ಹುಣಸೂರು: ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮೃತರು ಪ್ರತೀಪ್ ಮತ್ತು ವಿಲಿಯಂರಾಬರ್ಟ್ ಎಂದು ತಿಳಿದು ಬಂದಿದೆ.
ಮೊದಲ ಘಟನೆಯಲ್ಲಿ ನಗರದ ರಂಗನಾಥ ಬಡಾವಣೆಯ ಕೂಸಪ್ಪರ ಪುತ್ರ ಕಟ್ಟಡಕಾರ್ಮಿಕ ಪ್ರತೀಪ್ (28) ಕೆ.ಆರ್.ನಗರ ಬೈಪಾಸ್ ಕಡೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಮಂಜುನಾಥ. ಬಡಾವಣೆ ನಿವಾಸಿ ನಿದೀಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಗಾಯಾಳುಗಳಾದ ನಗರದ ಶರತ್‌ಕುಮಾರ್, ಶಿವಶಂಕರ್, ದರ್ಶನ್, ಅಜ್ಜರ್, ಪವನ್, ದೀಪು ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡನೇ ಘಟನೆಯಲ್ಲಿ ಹುಣಸೂರು ನಗರದ ಬೈಪಾಸ್ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಲ್ಕುಣಿಕೆ ಸರ್ಕಲ್ ನಿವಾಸಿ ವಿಲಿಯಂರಾಬರ್ಟ್(45) ಮೃತಪಟ್ಟಿದ್ದಾರೆ. ಗಂಭೀರ ಗಾಯ ಗೊಂಡ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನಕಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಕಳೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ… ಹುಷಾರ್ ವಂಚಕರಿದ್ದಾರೆ!
ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಣವಾದ ಲಾರಿಡ್ರೈವರ್… ಹತ್ಯೆ ಮಾಡಿದವರು ಅರೆಸ್ಟ್








