CrimeLatestMysore

ಹುಣಸೂರಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನ ಬಂಧನ… ಬೈಕ್ ಸಹಿತ 350ಗ್ರಾಂ ಗಾಂಜಾ ವಶ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಬೈಕ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಹುಣಸೂರು ಟೌನ್ ಪೊಲೀಸರು ಬೈಕ್ ಸಹಿತ ಆರೋಪಿಯನ್ನು ಬಂಧಿಸಿ 350ಗ್ರಾಂ  ಗಾಂಜಾವನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಯುವಕನೊಬ್ಬ ಹುಣಸೂರು ಪಟ್ಟಣ ವ್ಯಾಪ್ತಿಯ ರತ್ನಪುರಿ ರಸ್ತೆಯಲ್ಲಿ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ಗಾಂಜಾಸಾಗಿಸುತ್ತಿರುವ ಖಚಿತ ವರ್ತಮಾನದ ಮೇರೆಗೆ ಟೌನ್ ಪೊಲೀಸ್ ಠಾಣೆ ಯ  ನೂತನ ಇನ್ಸ್ ಪೆಕ್ಟರ್ ಶಿವಮಾಧಯ್ಯರವರ ನೇತೃತ್ವದಲ್ಲಿ  ಶನಿವಾರ ರಾತ್ರಿ   ದಾಳಿ ನಡೆಸಿ ಯುವಕನನ್ನು ಬಂಧಿಸಿ ಬೈಕ್ ನಲ್ಲಿ ಸಾಗಿಸುತ್ತಿದ್ದ 350 ಗ್ರಾಂ ಗಾಂಜಾ ಸಹಿತ ಬೈಕ್ ನ್ನು ವಶಪಡಿಸಿಕೊಂಡು ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಗೊಂಡಿದ್ದಾರೆ.  ಕಾರ್ಯಾಚರಣೆಯಲ್ಲಿ ಹುಣಸೂರು ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅರುಣ್  ಹೆಚ್.ಸಿ, ರಾಜರತ್ನಂ ವಿ.  ಮಂಜುನಾಥ್ ,   ಇರ್ಪಾನ್, ಮಹಿಂದ್ರ,  ಮಂಜುನಾಥ್,  ದಿಲೀಫ್,  ಚಂದು. ಪಿಸಿ-    ರವಿಕುಮಾರ್ ಭಾಗವಹಿಸಿದ್ದರು.

ಹುಣಸೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

admin
the authoradmin

Leave a Reply