LatestMysore

2ನೇ  ರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ  VVILS ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

ಮೈಸೂರು: ನಗರದ ವಿದ್ಯಾ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನ (VVILS)  ವಿದ್ಯಾರ್ಥಿಗಳು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಲಾ ಸ್ಕೂಲ್, ಹುಬ್ಬಳ್ಳಿ ವತಿಯಿಂದ 2026ರ ಮೇ 23 ಮತ್ತು 24ರಂದು ಆಯೋಜಿಸಲಾದ ಪ್ರತಿಷ್ಠಿತ 12ನೇ  ರಾಷ್ಟ್ರೀಯ ಮೂಟ್ ಕೋರ್ಟ್ ( MOOT COURT)ಸ್ಪರ್ಧೆ – 2026ರಲ್ಲಿ ದ್ವಿತೀಯ ಸ್ಥಾನ (ರನ್ನರ್-ಅಪ್)ವನ್ನು ಪಡೆದುಕೊಂಡಿದ್ದಾರೆ.

ಯಶವಂತ್ ಗೌಡ ಜೆ,  ಜೀವನ್ ಎಂ, ನಂಜುಂಡ ನಾಯಕ್ ಎನ್ ಅವರನ್ನೊಳಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದ್ದು, ದೇಶದ ವಿವಿಧ ಕಾನೂನು ಶಿಕ್ಷಣ ಸಂಸ್ಥೆಗಳಿಂದ ಭಾಗವಹಿಸಿದ್ದ ತಂಡಗಳ ನಡುವೆ ರನ್ನರ್-ಅಪ್ ಸ್ಥಾನವನ್ನು ಗಳಿಸಿದೆ.

ಇದಕ್ಕೆ ಮತ್ತಷ್ಟು ಕೀರ್ತಿಯನ್ನು ತಂದುಕೊಟ್ಟಂತೆ, ಜೀವನ್ ಎಂ ಅವರು ತಮ್ಮ ಅತ್ಯುತ್ತಮ ವಕಾಲತ್ತು ಕೌಶಲ್ಯ ಹಾಗೂ ನ್ಯಾಯಾಲಯದ ಪ್ರಸ್ತುತಿಕರಣಕ್ಕಾಗಿ ಪ್ರತಿಷ್ಠಿತ “ಬೆಸ್ಟ್ ಜೆಂಟಲ್ಮನ್ ಅಡ್ವೋಕೇಟ್ (Best Gentlemen Advocate) ” ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇದರ ಮಾನ್ಯ ಕುಲಪತಿ ಪ್ರೊ. ಡಾ. ಸಿ. ಬಸವರಾಜು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮಾನ್ಯ ಶ್ರೀ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಅವರು ಉಪಸ್ಥಿತರಿದ್ದರು.

ಗೌರವ ಅತಿಥಿಯಾಗಿ ವಿಶಾಖಪಟ್ಟಣದ DSNLU ಸಂಸ್ಥೆಯ ಕಾನೂನು ಸಹ ಪ್ರಾಧ್ಯಾಪಕರಾಗಿರುವ ಹಾಗೂ ಐಪಿಆರ್ ಮತ್ತು ತಂತ್ರಜ್ಞಾನ ಕೇಂದ್ರದ ಅಧ್ಯಕ್ಷರಾದ ಡಾ. ದಯಾನಂದ ಮೂರ್ತಿ ಸಿ. ಪಿ. ಅವರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want