ಮನಸ್ಸಿನ ನೋವಿನ ನಡುವೆಯೂ ಆ ಸೊಗಸಾದ ಭಾಷಣಕ್ಕೆ ಒಂದು ಜೈ…. ಜೈ….!!!.
ಐಗೂರು ಮೋಹನ್ ದಾಸ್ ಜಿ, ಸೋಮವಾರಪೇಟೆ

ನಮ್ಮ ರಾಜ್ಯದಲ್ಲಿ ನಡೆದ ಸಚಿವ ಸಂಪುಟ ‘ವಿಸ್ತರಣೆ’ಯಲ್ಲಿ, ಕೊಡಗಿನ ಇಬ್ಬರು ಶಾಸಕರುಗಳಿಗೂ ‘ಮಂತ್ರಿ’ ಸ್ಥಾನ ಕರುಣಿಸದೇ ಇರುವ ನೋವು-ಸಂಕಟ ಮನಸ್ಸಿನಲ್ಲಿ ಇದ್ದರೂ, ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಜೀಯವರು ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಬಂದ ವೇಳೆ, ನಮ್ಮ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್ ನವರು ಮಾಡಿದ್ದ ಸೊಗಸಾದ ಭಾಷಣಕ್ಕೆ ಚಪ್ಪಾಳೆ ತಟ್ಟದೇ, ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಮನಸ್ಸು ಒಪ್ಪಲೇ ಇಲ್ಲ …! ಏಕೆಂದರೆ ಪ್ರಧಾನಿಯವರನ್ನು ಗೌರವದಿಂದ ವೇದಿಕೆಯಲ್ಲಿ ಕೂರಿಸಿ, ಡಿಕೆಶಿಯವರು ಮಾಡಿದ್ದ ಇಂಗ್ಲೀಷ್ – ಕನ್ನಡ ಭಾಷಣ ಬಲು ಸೊಗಸಾಗಿತ್ತು….! ಜೈ… ಜೈ…. ಎಂದು ಜೈಕಾರ ಹಾಕಲೇ ಬೇಕಾಯಿತ್ತು…!!
ಈ ನನ್ನ ಮಾತು ಕೇಳಿ ನೀವು ಗಾಬರಿ – ವಿಸ್ಮಯದಿಂದ ಮೂಗಿನ ಮೇಲೆ ಬೆರಳು ಇಡಬೇಡಿ…!ಏಕೆಂದರೆ ಇಷ್ಟು ಕಾಲ ಮೋದಿ…. ಮೋದಿ…. ಎಂದು ‘ಜಪ’ ಮಾಡುತ್ತಿದ್ದ ಭಕ್ತ, ಈಗ ಮತ್ತೊಂದು ಪಕ್ಷದ ನಾಯಕರಿಗೆ ಜೈಕಾರ ಹಾಕಲು ಕಾರಣ ಏನು…? ಈ ಭಕ್ತ ಸಹ ರಾಜಕಾರಣಿಗಳಂತೆ ‘ಪಕ್ಷಾಂತರ’ ಹೊಂದಿರಬಹುದೇ….? ಎಂದು ಯೋಚಿಸಿ ನೀವು ತಲೆ ಬಿಸಿ ಮಾಡಿಕೊಳ್ಳಲೇಬೇಡಿ….!ಏಕೆಂದರೆ ನಾನು ಯಾವುದೇ ಪಕ್ಷಕ್ಕೆ ‘ಬಕೆಟ್’ ಹಿಡಿದುಕೊಂಡು ಬದುಕು ಸಾಗಿಸುವಂತಹ ಪಾಪಿ ಜನ್ಮವಲ್ಲ….!
ಕೈಯಲ್ಲಿ ಸದಾ ‘ಲೇಖನಿ’ಯೊಂದು ಇರುವ ಕಾರಣ, ಯಾವುದೇ ವಿಚಾರಗಳನ್ನು ಕಂಡಾಗ ಮನಸ್ಸು ಆ ವಿಚಾರಗಳ ಸುತ್ತ ಓಡಾಡುತ್ತಲೇ ಇರುತ್ತದೆ…! ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ…! ಆಗ ಯಾವುದೇ ರಾಜಕೀಯ ಪಕ್ಷಗಳ ಮೇಲಿನ ಪ್ರೀತಿ- ಲವ್ ನಿಂದ ‘ಸತ್ಯ’ವನ್ನು ‘ ಸುಳ್ಳು’ ಎಂದು ಹೇಳಲು ಮನಸ್ಸು ಒಪ್ಪುದೇ ಇಲ್ಲ….!

ಮೈಸೂರಿಗೆ ಪ್ರಧಾನಿ ಮೋದಿಜೀಯವರು ಆಗಮಿಸಿದಾಗ, ಡಿಕೆಶಿಯವರ ನಡೆ – ನುಡಿ – ಸ್ನೇಹ ಎಲ್ಲಾವು ಮೆಚ್ಚುವಂತೆ ಇತ್ತು…! ಆಗ ಅವರ ಬಳಿ ಯಾವುದೇ ರಾಜಕೀಯ ಭೇದಭಾವ ಇರಲಿಲ್ಲ…! ಅವರು ನಮ್ಮ ರಾಜ್ಯಕ್ಕೆ ಬಂದಿರುವ ದೇಶದ ಪ್ರಧಾನಿ…. !ಆತಿಥಿ……!ಆದರಿಂದ ಡಿಕೆಶಿಯವರು ಎಲ್ಲಾ ರೀತಿಯ ಗೌರವವನ್ನು ನೀಡಿದ್ದರು. ‘ಲೀಡರ್ ಆಫ್ ದಿಸ್ ಕಂಟ್ರಿ ಶ್ರೀ ನರೇಂದ್ರ ಮೋದಿಜೀ” ಎಂದು ನಮ್ಮ ಮುಖ್ಯಮಂತ್ರಿ ಡಿಕೆಶಿಯವರು ಗಟ್ಟಿ ಧ್ವನಿಯಲ್ಲಿ ಭಾಷಣ ಮಾಡುತ್ತಿದ್ದಂತೆ, ಎಲ್ಲಾಡೆ ಚಪ್ಪಾಳೆಯ ಸುರಿಮಳೆ….!
ದೇಶದಲ್ಲಿ ಇರುವ ಸರ್ವ ಪ್ರಜೆಗಳಿಗೂ ಒಂದೇ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ….! ದೇಶದಲ್ಲಿ ನೂರಾರು ಪಕ್ಷಗಳು ಇವೆ…! ಜೊತೆಗೆ ಹೊಸ ಹೊಸ ಪಕ್ಷಗಳು ಹುಟ್ಟುತ್ತಲ್ಲೂ ಉಂಟು…!ನಮ್ಮದ್ದು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಕಾರಣ, ಯಾವುದೇ ಪಕ್ಷಕ್ಕೂ ನಮ್ಮ ‘ಮತ’ವನ್ನು ಚುನಾವಣೆ ವೇಳೆ ಚಲಾಯಿಸುವ ‘ಹಕ್ಕು’ ಇದೆ…! ಆದರೆ ಈ ರಾಜಕೀಯ ಭೇದಭಾವ ಚುನಾವಣೆ ಮುಗಿಯುತ್ತಿದ್ದಂತೆ ಮುಗಿಯಬೇಕು .. ! ನಂತರ ಆಧಿಕಾರಕ್ಕೆ ಏರಿರುವ ಪಕ್ಷದೊಂದಿಗೆ ಕೈ ಜೋಡಿಸಿ, ಪ್ರತಿಯೊಂದು ಕ್ಷೇತ್ರ ‘ಅಭಿವೃದ್ಧಿ’ ಹೊಂದಲು ಹೆಜ್ಜೆ ಹಾಕಬೇಕು…! ಆಗ ಮಾತ್ರ ಸ್ವಾತಂತ್ರ್ಯ ಭಾರತಕ್ಕೆ ಒಂದು ಬೆಲೆ – ಗೌರವ ಬರುತ್ತದೆ…! ಗಾಂಧೀಜಿಯವರು ಕಂಡ ‘ರಾಮರಾಜ್ಯ’ದ ಕನಸು ಸಹ ನನಸಾಗುತ್ತದೆ….!

ಒಂದು ಸತ್ಯ ಹೇಳಲೇ ಬೇಕು…! ಡಿಕೆಶಿಯವರು ರಾಜಕೀಯವಾಗಿ ಬಹಳ ಜಾಣರು…! ಯಾವ ರೀತಿ ಆಡಳಿತ ನಡೆಸಬೇಕು ಎಂಬುವುದು ಸಹ ಅವರಿಗೆ ಚೆನ್ನಾಗಿ ಗೊತ್ತು…!ಆದರಿಂದ ಅವರು ಮುಖ್ಯಮಂತ್ರಿ ‘ಕುಚಿ೯’ಯಲ್ಲಿ ಕುಳಿತು, ಪ್ರಧಾನಿಯವರು ರಾಜ್ಯಕ್ಕೆ ಬಂದಾಗ ತಾನು ಮಾಡಬೇಕಾಗಿರುವ ‘ಕತ೯ವ್ಯ’ವನ್ನು ಜನ ಮೆಚ್ಚುವಂತೆ ಮಾಡಿ ಮುಗಿಸಿದ್ದಾರೆ….!ಆದರಿಂದ ಅವರಿಗೆ ಮತ್ತೊಮ್ಮೆ ಜೈ…!
ಮುಂದಿನ ದಿನಗಳಲ್ಲಿ ಸಹ ಡಿಕೆಶಿಯವರು ರಾಜಕೀಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಹಾಕುತ್ತಾ, ಸಮಯ ಸಂದರ್ಭಕ್ಕೆ ಸೊಗಸಾದ ಭಾಷಣ ಮಾಡುತ್ತಾ ಕಂಡ ಕನಸುಗಳನ್ನು ನನಸು ಮಾಡಿಕೊಂಡು ಆಡಳಿತ ನಡೆಸಲಿ ಎಂದು ಹಾರೈಸೋಣ….!
ಐಗೂರು ಮೋಹನ್ ದಾಸ್ ಜಿ, ಸೋಮವಾರಪೇಟೆ, ಕೊಡಗು.






