CinemaLatest

‘ಗೌರಿ ತನಯ’ ಚಲನಚಿತ್ರದ 10 ನಿಮಿಷಗಳ ಟೀಸರ್ ಬಿಡುಗಡೆ… ಯೂಟ್ಯೂಬ್ ನಲ್ಲಿ ಲಭ್ಯ

ಎನ್.ಎಸ್. ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ಸರಸ್ವತಿ ನಿರ್ಮಿಸಿರುವ ಹಾಗೂ ಪತ್ರಕರ್ತ ಹೆಚ್.ವಿ. ಪುಟ್ಟಸ್ವಾಮಿ , ನಿರ್ದೇಶಿಸಿರುವ ನಾಲ್ಕನೇ ಚಿತ್ರ ‘ಗೌರಿ ತನಯ’ ಚಲನಚಿತ್ರದ 10 ನಿಮಿಷಗಳ ಟೀಸರ್ ಅನ್ನು ಬಿಡುಗಡೆಗೊಳಿಸಲಾಯಿತು.

ಬೆಂಗಳೂರು ರಾಜಾಜಿನಗರದಲ್ಲಿರುವ ಎನ್.ಎಫ್.ಡಿ.ಸಿ  ಮಿನಿ ಸ್ಕ್ರೀನ್ ನ ಮೇಲೆ ಪ್ರದರ್ಶನ ನೀಡುವ ಮೂಲಕ ನಟ  ನಿರ್ಮಾಪಕ ಹಾಗೂ ಕರ್ನಾಟಕ ಟೆಲಿವಿಷನ್ ಅಧ್ಯಕ್ಷರಾದ ಗಣೇಶ್ ರಾವ್  ಕೇಸರ್ಕರ್ ರವರ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ನಿರ್ಮಾಪಕ ಗಿರೀಶ್ ರೆಡ್ಡಿ, ಚನ್ನಪಟ್ಟಣದ ಡಾ.ಹೆಚ್ ಎಸ್ ಚಂದ್ರೆಗೌಡರು, ಸಿಲ್ವರ್ ಸ್ಕ್ರೀನ್ ಯೂಟ್ಯೂಬ್ ಚಾನೆಲ್ ನ ಮುಖ್ಯಸ್ಥರು ರಾಮು, ಸಿನಿಮಾ ಹಂಚಿಕೆದಾರ ವಿ.ಎಂ.ಶಂಕರ್, ಚಿತ್ರ ನಿರ್ದೇಶಕ ಸುಲ್ತಾನ್ ರಾಜು, ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಗುಣಶೇಖರ್, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ಜ್ಯೋತಿಷಿ ಭೀಮರಾವ್ ವಾಸ್ಟರ್, ಗಣೇಶ್ವರ್ ಸ್ವಾಮೀಜಿ, ಮುಂತಾದ ಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಎನ್.ಎಸ್. ಫಿಲಂಸ್ ನ ಮುಖ್ಯಸ್ಥೆ ಎನ್. ಸರಸ್ವತಿ, ಚಿತ್ರ ನಿರ್ದೇಶಕ ಹೆಚ್.ವಿ.ಪುಟ್ಟಸ್ವಾಮಿ, ಪಿ.ಆರ್.ಓ.  ವಿ.ಎಂ.ಎಸ್.ಗೋಪಿ, ನಾಯಕ ನಟ ಕ್ರಿಶ್ ನಾಯಕಿ ಯಶಸ್ವಿನಿ, ಮೈಸೂರು ಶಿವಾಜಿ, ರವಿ  ಪಾಲಹಳ್ಳಿ, ರಾಜಲಕ್ಷ್ಮಿ, ಬಾನು ಸೇರಿದಂತೆ ಮತ್ತಿತರ  ಚಿತ್ರತಂಡದ ಕಲಾವಿದರು ಇದ್ದರು ಈ ಟೀಸರ್ ಅನ್ನು  ಮಾಸ್ಟರ್ ಮೈಂಡ್ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.

admin
the authoradmin

ನಿಮ್ಮದೊಂದು ಉತ್ತರ