CinemaLatest

ನಟ ಅನಂತನಾಗ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.. ಕರ್ನಾಟಕಕ್ಕೊಂದು ಹೆಮ್ಮೆ

ಬೆಂಗಳೂರು: ಇಡೀ ಕರ್ನಾಟಕದ ಜನ ಹೆಮ್ಮೆ ಪಡುವ ಸುದ್ದಿಯೊಂದು ಬಂದಿದೆ… ಮಹಾನಟ, ಹಿರಿಯನಟ ಅನಂತ ನಾಗ್ ಅವರನ್ನು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಈ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಎಕ್ಸ್ ಮೂಲಕ  ಅಭಿನಂದನೆ ಸಲ್ಲಿಸಿರುವುದು ಖುಷಿಪಡುವ ವಿಚಾರವಾಗಿದೆ.

ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್‌ ಫಾಲ್ಕೆ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಸಿನಿಮಾ ರಂಗದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರು ಇದೇ ತಿಂಗಳು ಅಂದರೆ ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯುತ್ತಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟನೆ ಮೂಲಕ ಪ್ರೇಕ್ಷಕರನ್ನು ಸೆಳೆದವರು ಅನಂತನಾಗ್.. ಇವರು ಮಾಡದ ಪಾತ್ರವಿಲ್ಲ. ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡವರು ಇದೀಗ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಟ ಅನಂತನಾಗ್ ಅವರ ಬದುಕು ಮತ್ತು ಸಿನಿ ಜರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಅನಂತನಾಗ್…. ಡಾಕ್ಟರ್ ಆಗಬೇಕಾಗಿದ್ದವರು ಆಕ್ಟರ್ ಆದ ಇಂಟರೆಸ್ಟಿಂಗ್ ಸ್ಟೋರಿ!

admin
the authoradmin

Leave a Reply