ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಹುಣಸೂರು ತಾಲೂಕು ಹನಗೋಡು ವಲಯದ ಹಿಂದೂಗುಡ್ಲು ಕಾರ್ಯಕ್ಷೇತ್ರದಲ್ಲಿ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ನಡೆಯಿತು.
ಪಶುವೈದ್ಯಾಧಿಕಾರಿ ಡಾ.ರುದ್ರಪ್ಪ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದ ಅವರು.ರೈತರು ಹಸುಗಳನ್ನು ಖರೀದಿಸುವಾಗ ಗುಣಮಟ್ಟದ ಹಸುಗಳನ್ನು ಖರೀದಿಸುವುದು ಅಗತ್ಯ. ಜೊತೆಗೆ ಕೊಟ್ಟಿಗೆ ನಿರ್ಮಿಸುವಾಗ ಸೂಕ್ತವಾದ ರೀತಿಯಲ್ಲಿ ರಚನೆಯನ್ನು ಮಾಡುವುದು ಗಾಳಿ ಬೆಳಕಿನ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಕೊಟ್ಟಿಗೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಹಸುಗಳಿಗೆ ನೀರು ಮತ್ತು ಮೇವನ್ನು ಸರಿಯಾದ ಸಮಪ್ರಮಾಣದಲ್ಲಿ ನೀಡುವುದರಿಂದ ಹಸುಗಳಿಗೆ ಉತ್ತಮ ಪ್ರೊಟೀನ್ ಯುಕ್ತ ಆಹಾರವನ್ನು ನೀಡುವುದು ಅವಶ್ಯಕವಾಗಿದೆ ಇದರಿಂದ ಹಾಲಿನ ಉತ್ಪಾದನೆಯಲ್ಲಿ ಗುಣಮಟ್ಟ ಏರಿಕೆಯಲ್ಲಿ ಸಹಾಯಕವಾಗುತ್ತದೆ. ಕರುಗಳಿಗೆ ಜಂತಿನ ಔಷಧಿಗಳನ್ನು ನೀಡುವುದು ಅವಶ್ಯಕ ಮತ್ತು ಹಸುಗಳಿಗೆ ಕಾಲುಬಾಯಿ ಜ್ವರ ರೋಗದ ಸೂಕ್ತ ಲಸಿಕೆಯನ್ನು ಸರಿಯಾದ ಸಮಯಕ್ಕೆ ನೀಡುವುದರಿಂದ ಹಾಲಿನ ಗುಣಮಟ್ಟವನ್ನ ಕಾಪಾಡಿಕೊಳ್ಳುವುದು, ಹಸಿರುಮೇವಿನ್ನು ಬಳಸುವುದು ಸೂಕ್ತ ಎಂದು ಮಾಹಿತಿ ನೀಡಿದರು.

ತಾಲೂಕು ಯೋಜನಾಧಿಕಾರಿಗಳಾದ ನಾರಾಯಣಶೆಟ್ಟಿ ಮಾತನಾಡಿ ಗ್ರಾಮಾಅಭಿವೃದ್ಧಿ ಯೋಜನೆ ಕೇವಲ ಸಾಲ ಸೌಲಭ್ಯವನ್ನು ನೀಡದೆ, ಗ್ರಾಮೀಣ ಪ್ರದೇಶದ ಜನರಿಗೆ ಕೃಷಿಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಯಲ್ಲಿ ಅವರ ಜೀವನ ಮಟ್ಟ ಸುಧಾರಣೆಗೆ ಸಹಾಯಕವಾಗಿದೆ ಎಂಬ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕುಮಾರ್, ಶಂಕ್ರೇಗೌಡ. ಕೃಷಿ ಮೇಲ್ವಿಚಾರಕರಾದ ಅಣ್ಣಪ್ಪ, ಸೇವಾ ಪ್ರತಿನಿಧಿ ಮೇನಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







