ಭಾರತದಾದ್ಯಂತ ತನ್ನ ಅತಿಥಿಗಳ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಬ್ರ್ಯಾಂಡ್ನ ನಿರಂತರ ಬದ್ಧತೆಗೆ ಅನುಗುಣವಾಗಿ, ಲೆಕ್ಸಸ್ ಇಂಡಿಯಾ ಇಂದು ಗುರುಗ್ರಾಮ್ ನಲ್ಲಿ ತನ್ನ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ (ಜಿಇಸಿ) ಅನ್ನು ಉದ್ಘಾಟಿಸಿತು. ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯು ನಿರಂತರವಾಗಿ ಬೆಳೆಯುತ್ತಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಐಷಾರಾಮಿ ಸಂಚಾರ ಆಯ್ಕೆಗಳತ್ತ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಇರುವ ಗ್ರಾಹಕರಿಗೆ ಲೆಕ್ಸಸ್ ಅನುಭವವನ್ನು ಇನ್ನಷ್ಟು ಹತ್ತಿರವಾಗಿಸಲು ಕಂಪನಿಯು ತನ್ನ ಉಪಸ್ಥಿತಿಯನ್ನು ಬಲಪಡಿಸುತ್ತಿದೆ.
ಗುರುಗ್ರಾಮ್ ನಲ್ಲಿರುವ ಈ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಲೆಕ್ಸಸ್ ಭಾರತ್ ಎಂಬ ವ್ಯಾಪಾರದ ಹೆಸರನ್ನು ಹೊಂದಿರುವ ಭಾರತ್ ಟೊಯೋಟಾ ತ್ಸುಶೋ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಬಿಟಿಟಕೆಎಂ) ಸ್ಥಾಪಿಸಿದೆ. ಇದು ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (ಕೆ.ಎಸ್.ಪಿ.ಎಲ್.), ಟೊಯೋಟಾ ತ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಟಿಟಿಐಪಿಎಲ್) ಮತ್ತು ಜಪಾನ್ನ ಟೊಯೋಟಾ ತ್ಸುಶೋ ಕಾರ್ಪೊರೇಷನ್ (ಟಿಟಿಸಿ) ನಡುವಿನ ಹೊಸ ಜಂಟಿ ಉದ್ಯಮವಾಗಿದೆ. ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಮತ್ತು ಐಷಾರಾಮಿ ವಾಹನ ರೀಟೇಲ್ ಮಾರಾಟದ ಅನುಭವವನ್ನು ಉನ್ನತೀಕರಿಸುವ ಲೆಕ್ಸಸ್ ನ ದೀರ್ಘಕಾಲೀನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಈ ನೂತನ ಕೇಂದ್ರವನ್ನು ಲೆಕ್ಸಸ್ ಭಾರತ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶ್ರೀನಿವಾಸ್ ಚಿವಿಕುಲ ಮತ್ತು ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಶ್ರೀ ಹಿಕಾರು ಇಕೆಯುಚಿ ಅವರು, ಡೀಲರ್ ಪಾಲುದಾರರು, ಲೆಕ್ಸಸ್ ಭಾರತ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಹಿರಿಯ ನಾಯಕರು ಹಾಗೂ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ಇತ್ತೀಚೆಗೆ ಅಹಮದಾಬಾದ್, ಸೂರತ್ ಮತ್ತು ಪುಣೆಯಲ್ಲಿ ಆರಂಭವಾದ ಜಿಇಸಿಗಳ ನಂತರ, ಗುರುಗ್ರಾಮ್ ನ ಈ ನೂತನ ಕೇಂದ್ರವು ಲೆಕ್ಸಸ್ ಇಂಡಿಯಾದ ಯೋಜಿತ ಜಾಲ ವಿಸ್ತರಣೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ದೇಶಾದ್ಯಂತ ಬ್ರ್ಯಾಂಡ್ ನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿದೆ. ಗುರುಗ್ರಾಮ್ ಭಾರತದ ಪ್ರಮುಖ ವಾಣಿಜ್ಯ ಮತ್ತು ಹಣಕಾಸು ಕೇಂದ್ರಗಳಲ್ಲಿ ಒಂದಾಗಿದ್ದು, ತನ್ನ ಅಭಿವೃದ್ಧಿ ಹೊಂದುತ್ತಿರುವ ಐಟಿ ಮತ್ತು ಹಣಕಾಸು ಸೇವಾ ವಲಯ ಹಾಗೂ ನವದೆಹಲಿಗೆ ಸಮೀಪವಿರುವ ಆಯಕಟ್ಟಿನ ಸ್ಥಳದಿಂದಾಗಿ ಉದ್ಯಮಗಳು, ವೃತ್ತಿಪರರು ಮತ್ತು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ.

ಲೆಕ್ಸಸ್ ಇಂಡಿಯಾದ ಅಧ್ಯಕ್ಷರಾದ ಹಿಕಾರು ಇಕೆಯುಚಿ ಅವರು, “ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯು ವೇಗವಾಗಿ ವಿಕಸನಗೊಳ್ಳುತ್ತಿದ್ದು, ಗ್ರಾಹಕರು ವಿಶಿಷ್ಟ ಉತ್ಪನ್ನಗಳು, ಅರ್ಥಪೂರ್ಣ ಅನುಭವಗಳು ಮತ್ತು ತಮ್ಮ ಮೌಲ್ಯಗಳಿಗೆ ಸರಿಹೊಂದುವ ಬ್ರ್ಯಾಂಡ್ಗಳನ್ನು ಹೆಚ್ಚಾಗಿ ಬಯಸುತ್ತಿದ್ದಾರೆ. ದೇಶಾದ್ಯಂತ ಇರುವ ಅತಿಥಿಗಳಿಗೆ ಲೆಕ್ಸಸ್ ಅನುಭವವನ್ನು ಇನ್ನಷ್ಟು ಹತ್ತಿರವಾಗಿಸುವುದು ಲೆಕ್ಸಸ್ ನ ಗುರಿಯಾಗಿದೆ ಎಂದು ಹೇಳಿದರು.
ಲೆಕ್ಸಸ್ ಭಾರತ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಚಿವಿಕುಲ ಅವರು, “ಗುರುಗ್ರಾಮ್ ನಲ್ಲಿ ನಮ್ಮ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ನ ಉದ್ಘಾಟನೆಯು ಭಾರತದಲ್ಲಿ ಲೆಕ್ಸಸ್ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ದೇಶದ ಅತ್ಯಂತ ಪ್ರಗತಿಪರ ನಗರ ಕೇಂದ್ರಗಳಲ್ಲಿ ಒಂದಾಗಿರುವ ಗುರುಗ್ರಾಮ್ ಲೆಕ್ಸಸ್ ಅನುಭವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸೂಕ್ತ ವಾತಾವರಣವನ್ನು ಒದಗಿಸುತ್ತದೆ. ಎಂದು ಹೇಳಿದರು.
ಪ್ರಸ್ತುತ, ಪ್ರಮುಖ ಐಷಾರಾಮಿ ಮಾರುಕಟ್ಟೆಗಳಲ್ಲಿನ ಗ್ರಾಹಕರಿಗೆ ತನ್ನ ಅತಿಥಿ ಅನುಭವವನ್ನು ಇನ್ನಷ್ಟು ಹತ್ತಿರವಾಗಿಸುವ ನಿರಂತರ ಗಮನದೊಂದಿಗೆ ಲೆಕ್ಸಸ್ ಇಂಡಿಯಾ ಮುಂಬೈ, ನವದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಚಂಡೀಗಢ, ಕೊಚ್ಚಿ, ಅಹಮದಾಬಾದ್, ಸೂರತ್, ಪುಣೆ ಮತ್ತು ಗುರುಗ್ರಾಮ್ ಗಳಲ್ಲಿ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ನಿರ್ವಹಿಸುತ್ತಿದೆ.
ಅಲ್ಲದೆ, ಆರ್.ಎಕ್ಸ್., ಎನ್.ಎಕ್ಸ್. ಮತ್ತು ಇ.ಎಸ್.ಮಾದರಿಗಳಿಗೆ ಅನ್ವಯವಾಗುವಂತೆ ಕಡಿಮೆ ಇಎಂಐ ಮತ್ತು ಖಾತರಿಯ ಭವಿಷ್ಯದ ಉಳಿಕೆ ಮೌಲ್ಯದೊಂದಿಗೆ ಕೂಡಿರುವ ಅಶ್ಯೂರ್ಡ್ ಬೈ ಬ್ಯಾಕ್ ಪ್ರೋಗ್ರಾಂ ಅನ್ನು ಆರ್ಥಿಕ ಅನುಕೂಲ ಹಾಗೂ ಪ್ರೀಮಿಯಂ ಮಾಲೀಕತ್ವದ ಅನುಭವವನ್ನು ಬಯಸುವ ಅತಿಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಕಂಫರ್ಟ್, ರಿಲ್ಯಾಕ್ಸ್ ಮತ್ತು ಪ್ರೀಮಿಯರ್ ಆಯ್ಕೆಗಳೊಂದಿಗೆ ಬರುವ ವಿಶಿಷ್ಟ ಲೆಕ್ಸಸ್ ಲಕ್ಸುರಿ ಕೇರ್ ಸೇವಾ ಪ್ಯಾಕೇಜ್ ಗಳು ಸಹ ಲಭ್ಯವಿವೆ.








