janamanakannada > Blog > Latest > Mysore > ಹಳಿಯೂರು ಎಂಸಿಡಿಸಿಸಿ ಬ್ಯಾಂಕಿನಲ್ಲಿ ವರ್ಗಾವಣೆ ಗೊಂಡ ನೌಕರರಿಗೆ ಆತ್ಮೀಯವಾಗಿ ಬೀಳ್ಕೊಡುಗೆ
ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕು ಹಳಿಯೂರು ಎಂಸಿಡಿಸಿಸಿ ಬ್ಯಾಂಕಿನಲ್ಲಿ ವರ್ಗಾವಣೆ ಗೊಂಡ ನೌಕರರನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಓಗಳು ಸಂಘದ ವತಿಯಿಂದ ಸನ್ಮಾನಿಸಿ ಬಿಳ್ಕೂಡುಗೆ ನೀಡಲಾಯಿತು.
ಕೆ.ಆರ್.ನಗರ ಬ್ಯಾಂಕಿನ ವ್ಯವಸ್ಥಾಪಕ ಪಿ.ಸಿ.ಮೋಹನರಾಜ್, ಹಳಿಯೂರು ಶಾಖೆಯ ವ್ಯವಸ್ಥಾಪಕ ಪ್ರತಾಪ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಸವರಾಜು, ಸಿಬ್ಬಂದಿಗಳಾದ ಸಚಿನ್, ಅರ್ಜುನಹಳ್ಳಿ ನವೀನ್, ಮಹೇಶ್, , ಜಯಪ್ರಕಾಶ್, ಪಿಗ್ಮಿ ರವಿ ಇವರುಗಳಿಗೆ ಫಲತಾಂಬೂಲ ಮತ್ತು ಉಡುಗೊರೆ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಾದ ಎನ್.ದಿನೇಶ್, ಟಿ.ಉಮೇಶ್, ಯುವರಾಜ್, ಸಿಇಓಗಳಾದ ಅನಂತ್, ಚಂದ್ರಕಲಾ, ಕೃಷ್ಣೇಗೌಡ, ಸುರೇಶ್, ಮಂಜು, ಎಸ್.ಪಿ.ತ್ಯಾಗರಾಜು, ಅರುಣ್ ಮತ್ತಿತ್ತರರು ಹಾಜರಿದ್ದರು.
Tags:saligrama news
admin
You Might Also Like
ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ
adminಸೆಪ್ಟೆಂಬರ್ 19, 2026
ಅಸಹಾಯಕ ದಲಿತ ಯುವಕನಿಗೆ ಬಿ.ಪಿ.ಎಲ್ ಕಾರ್ಡ್ ಕೊಡಿಸಿ ಮಾನವೀಯತೆ ಮೆರೆದ ದಸಂಸ
adminಸೆಪ್ಟೆಂಬರ್ 19, 2026








