ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಸಂವಿಧಾನದ ಮೂಲಕ ಭಾರತದ ವಿಶಿಷ್ಟ ಪ್ರಜಾಪ್ರಭುತ್ವಕ್ಕೆ ಉಸಿರು ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್. ಹಸಿವು ನೀಗಿಸಿದವರು ಡಾ.ಬಾಬು ಜಗಜೀವನರಾಂ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಬಣ್ಣಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆವರಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ವಿತರಿಸಿ ಮಾತನಾಡಿದರು.
ಧರ್ಮ, ಜಾತಿ, ಜನಾಂಗ ಎನ್ನದೆ ಎಲ್ಲರ ನೆಮ್ಮದಿಯ ಬದುಕಿಗೆ ಸಂವಿಧಾನದ ಮೂಲಕ ರಕ್ಷಣೆ ಸಿಗುತ್ತಿದೆ. ಇಂದು ಅಸ್ಪೃಶ್ಯತೆ ಮೊದಲಿಗಿಂತ ಕಡಿಮೆ ಇದೆ ಎಂದರೆ ಇನ್ನೂ ಅಸ್ಪಶ್ಯತೆ ಇದೆ ಎಂದರ್ಥ. ಇದು ಸಂಪೂರ್ಣ ತೊಲಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್. ಸಿದ್ದೇಗೌಡ ಮಾತನಾಡಿ, “ಅಂಬೇಡ್ಕರ್ ಅವರಲ್ಲಿದ್ದ ಅಪರಿಮಿತ ವಿದ್ವತ್ ಅನ್ನು ಪರಿಗಣಿಸಿ ವಿಶ್ವಸಂಸ್ಥೆಯು 2016 ಅಂಬೇಡ್ಕರ್ ಜಯಂತಿಯಂದು ವಿಶ್ವಜ್ಞಾನಿ ಎಂದು ಘೋಷಿಸಿತು. ಅದೇ ರೀತಿ ಅಂಬೇಡ್ಕರ್ ಅವರ 126ನೇ ಜಯಂತಿಯನ್ನು ಅಮೆರಿಕ ಪಾರ್ಲಿಮೆಂಟ್‌ನಲ್ಲಿ ಆಚರಿಸಿರುವುದು ದೇಶದ ಹೆಮ್ಮೆ ಎಂದರು.

ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್‌ನಾಥ್ ಮಾತನಾಡಿ, “ಅಂಬೇಡ್ಕರ್ ಅವರು ಅಂದೇ ಮಹಿಳಾ ಮೀಸಲಾತಿ ಪರ ಧ್ವನಿ ಎತ್ತಿದವರು. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ಸಿಗಲು, ಸಮಸಮಾಜ ನಿರ್ಮಾಣವಾಗಲು ಅಂಬೇಡ್ಕರ್ ಕಾರಣರಾಗಿದ್ದಾರೆ ಎಂದರು.
ತಾ.ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಬಿಳಿಕೆರೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ದೇವರಾಜ್, ಜಿ.ಪಂ.ಮಾಜಿ ಸದಸ್ಯ ಕುನ್ನೇಗೌಡ ಮುಖಂಡರಾದ ಪುಟ್ಟರಾಜು, ಚಿಕ್ಕಸ್ವಾಮಿ ಮಾತನಾಡಿದರು. ಪಕ್ಷದ ಪದಾಧಿ ಕಾರಿಗಳಾದ ರವಿಪ್ರಸನ್ನ, ಪ್ರೇಮಕುಮಾರ್, ಬಾಲಚಂದ್ರ, , ಕಲ್ಪನ, ನೇತ್ರವತಿ, ಮಂಜುಳ, ರೇಕಾಮಣಿ, ರಕ್ಷಿತ್, ಫೈಸಲ್, ದರ್ಶನ್, ಧರ್ಮಾಪುರಮಹದೇವ್, ಹೊನ್ನಪ್ಪ, ಹಮ್ಮೆಗೆರಾಮೇಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ಬಿಳಿಕೆರೆ ಬಸವರಾಜ್ ಸೇರಿದಂತೆ ಇತರರು ಇದ್ದರು
ಹುಣಸೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಂಜುನಾಥ್ ಸೇರಿದಂತೆ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.








