janamanakannada > Blog > Latest > Mysore > ಜಮೀನಿಗೆಂದು ಹೋದ ವೃದ್ಧೆ ನಾಪತ್ತೆ… ನಿಮಗೆ ಸುಳಿವು ಸಿಕ್ಕರೆ ಮಾಹಿತಿ ನೀಡಿ…
ಹೊಸೂರು(ಸಂಘಟನೆ ಮಂಜುನಾಥ್): ಎಂದಿನಂತೆ ಜಮೀನಿಗೆಂದು ಹೋದ ವೃದ್ಧೆಯೊಬ್ಬರು ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆಯೊಂದು ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕನಹಳ್ಳಿ ಗ್ರಾಮದ ಲೇಟ್ ಪುಟ್ಟಸ್ವಾಮಿಗೌಡ ಅವರ ಪತ್ನಿ ರಾಜಮ್ಮ(63) ಎಂಬ ವೃದ್ಧೆಯೇ ನಾಪತ್ತೆಯಾದವರು. ಇವರು ಕಳೆದ ಮೇ.6 ರಂದು ಜಮೀನಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸ್ ಬಂದಿಲ್ಲ ಇವರನ್ನು ನೆಂಟರಿಷ್ಟರ ಮನೆಯಲ್ಲಿ ಹುಡುಕಿದರೂ ಎಲ್ಲಿಯೂ ಪತ್ತೆಯಾಗದ ಕಾರಣದಿಂದಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಾಪತ್ತೆಯಾಗಿರುವ ವೃದ್ಧೆ ರಾಜಮ್ಮ ಐದುವರೆ ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಮನೆಯಿಂದ ಹೋಗುವಾಗ ನೀಲಿ ಸೀರೆ ಧರಿಸಿದ್ದು ಅವರ ಬಗ್ಗೆ ಮಾಹಿತಿ ಸಿಕ್ಕರೆ ಸಾಲಿಗ್ರಾಮ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು 0822-3283341/9480805062 ಸಂಪರ್ಕಿಸುವಂತೆ ಕೋರಲಾಗಿದೆ
Tags:saligrama news
admin
You Might Also Like
ಮೂತ್ರಪಿಂಡ ಕಸಿ ಪಡೆದ ರೋಗಿಯ ಜೀವ ಉಳಿಸಿದ ಅಪೋಲೊದ ಅಪರೂಪದ ಶಸ್ತ್ರಚಿಕಿತ್ಸೆ
adminಸೆಪ್ಟೆಂಬರ್ 24, 2026
ಕೊಡಗಿನಲ್ಲೂ ಅವಿವಾಹಿತರ ಯುಗ ಬರಬಹುದೇ…? ಇದು ಯೋಚಿಸಬೇಕಾದ ಸಮಯ!
adminಸೆಪ್ಟೆಂಬರ್ 24, 2026








