ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರ…. ಪ್ರಜೆಗಳೇ ಪ್ರಭುಗಳು…. ಯಾವುದೇ ರಾಜಕೀಯ ಪಕ್ಷಗಳನ್ನು ಅಧಿಕಾರಕ್ಕೆ ಏರಿಸುವ ಅಥವಾ ಇಳಿಸುವ ಶಕ್ತಿ ನಮಗೆ ಉಂಟು ಎಂದು ದೇಶದ ಪ್ರಜೆಗಳು ನುಡಿಯುವುದನ್ನು ಕೇಳುವಾಗ ಮನಸ್ಸಿಗೆ ಬಹಳ ಖುಷಿ – ಉಲ್ಲಾಸ ಉಂಟಾಗುತ್ತಿತ್ತು…..! ಆದರೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಇಂದಿನ ‘ಚುನಾವಣೆ’ಯ ಸ್ಥಿತಿ-ಗತಿಗಳ ಕಡೆ ಒಮ್ಮೆ ದೃಷ್ಟಿ ಹಾಯಿಸಿದರೇ, ಮನಸ್ಸು ನೋವಿನಿಂದ ಚೀರುತ್ತದೆ….!
ಪ್ರಜಾಪ್ರಭುತ್ವ ದೇಶದ ಬೆಲೆ- ಗೌರವ ಕಡಿಮೆಯಾಗುವ ರೀತಿಯಲ್ಲಿ ಈಗ ಚುನಾವಣೆ ನಡೆಯುತ್ತಿದೆ….!ಹಣ – ಹೆಂಡದ ಬಿರುಗಾಳಿ ಎಲ್ಲಾಡೆ ಬೀಸುತ್ತಿರುತ್ತದೆ….! ಮತದಾರ ಬಂಧುಗಳು ರಾಜಕೀಯ ಜ್ಞಾನ ಇಲ್ಲದೇ, ರಾಜಕಾರಣಿಗಳು ನೀಡುತ್ತಿರುವ ಬಿಸಿ ಬಿಸಿ ಆಶ್ವಾಸನೆಗಳನ್ನು ಕೇಳುತ್ತಾ, ಬಾಯಿ ತೆರೆದುಕೊಂಡು ಕುಳಿತುಕೊಂಡಿರುತ್ತಾರೆ….! ಜೊತೆಗೆ ರಾಜಕೀಯ ಪಕ್ಷಗಳು ನೀಡುವ ‘ಗ್ಯಾರಂಟಿ’ಗಳ ನರ್ತನಗಳನ್ನು ಸಹ ದೇಶದ ಮತದಾರರು ನೋಡುವಂತಹ ದುಸ್ಥಿತಿ ನಿಮಾ೯ಣವಾಗಿದೆ…!

ನಿಜ…., ಈ ಹಿಂದೆ ನಮ ದೇಶದಲ್ಲಿ ನಡೆಯುತ್ತಿದ್ದ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಹಣ – ಹೆಂಡದ ಅಮಲಿನಲ್ಲಿ ಕಣ್ಣು ಮುಚ್ಚಿ ಯಾವುದಾದ್ದರೂ ಒಂದು ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಬಿಡುತ್ತಿದ್ದರು…! ಯಾವುದೇ ಅಭ್ಯರ್ಥಿಗಳ ‘ ಹಣೆಬರಹ’ವು ಮತ ಚಲಾಯಿಸುತ್ತಿದ್ದ ಮತದಾರರಿಗೆ ಗೊತ್ತೇ ಇರುತ್ತಿರಲಿಲ್ಲ !ಹಣ – ಹೆಂಡಕ್ಕೆ ‘ಜೈ – ಜೈ’ ಎನ್ನುತ್ತಿದ್ದರು….!ಈಗ ಪುನಃ ಈ ಹಣ – ಹೆಂಡದ ಜೊತೆ ರಾಜಕೀಯ ಪಕ್ಷಗಳ ಹತ್ತಾರು ‘ಗ್ಯಾರಂಟಿ’ಗಳು ಸೇರಿಕೊಂಡಿವೆ….! ಈ ಗ್ಯಾರಂಟಿಗಳನ್ನು ನಂಬಿ ಮತದಾರರು ಮತ ಚಲಾಯಿಸಿದ್ದರೂ, ಅಧಿಕಾರಕ್ಕೆ ಏರಿದ ಪಕ್ಷಕ್ಕೆ ಸುಲುಭವಾಗಿ ಈ ಗ್ಯಾರಂಟಿಗಳನ್ನು ನಾಡಿನ ಪ್ರಜೆಗಳಿಗೆ ನೀಡಲು ಸಾಧ್ಯವಾಗುವುದಿಲ್ಲ….!
ಏಕೆಂದರೆ ಇವರ ಬೊಕ್ಕಸದಲ್ಲಿ ಹಣವೇ ಇರುವುದಿಲ್ಲ….! ಅಥವಾ ಕಷ್ಟದಿಂದ ಒಂದೊಂದು ಗ್ಯಾರಂಟಿಗಳನ್ನು ಜಾರಿಗೆ ಮಾಡಲು ಪ್ರಾರಂಭಿಸಿದ್ದರೂ, ಹಲವು ಯೋಜನೆಗಳು ಜಾರಿಗೆ ಬರದೇ, ಮೂಲಭೂತ ಸೌಲಭ್ಯಗಳು ಸಹ ದೊರೆಯದೇ ಮತದಾರ ಪ್ರಭುಗಳು ‘ನರಕ’ ಬದುಕು ಸಾಗಿಸಬೇಕಾಗುತ್ತದೆ…..!
ಚುನಾವಣೆ ವೇಳೆ ಮತದಾರರು ಯೋಚಿಸಿ – ಚಿಂತಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮಹಾ ‘ಕರ್ತವ್ಯ’ವಾಗಿದೆ….! ಆದರೆ ಈಗ ಎಲ್ಲಾ ರಾಜಕೀಯ ಪಕ್ಷಗಳು, ‘ಕುಚಿ೯’ಗಾಗಿ ಗ್ಯಾರಂಟಿಗಳ ಯಾತ್ರೆಯನ್ನು ಶುರು ಮಾಡಿಬಿಡುತ್ತಾರೆ…..! ಆದರೆ ಈ ಗ್ಯಾರಂಟಿಗಳು ಐದು ವಷ೯ಗಳ ಆಡಳಿತ ವೇಳೆ, ದೊಡ್ಡ ‘ಹೊರೆ’ಯಾಗಿಬಿಡುತ್ತದೆ..! ಜೊತೆಗೆ ಈ ಗ್ಯಾರಂಟಿಗಳನ್ನು ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಮತದಾರರುಗಳಿಗೆ ನೀಡುವ ‘ಲಂಚ’ ಎಂದರೇ ತಪ್ಪಾಗುವುದಿಲ್ಲ…!

ಗ್ಯಾರಂಟಿ ನೆಪದಲ್ಲಿ ಸಕಾ೯ರಕ್ಕೆ ಬರುತ್ತಿದ್ದ ‘ಅದಾಯ’ಗಳಿಗೆ ‘ಕತ್ತರಿ’ ಹಾಕಿ, ಎಲ್ಲಾವುಗಳನ್ನು ‘ಉಚಿತ – ಉಚಿತ’ ಎಂದು ಘೋಷಣೆ ಮಾಡಿದ್ದರೇ, ಆಡಳಿತ ನಡೆಸುವುದು ಸುಲುಭದ ವಿಚಾರವಾಗುವುದಿಲ್ಲ…! ಬಸ್ ಪ್ರಯಾಣ ಉಚಿತ…. ವಿದ್ಯುತ್ ಉಚಿತ…. ಮಹಿಳಾಮಣಿಗಳಿಗೆ ಗೃಹಲಕ್ಷ್ಮಿ ಹಣ…. ಎನ್ನುವಾಗ, ತಿಂಗಳುಗಳಿಗೆ ಸಾವಿರಾರು ಕೋಟಿ ರೂಪಾಯಿಗಳು ಬೇಕಾಗುತ್ತದೆ….! ಆಗ ಆಡಳಿತ ವೇಗ ಕಡಿಮೆಯಾಗುತ್ತಾ ಬರುತ್ತದೆ….!
ನಾಡಿನ ಪ್ರಜೆಗಳಿಗೆ ಯಾವುದೇ ಉಚಿತ ಗ್ಯಾರಂಟಿಗಳನ್ನು ನೀಡದೇ, ದುಡಿಯುವ ಕೈಗಳಿಗೆ ‘ಉದ್ಯೋಗ’ವನ್ನು ಸೃಷ್ಟಿಸಲು ಸಕಾ೯ರಗಳು ಗಮನ ಹರಿಸಬೇಕು….!ಪ್ರಜೆಗಳು ಸ್ವತಃ ಕಾಲಿನ ಮೇಲೆ ನಿಲ್ಲುವಂತಹ ಬಲ ಬಂದ ಮೇಲೆ, ಸರ್ವ ಮಂದಿ ಅಥಿ೯ಕವಾಗಿ ಬೆಳೆಯುತ್ತಾರೆ…! ಆದರೆ ಬಿ ಪಿ ಎಲ್ ಕಾರ್ಡ್ ಗಾಗಿ ಓಡಾಡುವುದು ಮಾತ್ರ ನಿಲ್ಲಿಸುವುದಿಲ್ಲ…!
ಯಾವುದೇ ಸಕಾ೯ರ ತನ್ನ ಪ್ರಜೆಗಳಿಗೆ ಗ್ಯಾರಂಟಿ ಯೋಜನೆಯ ಹಣವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿದ್ದರೂ, ಆ ಹಣವನ್ನು ಸಕಾ೯ರ ವಿವಿಧ ನೆಪ ಹೇಳಿ ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಲೇ ಇದೆ….! ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಲ್ಲಿ ಮಹಿಳಾಮಣಿಗಳಿಗೆ ಎರಡು ಸಾವಿರ ಕರುಣಿಸಿ, ಪುರುಷರ ಬಳಿ ‘ಕೆಂಪು ಎಣ್ಣೆ’ಯ ಮದ್ಯಕ್ಕೆ ಬೆಲೆ ಏರಿಕೆ ಮಾಡಿ, ನೀಡಿರುವ ಹಣವನ್ನು ‘ಬಡ್ಡಿ’ ಸಮೇತ ಕಿತ್ತುಕೊಳ್ಳುತ್ತಿದೆ…!
ಒಂದು ಮಾತಿನಲ್ಲಿ ಹೇಳಿದ್ದರೇ, ಈ ಯಾವುದೇ ಗ್ಯಾರಂಟಿಗಳಿಂದ ದೇಶದಲ್ಲಿ ಬದಲಾವಣೆಯ ಕ್ರಾಂತಿಯಾಗಿ, ದೇಶವು ಅಭಿವೃದ್ಧಿ ಪಥದಲ್ಲಿ ಸಾಗುವುದನ್ನು ನೋಡಲು ಸಾಧ್ಯವಿಲ್ಲ…! ಸುಮ್ಮನೆ ಗ್ಯಾರಂಟಿ ಯೋಜನೆಗಳಿಂದ ರಾಜಕೀಯ ಪಕ್ಷಗಳು ಪರಸ್ಪರ ಕಿತ್ತಾಟ ನಡೆಸುವುದನ್ನು ಮಾತ್ರ ಪುಕ್ಕಟೆಯಾಗಿ ಮತದಾರರು ವೀಕ್ಷಿಸಬಹುದಾಗಿದೆ ಅಷ್ಟೇ

ನಮ್ಮ ದೇಶದ ಕಾನೂನಿನಲ್ಲಿ ತುಸು “ತಿದ್ದುಪಡಿ ” ಮಾಡಿ, ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಚುನಾವಣೆಗಳಲ್ಲಿ ಮತದಾರರುಗಳಿಗೆ ‘ಉಚಿತ…. ಉಚಿತ… ಉಚಿತ…..’ ಎಂಬ ಗ್ಯಾರಂಟಿಗಳನ್ನು ನೀಡಬಾರದು ಎಂದು ಹೊಸ ಕಾನೂನು ಜಾರಿಗೆ ತರಬೇಕು…! ಈ ಗ್ಯಾರಂಟಿಗಳ ಬದಲಾಗಿ ದೇಶದ ಎಲ್ಲಾಡಿ ಗುಣಮಟ್ಟದ ಶಾಲೆ…. ಉತ್ತಮ ಆಸ್ಪತ್ರೆ….. ಮೂಲಭೂತ ಸೌಲಭ್ಯಗಳು….. ಬಡವರಿಗೆ ವಾಸ ಮಾಡಲು ಉತ್ತಮವಾದ ಮನೆಯನ್ನು ನಿಮಾ೯ಣ ಮಾಡಿಕೊಡಬೇಕು….! ಆಗ ರಾಜಕೀಯ ಪಕ್ಷಗಳು ನಾಲಿಗೆ ಹೊರ ಹಾಕಿ ‘ರೈಲು’ ಬಿಡದಿದ್ದರೂ, ಮತದಾರ ಪ್ರಭುಗಳು ಓಡಿ ಬಂದು ಚುನಾವಣೆ ದಿನ ಮತ ಚಲಾಯಿಸಿಬಿಡುತ್ತಾರೆ..!
ಕೊನೆ ಮಾತು: ಯಾವುದೇ ರಾಜಕೀಯ ಪಕ್ಷಗಳು ಅಧಿಕಾರ ಕುಚಿ೯ ದೊರೆತ ಮೇಲೆ, ಬೃಹತ್ ಪ್ರಮಾಣದ ‘ಭ್ರಷ್ಟಚಾರ’ಗಳನ್ನು ಮಾಡದೇ, ಮತದಾರರ ನೋವುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರೇ, ಮತದಾರರು ಮುಂದೆ ನಡೆಯುವ ಚುನಾವಣೆಯಲ್ಲಿ ನಿಮ್ಮ ‘ಕೈ’ ಬಿಡುವುದಿಲ್ಲ…! ನಿಮ್ಮ ಪಕ್ಷವು ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಏರುವುದು ಖಚಿತ….! ಇದು ಮಾತ್ರ ನೂರಕ್ಕೆ ನೂರು ‘ಗ್ಯಾರಂಟಿ’…! ಇಂತಹ ದಿನಗಳು ಬೇಗನೆ ಬರಲಿ….!!
ಬರಹ:
ಐಗೂರು ಮೋಹನ್ ದಾಸ್ ಜಿ
ಸೋಮವಾರಪೇಟೆ 9483111096








