ಪ್ರಾಮಾಣಿಕವಾಗಿ ಜನ ಸೇವೆ ಮಾಡುವವರು ಅಧಿಕಾರ ಇಲ್ಲದಿದ್ದರೂ ಜನಮಾನಸದಲ್ಲಿರುತ್ತಾರೆ:ಸಾ ರಾ ಮಹೇಶ್

ಹೊಸೂರು(ಸಂಘಟನೆ ಮಂಜುನಾಥ್): ಪ್ರೀತಿ ವಿಶ್ವಾಸಕ್ಕೆ ಬದ್ಧವಾಗಿ ಪ್ರಾಮಾಣಿಕವಾಗಿ ಜನ ಸೇವೆ ಮಾಡುವವರು ಅಧಿಕಾರ ಇರಲಿ ಇಲ್ಲದಿರಲಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಸಮೀಪದ ಪೇಟೆ ಹಳ್ಳ ಬಳಿ ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾಗಿದ್ದ ಜೆಡಿಎಸ್ ಮುಖಂಡ ಎಚ್ಆರ್ ಮಧುಚಂದ್ರರವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಕ್ಷದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಧುಚಂದ್ರರವರು ದುಡಿಯುತ್ತಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರ ಸಿಕ್ಕು ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಧುಚಂದ್ರರವರು ಮಾತನಾಡಿ ಸಾರ್ವಜನಿಕ ಸೇವೆ ನೀಡುವಷ್ಟು ತೃಪ್ತಿ ಬೇರೆ ಯಾವುದರಿಂದಲೂ ದೊರೆಯುವುದಿಲ್ಲ, ನಾನು ಎಂದಿಗೂ ಅಧಿಕಾರಕ್ಕಾಗಿ ಜನಸೇವೆ ಮಾಡುತ್ತಿಲ್ಲ. ಇಂದು ನೂರಾರು ಜನರು ಶುಭ ಹಾರೈಸಿದಷ್ಟು ನಮ್ಮ ಮೇಲಿನ ಜವಾಬ್ದಾರಿಗಳು ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ನಾನು ಸಿದ್ದ ಎಂದು ಹೇಳಿದರು.

ಇದೇ ವೇಳೆ ಹುಟ್ಟು ಹಬ್ಬದ ನಿಮಿತ್ತ ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಸಂಘದ ಉಪಾಧ್ಯಕ್ಷ ಎ ಕುಚೇಲ್, ಜೆಡಿಎಸ್ ಮುಖಂಡರಾದ ಉದ್ಯಮಿ ಎಚ್ ಕೆ ಶ್ರೀಧರ್, ಹಾಡ್ಯ ಮಂಜು, ಕಗ್ಗಳ ಈರಣ್ಣ, ದಮ್ಮನಹಳ್ಳಿ ಧರ್ಮ, ಮಿತ್ರ ಕುಮಾರ್,ನಾಡಪ್ಪನಹಳ್ಳಿ ಮಹಾದೇವ, ಮಟನ್ ಜಮೀಲ್, ಪ್ರವೀಣ್, ಅರಕೆರೆ ಕೃಷ್ಣ, ನಾಗೇಶ್, ಮಾಧು, ರವಿ, ಕಿರಣ್, ಗಿರೀಶ್ ಸೇರಿದಂತೆ ಸ್ಟಾರ್ ಕ್ರಿಕೆಟರ್ಸ್ ತಂಡದ ಆಟಗಾರರು ಭಾಗವಹಿಸಿದ್ದರು.
ವಿನಾಯಕ ಆಟೋ ಚಾಲಕರ ಸಂಘದಿಂದ ಹುಟ್ಟುಹಬ್ಬಾಚರಣೆ

ಹೊಸೂರು ವಿನಾಯಕ ಆಟೋ ಚಾಲಕರ ಸಂಘದ ವತಿಯಿಂದ ಜೆಡಿಎಸ್ ಮುಖಂಡ ಹೆಚ್ಆರ್ ಮಧುಚಂದ್ರರವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು . ಇದೇ ಸಂದರ್ಭದಲ್ಲಿ ನೆರದಿದ್ದವರಿಗೆ ಪಾನಕ ವಿತರಣೆ ಮಾಡಲಾಯಿತು.

ಸಮಾಜ ಸೇವಕ ಮಧುಚಂದ್ರ, ಸಂಘದ ಅಧ್ಯಕ್ಷ ಮಂಜು, ಉದ್ಯಮಿ ಶ್ರೀಧರ್, ಸಂತೋಷ್ ಜಮೀಲ್ ರಾಘವೇಂದ್ರ ಪ್ರವೀಣ್, ಈರಣ್ಣ, ದಮ್ಮನಹಳ್ಳಿ ಧರ್ಮ, ಕೃಷ್ಣ, ವೆಂಕಟೇಶ್, ಶ್ರೀನಿವಾಸ್, ಸಂತೋಷ್, ಅನಿಲ್, ರಾಘು, ಜಗದೀಶ್, ಕೀರ್ತಿ, ಬೋರೇಗೌಡ, ದಶರಥ ರಂಗೇಗೌಡ ಸೇರಿದಂತೆ ಹಲವರು ಇದ್ದರು.







