LatestSports

FIFA worldcup FOOTBALL 2026: ವಿಶ್ವಕಪ್ ಫುಟ್‍ಬಾಲ್… ಸಾವಿರಾರು ವರ್ಷಗಳ ವೈಭವದ ಇತಿಹಾಸ!

ಇದು ವಿಶೇಷ ಲೇಖನದ ಭಾಗ-2

ಫಿಫ ವರ್ಲ್ಡ್ ಕಪ್ ಫುಟ್ಭಾಲ್ ಆರಂಭವಾಗಿದೆ.. ಇದರ ಕುರಿತ ಇನ್ನಷ್ಟು ಮಾಹಿತಿಯನ್ನು  ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಓದುಗರಿಗಾಗಿ ನೀಡಿದ್ದಾರೆ.

ಈಗಾಗಲೇ ವಿಶ್ವದ ಫುಟ್ಭಾಲ್ ಪ್ರೇಮಿಗಳ ಮನಸೆಳೆದಿರುವ ಫಿಫ ಕಪ್ ಆರಂಭವಾಗಿದೆ. 11.06.2026ರಿಂದ 19.07.2026ವರೆಗೆ 39 ದಿನಗಳ ಪರ್ಯಂತ ಒಟ್ಟು 104 ಪಂದ್ಯಗಳು ನಡೆಯಲಿದ್ದು 48 ದೇಶದ ಪ್ರತಿಯೊಂದು ತಂಡದಿಂದ 26ಮಂದಿಯಂತೆ ಒಟ್ಟಾರೆ 1248 ಆಟಗಾರರಿದ್ದು ಇವರಲ್ಲಿ 892 ನೂತನ ಆಟಗಾರರು ಪಾದಾರ್ಪಣೆ ಮಾಡಲಿದ್ದಾರೆ. ಈಪೈಕಿ ಈಗಾಗಲೇ ವಿಶ್ವಕಪ್ ಗೆದ್ದಂಥ 22 ಹಿರಿಯ ತಾರೆಯರಿದ್ದಾರೆ. ಈ ಟೂರ್ನಿಯ ಅತಿ ಕಿರಿಯ ಆಟಗಾರ ಸ್ಪೇನ್ ದೇಶದ 18 ವರ್ಷದ ಲ್ಯಾಮಿನೆ ಯಮಲ್ ಹಾಗೂ ಅತ್ಯಂತ ಹಿರಿಯ ಆಟಗಾರ ಪೋರ್ಚುಗಲ್ ದೇಶದ 42ವರ್ಷದ ಕ್ರಿಶ್ಚಿಯಾನೋ ರೊನಾಲ್ಡೋ ಆಡಲಿದ್ದಾರೆ.

23ನೇವಿಶ್ವಕಪ್ ಪಂದ್ಯದ 39ದಿನದ ಪಯಣ

ಪ್ರತಿಯೊಂದು ಪಂದ್ಯ ನಡೆಯುವಾಗ (10+1ಗೋಲಿ@ಗೋಲ್ ಕೀಪರ್ ಸೇರಿದಂತೆ) ತಲಾ 11 ಆಟಗಾರರ 2 ತಂಡ ಮೈದಾನದಲ್ಲಿದ್ದು ಎರಡೂ ತಂಡದಿಂದ ಒಟ್ಟು (20+2)22 ಆಟಗಾರರ ನಡುವೆ ಪಂದ್ಯವು ನಾಗಾಲೋಟದಿಂದ ಸಾಗುತ್ತದೆ. ಪ್ರತಿಒಂದು ಪಂದ್ಯ ಮುಕ್ತಾಯವಾಗಲು 90 ನಿಮಿಷ (ಒಂದೂವರೆ ಗಂಟೆ) ಅವಧಿ ಬೇಕಾಗುತ್ತದೆ. ಇದರಲ್ಲಿ 45 ನಿಮಿಷದ ಫಸ್ಟ್ ಹಾಫ್+45 ನಿಮಿಷದ ಸೆಕೆಂಡ್ ಹಾಫ್ ನಿಗಧಿ ಪಡಿಸಿದೆ. ಅಪರೂಪದ “ಟೈಬ್ರೇಕ್” ಹೆಚ್ಚುವರಿ ಸಮಯವನ್ನ ಸಂದರ್ಭಕ್ಕೆ ತಕ್ಕಂತೆ ನಿಗಧಿ ಪಡಿಸಲಾಗುತ್ತದೆ.

ಪ್ರತಿದಿನ 2 ಘಟಾನುಘಟಿ ತಂಡಗಳ ನಡುವೆ ಜಿದ್ದಾಜಿದ್ದಿ ಸ್ಫರ್ಧಾತ್ಮಕ ಪಂದ್ಯ ನಡೆಯಲಿವೆ. ಒಟ್ಟಾರೆ 39 ದಿನಗಳು 32 ತಂಡಗಳು ತಮ್ಮ ಎದುರಾಳಿ ವಿರುದ್ಧ ರೋಷಾವೇಷದಿಂದ ಆಡುವ ಕಾಲ್ಚೆಂಡಾಟದ ಪ್ರತಿಯೊಂದು ಪಂದ್ಯ ಕುತೂಹಲ ಭರಿತವೂ ಅಮೋಘವೂ ಆಗಿರುತ್ತದೆ. ಅನೇಕ ರೋಚಕ ಕ್ಷಣಗಳ ನೂತನ ದಾಖಲೆಗಳೊಡನೆ ಹುಚ್ಚೆದ್ದು ಕುಣಿವ ಅಭಿಮಾನಿಗಳು. ಸೆಕ್ಸೀ ಮಾಡೆಲ್ಸ್, ಸಿನಿಮ ಕ್ರೀಡಾ ಸೆಲಿಬ್ರಿಟೀಸ್, ಮಹಾರಾಜ ಮನೆತನದವರು, ರಾಜಕಾರಣಿ ದಿಗ್ಗಜರು, ಗಣ್ಯಾತಿಗಣ್ಯರು, ಚೀರ್ ಲೀಡರ್ಸ್, ಬಣ್ಣಬಣ್ಣದ ಬಾವುಟ, ಬಾಣ ಬಿರುಸು ಪಟಾಕಿ ರಾಕೆಟ್ ಗುದ್ದಾಟ ಮುದ್ದಾಟ ಇತ್ಯಾದಿ ಆಕರ್ಷಕ ಮನಮೋಹಕದೃಶ್ಯ ಎದುರಾಗಲಿದೆ

ಸೋಲು-ಗೆಲುವಿನ ಗೋಲುಗಳು, ಇದನ್ನು ಹೊಡೆದವರ ಹೊಡೆಸಿಕೊಂಡವರ ತುಂಟಾಟ, ಪೀಕಲಾಟ, ಬಿದ್ದಾಟ ಒದ್ದಾಟ, ವ್ಯಂಗ್ಯ, ಸದ್ದು ಗದ್ದಲ. ತಂಡದ ನಾಯಕನ ಅಭಿಪ್ರಾಯ, ಕೋಚ್‍ನ ಮಾರ್ಗದರ್ಶನ, ಟಿ.ವಿ. ಲೈವ್  ನೇರಪ್ರಸಾರ ಮುಂತಾದವು ವಿಶ್ವಕಪ್ ಫುಟ್ಬಾಲ್ ಬಗ್ಗೆ ಗೊತ್ತಿಲ್ಲದ ಶ್ರೀಸಾಮಾನ್ಯರನ್ನೂ ತನ್ನತ್ತ ಸೆಳೆದು ಕಣ್ಮನ ತಣಿಸುತ್ತದೆ ಎಲ್ಲರ ಕೈಕಾಲು ಮೈ ಕುಣಿಸುತ್ತದೆ ಆಮೂಲಕ ಮತ್ತೊಂದು ಚಿರಸ್ಮರಣೀಯ ಹೊಸಇತಿಹಾಸ ಸೃಷ್ಟಿಯಾಗುತ್ತದೆ. ಕಾಲ್ಚೆಂಡಾಟ ಹಬ್ಬದ ಪೂರ್ವಭಾವಿಯಾಗಿ ಕಳೆದ ಒಂದು ವರ್ಷದಿಂದ ನಡೆದ ಅರ್ಹತಾ ಪಂದ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದ 175 ರಾಷ್ಟ್ರಗಳ ಪೈಕಿ ಕೇವಲ 48 ದೇಶ-ತಂಡಗಳು ಮಾತ್ರ ಅರ್ಹತೆ ಪಡೆದು ಆಡಲಿವೆ.

ಇದುವರೆಗೆ ನಡೆದಿರುವ ಒಟ್ಟು 22 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಶ್ವಕಪ್ ವಿಜೇತ ದೇಶಗಳು:

ಅರ್ಜೆಂಟೀನ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇಯಿನ್.  ಈ ಪೈಕಿ ಒಟ್ಟು 5 ಬಾರಿ ವಿಶ್ವಕಪ್ ಚಾಂಪಿಯನ್‍ಶಿಪ್ ಗೆದ್ದು ನೇರವಾಗಿ ಅರ್ಹತಾ ಗುಂಪು ಪ್ರವೇಶಿಸಿದ ಕೀರ್ತಿ ಹೊಂದಿರುವ ಏಕೈಕ ರಾಷ್ಟ್ರ ಬ್ರೆಝಿಲ್?! ಅರ್ಹತಾ ಗುಂಪಿಗೆ ಸೇರುವ ಮುನ್ನ ಜರುಗುವ ಅರ್ಹತಾ ಪಂದ್ಯಗಳಲ್ಲಿ ವಿಶಿಷ್ಟ ಮತ್ತು ವಿಶೇಷವಾದ ಮಾನದಂಡ ರೂಪುರೇಶೆ ಇರುತ್ತವೆ. ಇದರಲ್ಲಿ ಅತಿ ಹೆಚ್ಚು ಗೋಲು ಹೊಡೆದ, ಗೋಲುಗಳ ಸಂಖ್ಯಾ ಅಂತರ ಕೂಡ ಹೆಚ್ಚಿನದ್ದು ಆಗಿರಬೇಕು. ಅತಿ ಹೆಚ್ಚು ಅಂಕ ಗಳಿಸಿದ ಆಧಾರದ ಮೇಲೆ ಒಟ್ಟು 32 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ತಲಾ 4(ದೇಶದ)ತಂಡ ಗಳನ್ನು ಒಂದೊಂದು ಗುಂಪಿಗೆ ಸೇರಿಸಲ್ಪಟ್ಟು ಎ.ಬಿ.ಸಿ.ಡಿ,ಈ, ಎಫ್, ಜಿ.ಹೆಚ್, …..ಗುಂಪುಗಳಲ್ಲಿ [8 ಬೈ 6] 48 ತಂಡಗಳು ಅರ್ಹ ಗುಂಪಿಗೆ ಸೇರುತ್ತವೆ.

ಇದೆಲ್ಲ ಪ್ರಕ್ರಿಯೆಯ ಪರಿಕ್ರಿಯೆ ಹಂತಗಳ ನಂತರ ಆಯಾ ದೇಶ/ತಂಡ ಗಳಿಸುವ ಗೋಲು, ಗೆಲುವು, ಅಂಕದ ಅಂಕಿ-ಅಂಶ ಆಧಾರದ ಮೇಲೆ ನಾಕ್‍ ಔಟ್‍ ಹಂತ ಕ್ವಾರ್ಟರ್ ಫೈನಲ್ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುತ್ತವೆ. ಅಂತಿಮವಾಗಿ ಗೆಲುವು ಸಾಧಿಸುವ ವಿನ್ನರ್ ಮತ್ತು ರನ್ನರ್‍ಅಪ್ ತಂಡಗಳಿಗೆ ನಿಗಧಿ ಪಡಿಸಿದ ಕಪ್ ಮತ್ತು ನಗದು ಬಹುಮಾನ ವಿತರಿಸಲಾಗುವುದು.

ಬಹುಮಾನದ ಮೊತ್ತ ಎಷ್ಟು ಗೊತ್ತಾ?

32-17ನೆ ಸ್ಥಾನದ ತಂಡಗಳಿಗೆ ತಲಾ 9 ದಶಲಕ್ಷ ಡಾಲರ್ ನಗದು; 16-9ನೇ ಸ್ಥಾನದ ತಂಡಗಳಿಗೆ ತಲಾ 13ದಶಲಕ್ಷ ಡಾಲರ್ ನಗದು 8-5ನೇ ಸ್ಥಾನದ ತಂಡಗಳಿಗೆ ತಲಾ 17 ದಶಲಕ್ಷ ಡಾಲರ್ ನಗದು 4ನೇ ಸ್ಥಾನದ ತಂಡಕ್ಕೆ 25 ದಶಲಕ್ಷ ಡಾಲರ್ ನಗದು; 3ನೇ ಸ್ಥಾನದ ತಂಡಕ್ಕೆ 27 ದಶಲಕ್ಷ ಡಾಲರ್  ನಗದು;

2ನೇ ಸ್ಥಾನದ ರನ್ನರ್ ಅಪ್ ತಂಡಕ್ಕೆ 30 ದಶಲಕ್ಷ ಡಾಲರ್ ಹಾಗೂ ವಿಜೇತ ಚಾಂಪಿಯನ್ಸ್ ತಂಡಕ್ಕೆ 42 ದಶಲಕ್ಷ ಡಾಲರ್ ನಗದು ಬಹುಮಾನ ನೀಡಲಾಗುತ್ತದೆ. ಒಟ್ಟಾರೆ 440 ದಶಲಕ್ಷ ಡಾಲರ್ ನಗದು ಬಹುಮಾನದ ಬೃಹತ್ ಮೊತ್ತವನ್ನು ಖರ್ಚು ವೆಚ್ಚ ಮಾಡಲಾಗುತ್ತದೆ.

ಬಜೆಟ್,ಸಿಬ್ಬಂದಿ,ಅಲಂಕಾರ,ತಂಗುದಾಣ,ಕ್ರೀಡಾಂಗಣ, ಇತ್ಯಾದಿ ಬಗ್ಗೆ ಪಕ್ಷಿನೋಟ:-

ಒಟ್ಟು 12 ಬೃಹತ್ ಸುಸಜ್ಜಿತ ಕ್ರೀಡಾಂಗಣ ಸಿದ್ಧಪಡಿಸಲಾಗಿದ್ದು ಪ್ರತಿಯೊಂದು ಕ್ರೀಡಾಂಗಣದಲ್ಲಿ ಸರಾಸರಿ 60ಸಾವಿರ ಪ್ರೇಕ್ಷಕರು ಕುಳಿತು ಪಂದ್ಯವನ್ನು ವೀಕ್ಷಿಸುವಂತೆ ಅಣಿಗೊಳಿಸಲಾಗಿದೆ.

2026ರ ವಿಶ್ವಕಪ್ ಪಂದ್ಯಾವಳಿ ಆತಿಥೇಯ ಮೆಕ್ಸಿಕೊ ದೇಶಕ್ಕೆ ಪ್ರಾಯೋಜಕತ್ವದ ನಿಮಿತ್ತ ತಗಲುವ ಒಟ್ಟು ಖರ್ಚು ವೆಚ್ಚದ ಅಂದಾಜು 2200 ಮಿಲಿಯನ್ ಯುಎಸ್ ಡಾಲರ್. ಇದಲ್ಲದೇ ಪ್ರತಿದಿನ/ಪ್ರತಿಯೊಂದು ಪಂದ್ಯಕ್ಕೆ: ಅಂದಾಜು 65ಸಾವಿರ ಪ್ರೇಕ್ಷಕರು, 42 ಮಂದಿ ಆಟಗಾರರು ಸೇರಿದಂತೆ ಪ್ರತಿ ತಂಡದಿಂದ 62 ಮಂದಿ ಪ್ರವೇಶಿಸಲು ಅವಕಾಶವಿದೆ. 1500 ಸಿಬ್ಬಂದಿವರ್ಗ, ಒಂದು ಬಾರಿಗೆ 3500 ಪ್ಲೇಟ್ ತಿಂಡಿ ಮತ್ತು ತಂಪುಪಾನೀಯ ಸರಬರಾಜು ಇರುತ್ತದೆ.

ವಸತಿ ಊಟ  ಇತ್ಯಾದಿ ಅನುಕೂಲತೆ:-

ಒಟ್ಟು 39 ದಿನ ಉಳಿದುಕೊಳ್ಳಲು ಊಟ ವಸತಿಗಾಗಿ ಸುವ್ಯವಸ್ಥಿತ ಸುಸಜ್ಜಿತ ಸ್ಟಾರ್ ದರ್ಜೆಯ 138 ಹೊಟೇಲುಗಳಲ್ಲಿ 3000 ಕೊಠಡಿಗಳನ್ನು ಕಾದಿರಿಸಲಾಗಿದೆ. ಇವರೆಲ್ಲರ ಸಾಗಣೆ ಸಾರಿಗೆ ಪ್ರಯಾಣಕ್ಕೆ ಅನುಕೂಲ ಆಗುವಂತೆ 242 ಬಸ್, 184 ಕಾರ್,

425 ಕ್ಯಾಬ್/ಟ್ಯಾಕ್ಸಿ , 52 ಆಂಬುಲೆನ್ಸ್, 32 ಮೆಡಿಕಲ್ ಸ್ಟೋರ್ಸ್ ಅಲ್ಲದೇ 100ಕ್ಕೂ ಹೆಚ್ಚು ವೈದ್ಯರ 200ಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ವರ್ಗದ ನೇಮಕ ಮಾಡಲಾಗಿದ್ದು ಇವರೆಲ್ಲರೂ 24×7 ಸಿದ್ಧವಾಗಿರುತ್ತಾರೆ. ಇದೆಲ್ಲದರ ಜತೆಗೆ ಪ್ರತಿಯೊಬ್ಬರಿಗು ಡ್ರೆಸ್ ಕೋಡ್ ಷೂಸ್, ಇತ್ಯಾದಿ ಎಲ್ಲವನ್ನು ಬಹಳ ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದಾರೆ.

ಸ್ವರ್ಣಕಪ್ ತಯಾರಿಕೆ, ಶಿಲ್ಪಿ, ಕಳ್ಳತನ, ಇತ್ಯಾದಿ ಚರಿತ್ರೆ:- 

1930ರಿಂದ 1970ವರೆಗೆ ವಿಶ್ವ ಫುಟ್ಬಾಲ್ ಚಾಂಪಿಯನ್‍ಶಿಪ್ ವಿಜೇತ ತಂಡಕ್ಕೆ ‘ಜೂಲ್ಸ್ ರಿಮೇಟ್ ರೋಲಿಂಗ್ ಶೀಲ್ಡ್’ ಟ್ರೋಫಿ ನೀಡಲಾಗುತ್ತಿತ್ತು. 1970ರಿಂದ ಸುವರ್ಣ ವಿಶ್ವಕಪ್ ನೀಡಲು ತೀರ್ಮಾನಿಸಿದ ಫಿಫ ಸಂಸ್ಥೆ ಆಡಳಿತ ಮಂಡಳಿಯು 1970ರಲ್ಲಿ ಸದರಿ ಫುಟ್ಬಾಲ್ ಚಾಂಪಿಯನ್‍ಶಿಪ್ ಗೆದ್ದ ಬ್ರೆಜಿಲ್ ದೇಶಕ್ಕೆ ಹೊಸದಾಗಿ ಪ್ರಾರಂಭಿಸಿದ ಸುವರ್ಣ ವಿಶ್ವಕಪ್‍ಅನ್ನು ಮೊಟ್ಟ ಮೊದಲ ಬಾರಿಗೆ ಪ್ರದಾನ ಮಾಡಿತು! ಅಲ್ಲದೇ 1970ರಿಂದ ವಿಶ್ವಕಪ್ ವಿಜೇತ ತಂಡ-ದೇಶ ಸದರಿ ಸುವರ್ಣ ಕಪ್ಪನ್ನು ಶಾಶ್ವತವಾಗಿ ತಮ್ಮಲ್ಲೇ ಇಟ್ಟುಕೊಳ್ಳಲು ಅನುಮತಿ ನೀಡಲಾಯಿತು.

ಹೊಸ ನಿಯಮಾವಳಿ ಪ್ರಕಾರ 6.225 ಕಿಲೊಗ್ರಾಂ ತೂಕವಿರುವ 18 ಕ್ಯಾರೆಟ್‍ಬಂಗಾರದ ಸುವರ್ಣ ವಿಶ್ವಕಪ್ ರೂಪುರೇಷೆಯನ್ನು 1970ರಲ್ಲಿ ವಿನ್ಯಾಸಗೊಳಿಸಿದ ಇಟಾಲಿಯನ್ ಆರ್ಕಿಟೆಕ್ಟ್[ಸ್ಕಲ್‍ಪ್ಟರ್] ಹೆಸರು ಸಿಲ್ವಿಯೊ ಘಝನಿಗ!  ಇದರ ಬಗ್ಗೆ ಈಷ್ರ್ಯಾಸೂಯೆ ಅಥವ ಮೋಹಕ್ಕೆ ಒಳಪಟ್ಟ ಲೋಭಿಗಳು ಅಥವ ಹಿಂಸಾನಂದ ಕಳ್ಳರು [ಸ್ಯಾಡಿಸ್ಟ್ ಸ್ಟೀಲರ್ಸ್] ಸದರಿ ಸುವರ್ಣ ಕಪ್ಪನ್ನು 1983ರಲ್ಲಿ ಅದುಹೇಗೋ ಮೂಲ ಕಪ್ ಸ್ಥಳದಲ್ಲಿ ನಕಲು ಇರಿಸಿ ಒರಿಜಿನಲ್ ಕಪ್ಪನ್ನು ಕದ್ದೊಯ್ದ ಕಳ್ಳರು ಅದನ್ನು ಕರಗಿಸಿಬಿಟ್ಟಿದ್ದರು. ವಿಧಿಇಲ್ಲದೆ ಫಿಫ ಸಂಸ್ಥೆಯು ಕೂಡಲೇ ಮತ್ತೊಮ್ಮೆ ಅದೇ ಶಿಲ್ಪವಿನ್ಯಾಸಕನ ಸಲಹೆ ಸೂಚನೆ ಪಡೆದು ಮೂಲದಂತೆ ಮತ್ತೊಂದು ಸ್ವರ್ಣಕಪ್ ತಯಾರಿಸಿ ವಿಜೇತ ತಂಡ(ದೇಶ)ಕ್ಕೆ ತಲುಪಿಸಿದರು.

ಕಾಲ್ಚೆಂಡಿಗೂ ಕ್ಯಾಮರಾಕಣ್ಣು ಆಧುನಿಕ ತಂತ್ರಜ್ಞಾನ:-

ಫುಟ್ಬಾಲ್ ತವರು ಎಂದೇ ಕರೆಯಲಾಗುವ ಬ್ರೆಜಿಲ್ ದೇಶದಲ್ಲಿ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲಿ ಆವರಿಸಿ ಈಗ ಕ್ರೀಡಾ ಕ್ಷೇತ್ರಕ್ಕು ಅಂಟಿದೆ. ಮುಖ್ಯವಾಗಿ ಫುಟ್ಬಾಲ್ ಪಂದ್ಯಕ್ಕೆ ಬೇಕಾದ ಚೆಂಡಿಗೂ ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಲಗ್ಗೆ ಹಾಕಿದೆ. ಬ್ರಾಜುಕಾಂ (ಬ್ರೆಜಿಲ್‍ಭಾಷೆಯಲ್ಲಿ: ಬ್ರೆಜಿಲಿಯನ್ನರ ಜೀವನಶೈಲಿ) ಎಂದು ಕರೆಯಲ್ಪಡುವ ಕಾಲ್ಚೆಂಡಿನ ಬಣ್ಣವು ನೀಲಿ ಕಿತ್ತಳೆ ಹಸಿರು ಛಾಯೆ ಮತ್ತು ನಕ್ಷತ್ರಗಳನ್ನು ಹೊಂದಿರುವುದರ ಜತೆಗೆ ಆರು ಇನ್‍ಬಿಲ್ಟ್ ಹೈ-ಡಿಫೈನ್ಡ್ ಕ್ಯಾಮರಗಳನ್ನು ಒಳಗೊಂಡಿದೆ.

ಹಾಗಾಗಿ ಕ್ರೀಡಾಂಗಣದ ಸುತ್ತಮುತ್ತ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು 360 ಡಿಗ್ರಿಯಲ್ಲಿ ಸೆರೆಹಿಡಿವ ದೃಶ್ಯಗಳು ವೀಕ್ಷಕರಿಗೆ ಲಭ್ಯವಾಗಲಿದೆ. ಇದುವರೆಗೆ ಉಪಯೋಗಿಸಲಾದ  ಹಗುರ ಭಾರದ ಚೆಂಡುಗಳಿಗೆ ಪ್ರತಿಯಾಗಿ ಹೊಸದಾದ ಈಗಿನ  ಸುಧಾರಿಸಿದ ಉತ್ತಮ ಗ್ರಿಪ್-ಟಚ್‍ಉಳ್ಳ ಚೆಂಡುಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಮೈದಾನದಲ್ಲಿ ಚೆಂಡು ಸಾಗುವ ಹಾದಿಯನ್ನು ಗುರುತಿಸುವಂಥ ತಂತ್ರಜ್ಞಾನದ ಕ್ಯಾಮರಾ ಸಹಿತ ವಿನ್ಯಾಸ ಇರುತ್ತದೆ. ಇದೇ ಈ ಬ್ರಾಜುಕಾಂ ಫುಟ್ಬಾಲ್ನ ವಿಶೇಷತೆ!

ಫುಟ್ಬಾಲ್ ಲೋಕದ ದಂತಕತೆ ದಿಗ್ಗಜರು

  • 1930-50 : ಸರ್ ಸ್ಟ್ಯಾನ್ಲಿಮ್ಯಾಥ್ಯೂಸ್, ರೈಟ್‍ವಿಂಗರ್ – ಇಂಗ್ಲೆಂಡ್ ತಂಡ
  • 1950-60 : ಲೆವ್‍ಯಶೀನ್, ಗೋಲ್‍ಕೀಪರ್ – ಡೈನಮೊಮಾಸ್ಕೊ+ರಷ್ಯ ತಂಡ
  • 1950-60 : ಗಾರಿಂಚಾ, ರೈಟ್‍ವಿಂಗರ್ – ಬೊಟಫೊಗೊ+ಬ್ರೆಜಿಲ್ ತಂಡ
  • 1950-70 : ಪೀಲೇ, ಫಾರ್ವರ್ಡ್ – ಬ್ರೆಜಿಲ್+ಸ್ಯಾಂಟಾಸ್ ತಂಡ
  • 1950-70 : ಸರ್ ಬಾಬಿಚಾರಿಟಾನ್, ಎಟಿಟಿಮಾಡಿಫಯರ್ – ಇಂಗ್ಲೆಂಡ್+ಮ್ಯಾನ್‍ಯುಟಿಡಿ ತಂಡ
  • 1950-55 : ಫೆರಿಕ್‍ಪುಸ್ಕಾಸ್, ಫಾರ್ವರ್ಡ್ – ಹಾನ್ವೆಡ್[ರಿಯಲ್‍ಮ್ಯಾಡ್ರಿಡ್]+ಹಂಗರಿ ತಂಡ
  • 1950-55 : ಆಲ್‍ಫ್ರೆಡೊ.ಡಿ.ಸ್ಟಿಫಾನೊ ಆಲ್ರೌಂಡರ್ – ರಿಯಲ್‍ಮ್ಯಾಡ್ರಿಡ್+ಸ್ಪೇನ್ ತಂಡ
  • 1960-65 : ಇಸಾಬಿಯೊ, ಸ್ಟ್ರೈಕರ್ – ಪೋರ್ಚುಗಲ್+ಬೆನಿಫಿಕಾ ತಂಡ
  • 1960-70 : ಜಾರ್ಜ್‍ಬೆಸ್ಟ್, ರೈಟ್-ಲೆಫ್ಟ್‍ವಿಂಗರ್ – ಉ.ಕೊರಿಯಾ+ಮ್ಯಾನ್‍ಯುಟಿಡಿ ತಂಡ
  • 1960-70 : ಫ್ರಾಂಚ್‍ಬೆಕೆನ್, ಸ್ವೀಪರ್ – ಪ.ಜರ್ಮನಿ+ಬೈರನ್ ಮ್ಯೂನಿಚ್ ತಂಡ
  • 1970-75 : ಜೋಹಾನ್‍ಕ್ರಿಫ್, ಫಾರ್ವರ್ಡ್ – ನೆದರ್‍ಲ್ಯಾಂಡ್+ಬಾರ್ಸಲೋನ ತಂಡ
  • 1970-80 : ಮೈಕೆಲ್‍ಪ್ಲಾಟಿನಿ, ಮಿಡ್‍ಫೀಲ್ಡರ್ – ಫ್ರಾನ್ಸ್+ಜ್ಯುವೆಂಟಸ್ ತಂಡ
  • 1980-90 : ಡಿಯಾಗೋಮೆರಡೋನ, ಮಿಡ್‍ಫೀಲ್ಡರ್ – ಅರ್ಜೆಂಟಿನ+ಬಾರ್ಸಲೋನ ತಂಡ
  • 1990-2000:ರೊನಾಲ್ಡೊ,ಸ್ಟ್ರೈಕರ್-ಬ್ರೆಜಿಲ್+ಬಾರ್ಕಾ ತಂಡ
  • 1990-2000 : ಜೆನೆಡಿನ್‍ಜಿಡಾನೆ, ಮಿಡ್‍ಫೀಲ್ಡರ್ – ಫ್ರಾನ್ಸ್+ಜ್ಯುವೆಂಟಿಸ್ ತಂಡ
  • 2000-2010 : ಲಯನ್‍ಮೆಸ್ಸಿ, ರೈಟ್‍ವಿಂಗರ್/ಫಾರ್ವರ್ಡ್ – ಅರ್ಜೆಂಟಿನ+ಬಾರ್ಸಲೋನ ತಂಡ
  • 2000-2020: ಡಿಯೆಗೊ ಫೋರ್ಲಾನ್‍ ಕೊರಝೊ, ಫಾರ್ವರ್ಡ್-ಉರುಗ್ವೆ + ಯೂರೋಪ್ ತಂಡ
  • 2000-2020: ಮಿರೊಸ್ಲವ್‍ ಕ್ಲೋಸ್, ಸ್ಟ್ರೈಕರ್ ಜರ್ಮನಿ ತಂಡ.

ಕಳೆದ 2022ಫೀಫ ವಿಶ್ವ ಕಪ್ ಫುಟ್‍ಬಾಲ್‍  ಟೂರ್ನಿಯ ವಿಜೇತ ತಂಡಗಳು:-

ಅರ್ಜೆಂಟೀನ ದೇಶದ ತಂಡವು ಚಾಂಪಿಯನ್ ಪಟ್ಟಪಡೆದು ವಿಶ್ವಕಪ್ ತನ್ನದಾಗಿಸಿಕೊಂಡಿತು.

ಫ್ರಾನ್ಸ್‌ ದೇಶದ ತಂಡವು ರನ್ನರ್ ಅಪ್ ಸ್ಥಾನದ ವಿಜೇತರಾಗಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಇದುವರೆಗಿನ 22 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ದೇಶಗಳು:-

*ಬ್ರೆಝಿಲ್ 5 ಬಾರಿ (1958,1962,1970,1994,2002)

*ಜರ್ಮನಿ 4 ಬಾರಿ (1954,1974,1990,2014)

*ಇಟಲಿ 4 ಬಾರಿ (1934,1938,1982,2006)

*ಅರ್ಜೆಂಟೀನ 3 ಬಾರಿ (1978,1986,2022)

*ಫ್ರಾನ್ಸ್ 2 ಬಾರಿ (1998,2018)

*ಉರುಗ್ವೆ 2 ಬಾರಿ (1930,1950)

*ಇಂಗ್ಲೆಂಡ್ 1 ಸಲ (1966)

*ಸ್ಪೇನ್ 1 ಸಲ (2010)

ಇವುಗಳ ಪೈಕಿ ಒಟ್ಟು 5 ಬಾರಿ ಚಾಂಪಿಯನ್‍ಶಿಪ್ ಗೆದ್ದ ಕಾರಣ ನೇರವಾಗಿ ಅರ್ಹತಾ ಗುಂಪು ಪ್ರವೇಶಿಸಿದ ಕೀರ್ತಿ ಪಡೆದ ಏಕೈಕ ರಾಷ್ಟ್ರ ಬ್ರೆಝಿಲ್?!

FIFA worldcup FOOTBALL 2026: ವಿಶ್ವಕಪ್ ಫುಟ್‍ಬಾಲ್… ಸಾವಿರಾರು ವರ್ಷಗಳ ವೈಭವದ ಇತಿಹಾಸ!

admin
the authoradmin

11 ಪ್ರತಿಕ್ರಿಯೆಗಳು

  • ನಮಸ್ಕಾರ ಜನಮನ ಕನ್ನಡ ಪತ್ರಿಕೆಯ ಬಳಗದವರಿಗೆ. ಈಗ FIFA ವಿಶ್ವಕಪ್ನ ಫುಟ್‍ಬಾಲ್‍ ಲೇಖನ ಓದಿದ ನಂತರ ನನಗೆ ಅನಿಸಿದ್ದು ಏನೆಂದರೆ. ನಿಮ್ಮ ವೆಬ್ ಸೈಟ್ ಪತ್ರಿಕೆಯನ್ನು ನನ್ನ ಗೆಳೆಯ ಶ್ರೀಕಾಂತ್ ಇಟಗಿ ಕಳೆದ ಐದಾರು ತಿಂಗಳಿಂದ ನನ್ನ ವಾಟ್ಸಾಪ್ ಗೆ ಕಳಿಸುತ್ತಿದ್ದಾರೆ. ಅವರ ಶಿಫಾರಸ್ಸಿಂದ ಕುಮಾರಕವಿಯವರ ಲೇಖನಗಳನ್ನು ಓದಲು ಶುರುಮಾಡಿದೆ ಆದರೆ ಕಾಮೆಂಟ್ ಮಾಡಿರಲಿಲ್ಲ. ಎಲ್ಲವೂ ಅಮೋಘ ಅದರಲ್ಲೂ ವಿಶೇಷವಾಗಿ ಸಿನಿಮಾದ ಅಂಕಣ ಚಂದನವನ ಚರಿತ್ರೆ ಮತ್ತು ಸಾಹಿತ್ಯದ ಅಂಕಣ ಅವಲೋಕನ ಬಹಳ ಉತ್ತಮವಾಗಿ ಬರೆಯುತ್ತಾರೆ. ಪ್ರಪಂಚದ/ದೇಶದ/ರಾಜ್ಯಧ/ಜೀವನದ ಪ್ರತಿಯೊಂದು ಕ್ಷೇತ್ರದ ಬಗ್ಗೆ ಕಾಳಜಿ ಹುಟ್ಟಿಸುವಂತೆ ಬರೆಯುವ ಮೂಲಕ ನನ್ನಂಥ ಒರಟರ ತನುಮನ ವನ್ನೂ ಗೆದ್ದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ನಟರಾಜರು ಬರೆಯದ ವಿಷಯವೇ ಇಲ್ಲವಲ್ಲ ಸ್ವಾಮಿ…??!!. ದೇವರು ಇವರನ್ನು ಚೆನ್ನಾಗಿ ಇಟ್ಟಿರಲಿ. ತುಂಬ ಸಂತೋಷದಿಂದ ಅಶೀರ್ವಾದ ಮಾಡಿದ್ದೇನೆ. ನಾನೊಬ್ಬ ವಿಧಾನಸೌಧ ಸೆಕ್ರೆಟೀರಿಯಟ್ ನ ನಿವೃತ್ತ ಗೆಝೆಟೆಡ್ ಆಫೀಸರ್ 78 ವಯಸ್ಸು.
    ನಮಸ್ಕಾರ, ಶುಭಂ. ಎಂ.ಸುಅಂದರರಾಜ ಅಯ್ಯಂಗಾರ್, ಕುಮಾರಕೃಪ ಹೈಗ್ರೌಅಂಡ್ಸ್ ಬಡಾವಣೆ ಬೆಂಗಳೂರು 560001

  • ನೀವು ಬರೆದ “ವಿಶ್ವಕಪ್ ಫುಟ್ಬಾಲ್-2026” ಲೇಖನದ ವಿಷಯ ತುಂಬಾ ಚೆನ್ನಾಗಿದೆ ಮತ್ತು ತುಂಬ ಆಳವಾಗಿದ್ದು ಅರ್ಥಪೂರ್ಣವಾಗಿದೆ. ಧನ್ಯವಾದಗಳು ಕುಮಾರಕವಿ ನಟರಾಜ ಸರ್, ಧನ್ಯವಾದ. ಇಂತಿ ನಿಮ್ಮ ಆತ್ಮೀಯ ಮಿತ್ರ, ಉದ್ಯಾನವನ ಚಪ್ಪಾಳೆ ಗುಂಪಿನ ಕೃಷ್ಣೇಗೌಡ, ಬೆಂಗಳೂರು.

ನಿಮ್ಮದೊಂದು ಉತ್ತರ