LatestNews

ನಿಸ್ವಾರ್ಥ ಕನ್ನಡ ಸೇವೆ -ಸಮಾಜ ಸೇವೆಗೆ ಸಂದ ಪ್ರತಿಫಲ ಎಂದ ಫ್ರಾನ್ಸಿಸ್ ಡಿಸೋಜ

ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ ಯುವಂ ಯುಗಂ ಪತ್ರಿಕೆ

ಕುಶಾಲನಗರ: ನಾಡು-ನುಡಿ ಹಾಗೂ ನಿಸ್ವಾರ್ಥ ಸಮಾಜ ಸೇವೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶ್ರೀ ಫ್ರಾನ್ಸಿಸ್ ಡಿಸೋಜ ಅವರಿಗೆ ಪ್ರತಿಷ್ಠಿತ ‘ಗೋವರ್ಧನ ಗೋಪಾಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2026’ ನೀಡಿ ಸನ್ಮಾನಿಸಲಾಗಿದೆ.

ಮೈಸೂರಿನ ಯುವಂ ಯುಗಂ ಮಾಸಪತ್ರಿಕೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, ಶಾನ್ ಗ್ಲೋಬಲ್ ಹ್ಯೂಮಾನಿಟಿ ಟ್ರಸ್ಟ್ ಬೋಗಾದಿ, ಮೈಸೂರು ಕಾವೇರಿ ನ್ಯೂಸ್ ಕನ್ನಡ ಹಾಗೂ ಶ್ರೀಗರಿ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ನವೆಂಬರ್ 25ರಂದು ಮೈಸೂರಿನ ಕಿರು ರಂಗಮಂದಿರದಲ್ಲಿ (ಕರ್ನಾಟಕ ಕಲಾಮಂದಿರದ ಹತ್ತಿರ) ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಯುವಂ ಯುಗಂ ಮಾಸಪತ್ರಿಕೆಯ ಮಾಲೀಕರು ಹಾಗೂ ಸಂಪಾದಕರಾದ ಗ್ರಹೇಶ್ವರ್ ಗಾರುಡಿಗೇಂದ್ರಮ್, ಉಪ ಸಂಪಾದಕರಾದ  ಸಂದೇಶ್ ಜೋಸೆಫ್ ಡಿಸೋಜ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ಅಧ್ಯಕ್ಷರು ಹಾಗೂ ನಾಡಿನ ಸುಪ್ರಸಿದ್ಧ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಅವರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಸಮಾಜಸೇವಕ ರಘುರಾಂ ವಾಜಪೇಯಿ ಇನ್ನಿತರರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫ್ರಾನ್ಸಿಸ್ ಡಿಸೋಜ ಅವರು, ನನ್ನ ಕನ್ನಡ ಸೇವೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿರುವ ಯುವಂ ಯುಗಂ ಪತ್ರಿಕೆಯ ಬಳಗಕ್ಕೆ ಹಾಗೂ ಕಾರ್ಯಕ್ರಮದ ಎಲ್ಲಾ ಆಯೋಜಕರಿಗೆ ನನ್ನ ಹೃದಯಪೂರ್ವಕ ಹಾರ್ದಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ