೆಂಕಿಯಬಲೆ, ಇಬ್ಬನಿಕರಗಿತು, ಮುದುಡಿದ ತಾವರೆ ಅರಳಿತು,
ಇದನ್ನೂಓದಿ: ಸಿನಿಮಾರಂಗದಲ್ಲಿ ವೇದವಲ್ಲಿ ನಟಿ ಎನ್.ಆರ್.ಸಂಧ್ಯಾ ಆಗಿ ಮಿಂಚಿದ್ದು ಹೇಗೆ?
ಧೈರ್ಯಲಕ್ಷ್ಮಿ, ಗಾಳಿಮಾತು, ಬಿಡುಗಡೆಯ ಬೇಡಿ, ಹೊಸಕಾವ್ಯ, ಒಂದೇ ಗೂಡಿನ ಹಕ್ಕಿಗಳು, ಹೆತ್ತವರು, ಬಾಂಬೆದಾದಾ, ಬಂಗಾರದ ಬದುಕು, ಲಯನ್ ಜಗಪತಿರಾವ್, ಹೂವು ಹಣ್ಣು, ಜಗಮೆಚ್ಚಿದ ಹುಡುಗ, ಪ್ರೀತ್ಸೋದ್ತಪ್ಪಾ, ಅಮ್ಮ, ದುರ್ಗಾಪೂಜೆ, ಸೂರ್ಯವಂಶ, ದಿಗ್ಗಜರು, ಪ್ರೇಮ, ವಂಶಿ, ಹೆತ್ತರೆ ಹೆಣ್ಣನ್ನೇ ಹೆರಬೇಕು, ಎರಡನೇ ಸಲ, ಶಾರ್ಫ್ ಶೂಟರ್, ಬುದ್ಧಿವಂತ, ಜೊತೆಗಾರ, ವಂಶೋದ್ಧಾರಕ, ಸಾಹೇಬ, ತ್ರಿಕೋನ ಮುಂತಾದವು ಚಿರಸ್ಮರಣೀಯ.

ಇಂತಹ ಉತ್ತಮ ಅಭಿನೇತ್ರಿ ಲಕ್ಷ್ಮಿಯವರು ಎಲ್ಲದರಲ್ಲು ಯಶಸ್ಸು ಕಂಡರೂ ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಮಾತ್ರ ನೆಮ್ಮದಿ ತೃಪ್ತಿ ಹಾಗೂ ಮನಶಾಂತಿ ಅನುಭವಿಸಿದರು. ಇದಕ್ಕೆ ಇಂಬುಕೊಡುವಂಥ ಆಶ್ಚರ್ಯವೆಂದರೆ ಇವರು 1969ರಲ್ಲಿ ಭಾಸ್ಕರನ್ ಜತೆ ಮದುವೆಯಾದ ನಂತರ 1974 ರಲ್ಲಿ ವಿಚ್ಚೇದನಗೊಂಡು 1975ರಲ್ಲಿ 2ನೇ ಬಾರಿ ಮದುವೆಯಾದ ಮೋಹನ್ ಜತೆಗಿನ ದಾಂಪತ್ಯವು ಸಹ 1980ರಲ್ಲಿ ಮುರಿದುಬಿದ್ದು 3ನೇ ಸಲ 1987 ರಲ್ಲಿ ಶಿವಚಂದ್ರನ್ ಜತೆ ವಿವಾಹವಾದರು.
ಇದನ್ನೂಓದಿ..ಬಹುಭಾಷಾ ನಟಿಯಾಗಿ ಮೆರೆದ ಕೋಲು ಮೊಗದ ಕೃಷ್ಣ ಸುಂದರಿ ವಾಣಿಶ್ರೀ..
ಇವರ ಇಬ್ಬರು ಮಕ್ಕಳಲ್ಲೊಬ್ಬರಾದ ಐಶ್ವರ್ಯ ಭಾಸ್ಕರನ್ ಕೂಡ ಚಿತ್ರನಟಿ. ಸಧ್ಯಕ್ಕೆ ಪತಿ ಶಿವಚಂದ್ರನ್ ಮತ್ತು ದತ್ತುಪುತ್ರಿ ಸಂಯುಕ್ತ ಅವರೊಡನೆ ಚೆನೈನ ಸ್ವಂತ ಮನೆಯಲ್ಲಿ ಸುಖಜೀವನ ಸಾಗಿಸುತ್ತಿದ್ದಾರೆ.







