LatestMysore

ಸೆ.6, ನೇಗಿಲ ಯೋಗಿ ಟ್ರಸ್ಟ್ ನಿಂದ ಎರಡು ಕೃತಿಗಳು ಜನಾರ್ಪಣೆ.. ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು: ನೇಗಿಲ ಯೋಗಿ ಟ್ರಸ್ಟ್ ವತಿಯಿಂದ ‘ಕರ್ನಾಟಕದ ಕೊರಚರು’ಪುಸ್ತಕ ಹಾಗೂ ಕೊರಚ ಮಾತುಕತೆ ‘ಕುಡ್ರ್ ವಾತಕತ’ ಕೃತಿಗಳ ಜನಾರ್ಪಣೆ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೆಪ್ಟೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕಗಳ ಜನಾರ್ಪಣೆ, ಕೊರಚ ಭಾಷೆಯಲ್ಲಿ ಬುದ್ಧ ಕಥಾವಾಚನ ಹಾಗೂ ಸಂವಿಧಾನದ ಪೀಠಿಕೆ ವಾಚನ ನಡೆಯಲಿದೆ. ಕಾರ್ಯಕ್ರಮದ ಬಳಿಕ ಊಟದ ವ್ಯವಸ್ಥೆಯೂ ಮಾಡಲಾಗಿದೆ. ಡಾ. ಧರಣಿದೇವಿ ಮಾಲಗತ್ತಿ, ಡಿಐಜಿ, ಇಂಟಲಿಜೆನ್ಸ್ ಹಾಗೂ ಸಾಹಿತಿಗಳು, ಮೈಸೂರು ಅವರು ಕೃತಿಗಳ ಜನಾರ್ಪಣೆ ನೆರವೇರಿಸಲಿದ್ದಾರೆ.

ಪ್ರೊ. ಎಂ.ಎಸ್. ಶೇಖರ್, ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು, ಮೈಸೂರು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರೊ. ಕಾಳೇಗೌಡ ನಾಗವಾರ, ಸಾಹಿತಿ ಹಾಗೂ ಜಾನಪದ ಸಂಶೋಧಕರು, ಮೈಸೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ರಾಜಪ್ಪ ದಳವಾಯಿ, ಅಧ್ಯಕ್ಷರು, ಸಗಟು ಖರೀದಿ ಸಮಿತಿ, ಗ್ರಂಥಾಲಯ ಇಲಾಖೆ, ಬೆಂಗಳೂರು ಅವರು ಪ್ರಾಸ್ತಾವಿಕ ನುಡಿ ನುಡಿಯಲಿದ್ದಾರೆ.

‘ಕರ್ನಾಟಕದ ಕೊರಚರು’ ಕೃತಿಯ ಕುರಿತು ಡಾ. ಆರ್. ಸಂತೋಷ್ ನಾಯ್ಕ, ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ಅವರು ಮಾತನಾಡಲಿದ್ದಾರೆ. ‘ಕೊರಚ ಮಾತು ಕತೆ (ಕುಡ್ರ್ ವಾತಕತ)’ ಕೃತಿಯ ಕುರಿತು ಶ್ರೀ ರೋಹಿತ್ ಅಗಸರಹಳ್ಳಿ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಸನ ಅವರು ಮಾತನಾಡಲಿದ್ದಾರೆ.

ಕಾರ್ಯಕ್ರಮದ ವಿಶೇಷವಾಗಿ ಶ್ರೀಮತಿ ಮಾಲತಿ ಅವರು ಕೊರಚ ಭಾಷೆಯಲ್ಲಿ ಬುದ್ಧ ಕಥಾವಾಚನ ಮಾಡಲಿದ್ದು, ತ್ರಿಶಾನ್ ಸಂತೋಷ್ ಅವರು ಕೊರಚ ಭಾಷೆಯಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸಲಿದ್ದಾರೆ. ಲೇಖಕರಾದ ಡಾ. ಎಚ್.ಆರ್. ಸ್ವಾಮಿ ಅವರು ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಅರಸೀಕೆರೆ ಯೋಗಾನಂದ ನಿರೂಪಿಸಲಿದ್ದಾರೆ.

ಕೊರಚ ಸಮುದಾಯದ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಬದುಕಿನ ದಾಖಲೀಕರಣ ಹಾಗೂ ಸಂರಕ್ಷಣೆಯ ಮಹತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಸಂಸ್ಕೃತಿ ಚಿಂತಕರು, ಸಂಶೋಧಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ಮನವಿ ಮಾಡಿದೆ.

admin
the authoradmin

Leave a Reply