LatestMysore

ಹುಣಸೂರಿನಲ್ಲಿ ಪ್ರಜಾ ಸೇವೆ ಅಭಿಯಾನಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಚಾಲನೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಮುಖ್ಯಮಂತ್ರಿಗಳು ಪ್ರತ್ಯೇಕವಾಗಿ ಪ್ರಜಾ ಸೇವೆ ಇಲಾಖೆ ತಂದು ಕಟ್ಟೆ ಕಡೆಯ ವ್ಯಕ್ತಿಯ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮುಂದಾಗಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಹುಣಸೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಜಾ ಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿ ತಿಂಗಳ 1 ನೇ ಹಾಗೂ 4 ನೇ ಶನಿವಾರ ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಸಬೇಕು ಶಾಸಕರು ಹೋಬಳಿ ಮಟ್ಟದಲ್ಲಿ ಪ್ರಜಾ ಸೇವೆ ಸಭೆ ನಡೆಸುವಂತೆ ಸೂಚನೆ ನೀಡಿದ್ದಾರೆ.  ನಮ್ಮ ಜನಪ್ರತಿನಿಧಿಗಳು ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕೊಡುವಂತಹ ಕೆಲಸ ಮಾಡುತ್ತೇವೆ ಇದರಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆದು ಸರ್ಕಾರಿ ಕೆಲವು ಅಧಿಕಾರಿಗಳು ಕೆಲಸ ಮಾಡಿಕೊಟ್ಟರೆ ಕೆಲವು ಅಧಿಕಾರಿಗಳು ಜನರನ್ನು ಅಲೆಸುತ್ತಿರುವುದು ಬೇಸರದ ಸಂಗತಿ.

ಆದ್ದರಿಂದ ಇಂತಹ ಇಲಾಖೆ ಬಂದಿರುವುದು ಕೆಲ ಸರ್ಕಾರದ ನಿಯಮ ಇರುವುದರಿಂದ ಅಧಿಕಾರಿಗಳಿಗೆ ಕೆಲವು ನ್ಯೂನತೆಗಳಿರುತ್ತವೆ ಅಂತಹವುಗಳನ್ನು ಸಚಿವರ ಗಮನಕ್ಕೆ ತಂದಾಗ ಸಚಿವ ಸಂಪುಟದಲ್ಲಿ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಬಗೆ ಹರಿಸಬಹುದಾದ ಸಮಸ್ಯೆಗಳನ್ನು ಬಗೆಹರಿಸಿ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಸರ್ಕಾರ ಎಂದರೆ ಜನರಿಗೋಸ್ಕರ ಇರುವ ಆಡಳಿತ ಯಂತ್ರ ಸರ್ಕಾರ ಇರುವುದೇ ಜನರ ಕೆಲಸ ಮಾಡಲು ಇಂತಹ ವ್ಯವಸ್ಥೆಯನ್ನು ಸ್ಥಾಪನೆ ಮಾಡಿರುವುದು ಜನರು ಕೇಳಿದ ಸಮಸ್ಯೆಗಳಿಗೆ ಸ್ಪಂದಿಸಬೇಕು ಜೊತೆಗೆ ಸರಿಯಾದ ಸಮಯಕ್ಕೆ ಸ್ಪಂದಿಸಿದಾಗ ಪ್ರಜಾಪ್ರಭುತ್ವ ನಡೆಯಲು ಸಾಧ್ಯವಾಗುತ್ತದೆ ಎಂದರು.

ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ ಪ್ರಜಾ ಸೇವೆಯ ಇಲಾಖೆಯನ್ನು ಮಹತ್ವಾಕಾಂಕ್ಷೆಯಿಂದ ಪ್ರಾರಂಭ ಮಾಡಿದೆ. ಸಾರ್ವಜನಿಕರ ಸಮಸ್ಯೆಗಳ ಜೊತೆಗೆ ಬೇರೆ ಬೇರೆ ಇಲಾಖೆಗಳ ನಡುವೆ ಇರುವಂತಹ ಸಮನ್ವಯ ಕೊರತೆಯನ್ನು ನೀಗಿಸಲು ಹೊಸ ಇಲಾಖೆ ತಂದಿದ್ದಾರೆ.  ತಾಲೂಕು ಮಟ್ಟದ ಅಧಿಕಾರಿಗಳು  ಪಂಚಾಯಿತಿ, ಅಭಿವೃದ್ಧಿ ಅಧಿಕಾರಿಗಳು ಚೆಸ್ಕಾಂ ಕಂದಾಯ, ನಗರ ಸಭೆ ಇಷ್ಟು ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಜನಪ್ರತಿನಿಧಿಗಳಿಗೆ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಬಹುಶ ಶೇ 90ರಷ್ಟು ಒತ್ತಡ ಕಡಿಮೆಯಾಗುತ್ತದೆ ಜೊತೆಗೆ ನಮಗೆ ಸಮಸ್ಯೆಗಳೇ ಬರುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರು ಸಮಸ್ಯೆ ಕುರಿತ ಅರ್ಜಿಗಳಿಗೆ ನೋಂದಾಯಿಸಿಕೊಂಡಿದ್ದು, ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಸಮಸ್ಯೆಗೆ ಉತ್ತರ ನೀಡುವಂತೆ ಸೂಚಿಸಿ ಸಮಸ್ಯೆ ಉತ್ತರ ಕೊಡಿಸಿದರು.

ಇದೇ ಸಂದರ್ಭ ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಕೇಶ್ ಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪಾರ ಜಿಲ್ಲಾಧಿಕಾರಿ ಐಶ್ವರ್ಯ, ಚೆಸ್ಕಾಂ ಇಲಾಖೆ ಎಇ ಸುನಿಲ್ ಕುಮಾರ್, ಉಪವಿಭಾಗಾಧಿಕಾರಿ ಮಂಜುನಾಥ್,  ಅರಣ್ಯ ಇಲಾಖೆಯ ಡಿಸಿಎಫ್ ಗಳಾದ ಸೀಮಾ,ಕಿರಂಬತ್, ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ರಘು, ತಾಲೂಕು ದಂಡಾಧಿಕಾರಿ ಮಂಜುನಾಥ್, ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಹೊಂಗಯ್ಯ, ಮಾಜಿ ಶಾಸಕ ಎಚ್ ಪಿ ಮಂಜುನಾಥ್, ಕೆಪಿಸಿಸಿ ವಕ್ತಾರ  ಎಂ ಲಕ್ಷ್ಮಣ್. ಸೇರಿದಂತೆ ಹಲವು ಮುಖಂಡರು ಇದ್ದರು.

admin
the authoradmin

Leave a Reply