ಎಂಸಿಡಿಸಿಸಿನಲ್ಲಿ 200ಕೋಟಿ ಅವ್ಯವಹಾರ…. ಸಾ.ರಾ. ಹೇಳಿಕೆ ಸತ್ಯಕ್ಕೆ ದೂರ: ದೊಡ್ಡಸ್ವಾಮೇಗೌಡ

ಕೆ.ಆರ್.ನಗರ(ಜಿಟೆಕ್ ಶಂಕರ್): ಎಂಸಿಡಿಸಿಸಿ ಬ್ಯಾಂಕ್ನಲ್ಲಿ 200ಕೋಟಿ ಅವ್ಯವಹಾರ ನಡೆದಿದ್ದು ಈ ಸಂಬAಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದ್ದು ರಾಜಕೀಯಕ್ಕೋಸ್ಕರ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಸಾ.ರಾ.ಮಹೇಶ್ ಬಿಡಲಿ ಎಂದು ಎಂಸಿಡಿಸಿಸಿ ಬ್ಯಾAಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ತಿರುಗೇಟು ನೀಡಿದರು.
ಪಟ್ಟಣದ ಎಂಸಿಡಿಸಿಸಿ ಬ್ಯಾAಕ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಾ.ರಾ.ಮಹೇಶ್ರವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಎಂಸಿಡಿಸಿಸಿ ಬ್ಯಾಂಕ್ ಮುಖಾಂತರ ಸಾವಿರಾರು ಜನಕ್ಕೆ ಸಾಲಸೌಲಭ್ಯ ನೀಡಲಾಗಿದ್ದು ಇದು ರೈತರ ಜೀವನಾಡಿಯಾಗಿದೆ, ಬ್ಯಾಂಕ್ಮೇಲೆ ಎಲ್ಲೂ ಕೂಡ ಸಣ್ಣ ಅನುಮಾನ ಬರಬಾರದು ಎಂಬ ಕಾರಣಕ್ಕೆ ಈಸ್ಪಷ್ಟೀಕರಣ ನೀಡುತ್ತಿರುವುದಾಗಿ ಹೇಳಿದÀರು.
ರಾಜಕಾರಣಕ್ಕೋಸ್ಕರ ಇಲ್ಲಸಲ್ಲದ ಆರೋಪವನ್ನು ಒಂದು ಸಾರ್ವಜನಿಕ ಸಂಸ್ಥೆ ಮೇಲೆ ಮಾಡುವುದು ಸರಿಯಲ್ಲ, ಇವರು ಒಬ್ಬ ರಾಜಕಾರಿಣಿಯಾಗಿ ಜವಾಬ್ದಾರಿಯುತರಾಗಿ ಒಂದು ಸಂಸ್ಥೆಮೇಲೆ ಈರೀತಿ ಸುಳ್ಳುಆರೋಪ ಮಾಡಿದರೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸದಸ್ಯರು, ಅಧಿಕಾರಿ, ರೈತರಿಗೆ ಯಾವರೀತಿ ಅನುಮಾನ ಬರುತ್ತದೆ ಎಂದು ಯೋಚನೆ ಮಾಡಬೇಕಾಗಿತ್ತು ಎಂದರು.
ಆದರೆ ಇವೆಲ್ಲವನ್ನು ಬಿಟ್ಟು ರಾಜಕೀಯಕ್ಕೋಸ್ಕರ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬಾರದು ಇದರಿಂದ ಬ್ಯಾಂಕ್ಬಗ್ಗೆ ಜನತೆಯಲ್ಲಿ ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸತ್ಯಇದ್ದರೆ ಹೇಳಿ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ, ಸುಳ್ಳುಹೇಳುವ ಮೂಲಕ ಬ್ಯಾಂಕ್ಗೆ ಕೆಟ್ಟಹೆಸರು ತರುವ ಕೆಲಸ ಮಾಡುತ್ತೀರಿ ದಯಮಾಡಿ ಮುಂದೆ ಏನಾದರೂ ಹೇಳುವಾಗ ಸತ್ಯ ತಿಳಿದು ಹೇಳಿಕೆನೀಡಿ ಎಂದರು.
ಆರೀತಿ ಇದ್ದರೆ ಹೇಳಿಕೆ ನೀಡುವಾಗ ನಿಮ್ಮವರೆಆದ ಬ್ಯಾಂಕ್ನ ಮಾಜಿ ನಿರ್ದೆಶಕರನ್ನು ಕೂರಿಸಿ ಕೊಂಡಿದ್ದಿರಿ ಅವರೂ ಸಹ ಬ್ಯಾಂಕ್ನಲ್ಲಿ 10ವರ್ಷ ಕೆಲಸ ಮಾಡಿದ್ದವರು ಅವರಿಂದ ಮಾಹಿತಿ ಪಡೆಯಬಹುದಿತ್ತು ಎಂದ ಅವರು ಮುಂದೆ ಈರೀತಿ ಸುಳ್ಳು ಹೇಳಿಕೆ ನೀಡುವುದನ್ನು ಬಿಡಿ ಎಂದರು.

ಪಿರಿಯಾಪಟ್ಟಣದಲ್ಲಿ ಒಂದು ಸೊಸೈಟಿಗೆ ಸಾಲಕೊಟ್ಟಿಲ್ಲ ಎಂದು ಕೆಲವು ರೈತರು ಮುಖಂಡರೊಡಗೂಡಿ ನಡೆದ ಪ್ರತಿಭಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು ಸಾಲಕಟ್ಟಿದವರಿಗೆ ಸಾಲ ಕೊಟ್ಟಿದ್ಧೇವೆ ಆದರೆ ಕಾನೂನು ವ್ಯಾಪ್ತಿಯಲ್ಲಿ ಬರಬೇಕು ಬಂದಾಗ ಎಲ್ಲವೂ ಆಗುತ್ತದೆ ಎಂದರು.
ರಾಜಕಾರಣಕ್ಕೋಸ್ಕರ ಪ್ರತಿಭಟನೆ ಮಾಡುವುದು ವಿಷ ಕುಡಿಯುವುದಾಗಿ ಬಾಟಲಿ ಪ್ರದರ್ಶಿಸುವುದು ಸರಿಯಲ್ಲ, ವಿಚಾರಕ್ಕೆ ಸಂಬAಧಪಟ್ಟAತೆ ಕೋರ್ಟಿನಿಂದ ಆದೇಶ ಮಾಡಿಸಿದ್ಧಾರೆ, ಆದ್ದರಿಂದ ಕಾನೂನಿನಡಿಯಲ್ಲಿ ಏನು ಮಾಡಬೇಕು ಅದನ್ನುಮಾಡಲು ಬ್ಯಾಂಕ್ಸಿದ್ದವಿದೆ ಆದರೆ ರಾಜಕಾರಣಕ್ಕೋಸ್ಕರ ಇಲ್ಲಸಲ್ಲದ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟಿಎಪಿಸಿಎಂಸ್ ಅಧ್ಯಕ್ಷ ಎಸ್.ಸಿದ್ಧೇಗೌಡ, ಉಪಾಧ್ಯಕ್ಷ ಎನ್.ಎಸ್.ವಿಠಲ, ನಿರ್ದೇಶಕ ಕೆಡಗನಟರಾಜ್, ಹೆಚ್.ಪಿ.ಪ್ರಶಾಂತ್, ಹೆಚ್.ಹೆಚ್.ನಾಗೇಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯ್ಯದ್ಜಾಬೀರ್ ಹಾಜರಿದ್ದರು.







