janamanakannada > Blog > Latest > Mysore > ವಿದ್ಯುತ್ ತಗುಲಿ ಮೃತಪಟ್ಟ ಭಾಸ್ಕರ್ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ವಿತರಿಸಿದ ಶಾಸಕ ಡಿ.ರವಿಶಂಕರ್
ವಿದ್ಯುತ್ ತಗುಲಿ ಮೃತಪಟ್ಟ ಭಾಸ್ಕರ್ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ವಿತರಿಸಿದ ಶಾಸಕ ಡಿ.ರವಿಶಂಕರ್
adminJuly 9, 2026

ಸಾಲಿಗ್ರಾಮ (ಸಂಘಟನೆ ಮಂಜುನಾಥ್): ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದ ತಾಲೂಕಿನ ಬಳ್ಳೂರು ಗ್ರಾಮದ ತಂಬಾಕು ಕೃಷಿಕ ಭಾಸ್ಕರ್ ಅವರ ಮನೆಗೆ ಶಾಸಕ ಡಿ.ರವಿಶಂಕರ್ ಅವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸೆಸ್ಕಾಂ ಇಲಾಖೆ ವತಿಯಿಂದ ನೀಡಲಾದ 5 ಲಕ್ಷ ರೂಗಳ ಪರಿಹಾರದ ಚೆಕ್ಕನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರದ ವತಿಯಿಂದಲೂ ಕೂಡ ಪರಿಹಾರವನ್ನು ಕೊಡಿಸಿಕೊಡಲಾಗುವುದು ಎಂದು ಭರವಸೆ ನೀಡಿ ವೈಯುಕ್ತಿಕವಾಗಿಯೂ ನೆರವು ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶಶಿಕುಮಾರ್, ಸೆಸ್ಕಾಂನ ಇಇ ಅನಿತಾ, ಎಇಇ ಮಧುಸೂದನ್ ಸೇರಿದಂತೆ ಹಲವರು ಇದ್ದರು.
Tags:k r nagar news
admin







