CinemaLatest

ಲೋಕನಾಥನಾಯ್ಡು ಕನ್ನಡ ಚಿತ್ರರಂಗದಲ್ಲಿ ಲೋಕೇಶ್ ಆಗಿ ಮಿಂಚಿದ್ದು ಹೇಗೆ?

ಜನರ ಮನದಲ್ಲಿ ಅಚ್ಚಳಿಯದ ಪರಸಂಗದ ಗೆಂಡೆತಿಮ್ಮ

 ಪರಸಂಗದ ಗೆಂಡೆತಿಮ್ಮ ಸಿನಿಮಾ ನೋಡಿದವರು ಇವತ್ತಿಗೂ ನಟ ಲೋಕೇಶ್ ಅವರ ಆ ಮುಗ್ಧ ಮನೋಜ್ಞ ನಟನೆಯನ್ನು ಮರೆಯಲು ಸಾಧ್ಯವೇ ಇಲ್ಲ… ಅಷ್ಟೇ ಅಲ್ಲದೆ ಅವರು ನಟನೆಯ ಪ್ರತಿ ಸಿನಿಮಾದಲ್ಲಿಯೂ ವಿಭಿನ್ನತೆ, ವಿಶಿಷ್ಟತೆ ಎದ್ದು ಕಾಣಿಸುತ್ತಿತ್ತು.. ಹೀಗಾಗಿಯೇ ಅವರು ಇವತ್ತಿಗೂ ನಮ್ಮ ನಿಮ್ಮ ನಡುವೆ ಚಿರವಾಗಿ ಉಳಿಯಲು ಸಾಧ್ಯವಾಗಿದೆ… ಲೋಕೇಶ್ ಅವರ ಬಗ್ಗೆ ಕುಮಾರಕವಿ ನಟರಾಜ್ ಅವರು ಇಲ್ಲಿ ಹೇಳುತ್ತಾ ಹೋಗಿದ್ದಾರೆ…

ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್

ಕನ್ನಡ ಚಿತ್ರರಂಗದ ಪ್ರಪ್ರಥಮ ವಾಕ್ಚಿತ್ರ ಸತಿ ಸುಲೋಚನ. ಇದರ ಮೂಲಕ ಚಂದನವನದ ಮೊಟ್ಟಮೊದಲ ಹೀರೋ ಎನಿಸಿದ ದಿವಂಗತ ಸುಬ್ಬಯ್ಯನಾಯ್ಡು ಅವರ ಪುತ್ರ ಲೋಕನಾಥನಾಯ್ಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಮೇಲೆ ಲೋಕೇಶ್ ಎಂದು ಮರು ನಾಮಕರಣಗೊಂಡರು. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾರಂಗದ ಅನುಭವ ಹೆಚ್ಚು. ಇವರ ತನು-ಮನದಲ್ಲಿ ಕಲಾಶಾರದೆ ರಕ್ತ-ಉಸಿರು ಹರಿಯುತ್ತಿದ್ದು ಇವರ ಇಡೀ ವಂಶವು ಕಲೆಗಾಗಿಯೇ ಜನಿಸಿದ್ದು, ಬದುಕಿದ್ದು, ಆಳಿದ್ದು, ಅಳಿದಿದ್ದು ಎಂಬ ಕೀರ್ತಿ ಯಶಸ್ಸು ಇವತ್ತಿಗೂ ಕನ್ನಡ ನಾಡಲ್ಲಿ ನೆಲೆಯೂರಿದೆ.

ಲೋಕೇಶ್ ಬಾಲನಟನಾಗಿ ಪ್ರಹ್ಲಾದನ ಪಾತ್ರದಲ್ಲಿ ಅಭಿನಯಿಸಿದ ಚೊಚ್ಚಲ ಚಿತ್ರ ಭಕ್ತಪ್ರಹ್ಲಾದ/ 1958. ತದನಂತರ ಕಾಡು, ಕಾಕನಕೋಟೆ, ಸುಳಿ ಚಿತ್ರಗಳ ಮೂಲಕ ತುಸು ಪರಿಚಿತರಾದರು. ಆದರೆ ಜನಪ್ರಿಯತೆ ಗಳಿಸಿದ್ದು ಪರಸಂಗದ ಗೆಂಡೆತಿಮ್ಮ, ಎಲ್ಲಿಂದಲೋ ಬಂದವರು, ಭಕ್ತಸಿರಿಯಾಳ, ಭೂತಯ್ಯನ ಮಗ ಅಯ್ಯು, ನಿನಗಾಗಿ ನಾನು, ಎಂಬ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ವಿಜೇತ ಚಿತ್ರಗಳ ಮೂಲಕ ಎಂಬುದು ಇತಿಹಾಸ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು

ಲೋಕೇಶ್, ಆರ್.ಕೆ.ನಾರಾಯಣ್‌ರ ಇಂಗ್ಲಿಷ್ ಕಾದಂಬರಿ ದಿ ಫ಼ೈನಾನ್ಸಿಯಲ್ ಎಕ್ಸ್‌ಪರ್ಟ್ ಆಧಾರಿತ ಬ್ಯಾಂಕರ್‌ ಮಾರ್ಗಯ್ಯ ಚಿತ್ರದಿಂದ ಭಾರತದಾದ್ಯಂತ ಗುರ್ತಿಸಿಕೊಂಡರು. ನಂತರ ಸಾಲುಸಾಲಾಗಿ ತೆರೆಕಂಡ ದೇವರಕಣ್ಣು, ರಾಮಾಚಾರಿ, ಚಂದನದಗೊಂಬೆ, ರಣಧೀರ, ಭೂಮಿಗೆ ಬಂದ ಭಗವಂತ, ಪ್ರೇಮಲೋಕ, ಪಟ್ಟಣಕ್ಕೆ ಬಂದ ಪತ್ನಿಯರು, ಮುಂತಾದ ಅನೇಕ ಚಿತ್ರಗಳು ಫಿಲಂಫ಼ೇರ್ ಪ್ರಶಸ್ತಿ, ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಗಳಿಸಿದ ಮೇಲೆ ಈತ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ.

ಹಲವಾರು ಚಿತ್ರಗಳ ವಿಶೇಷ/ವಿಶಿಷ್ಠ ಅಭಿನಯಕ್ಕೆ ಕ್ಲಾಸ್-ಮಾಸ್ ಪ್ರೇಕ್ಷಕರ ಮೆಚ್ಚುಗೆ ಜತೆಗೆ ಹಣ ಕೀರ್ತಿ ಇತ್ಯಾದಿ ಎಲ್ಲವನ್ನೂ ಪಡೆದು ಭಾರತ ಚಿತ್ರರಂಗದಲ್ಲಿ ನೂತನ ದಾಖಲೆ ನಿರ್ಮಿಸಿದರು. ಸಾಮಾನ್ಯವಾಗಿ ಇವರ ಚಿತ್ರಗಳು ಒಂದಿಲ್ಲೊಂದು ವಿಶೇಷತೆ ಹೊಂದಿರುತ್ತಿದ್ದವು, ಹೀಗಾಗಿ ದೇಶ- ವಿದೇಶದ ಭಾಷೆಗಳಿಗೆ ಡಬ್/ರೀಮೇಕ್ ಆಗುತ್ತಿದ್ದವು. ಇದೂ ಸಹ ಚಂದನವನದ ದಾಖಲೆ.

ಇದನ್ನೂ ಓದಿ: ಚಂದನವನಕ್ಕೆ ಹೊಸತನ ತಂದ ನಿರ್ದೇಶಕ ಪುಟ್ಟಣ್ಣ ಕಣಗಾಲ್ … ಹೇಗಿತ್ತು ಸಿನಿ ಜರ್ನಿ?

ಭಾರತದ ಅನೇಕ ಯಶಸ್ವಿ ತಾರಾಜೋಡಿ ದಂಪತಿಗಳಲ್ಲಿ ಶ್ರೀಮತಿ ಗಿರಿಜಾ ಮತ್ತು ಶ್ರೀ ಲೋಕೇಶ್ ಅವರದ್ದೂ ಒಂದು ಪ್ರಮುಖ ಜೋಡಿ. ಇವರ ಪುತ್ರಿ ಪೂಜಾಲೋಕೇಶ್ ಸಹ ಉತ್ತಮ ನಟಿ, ಹೀರೋಯಿನ್ ಆಗಿ ಕೆಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಗಿರಿಜಾ ಲೋಕೇಶ್ ಪುತ್ರ ಸೃಜನ್‌ ಲೋಕೇಶ್ ಕೂಡಾ ಹತ್ತಾರು ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಪಡೆದರಲ್ಲದೆ “ಚೋಟಾ ಚಾಂಪಿಯನ್” “ಮಜಾ ವಿತ್ ಸೃಜಾ” ಹಾಗೂ “ಮಜಾಟಾಕೀಸ್’ ಮುಂತಾದ ಕಿರುತೆರೆ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

ಘನತೆವೆತ್ತ ಕಲಾವಂಶದ ಅಪ್ರತಿಮ ಅಪರೂಪದ ಹುಟ್ಟುಕಲಾವಿದ ಲೋಕೇಶ್ ಸಾಯುವ ವಯಸ್ಸಲ್ಲದ ತಮ್ಮ 57ನೇ ವಯಸ್ಸಲ್ಲಿ 14.10.2004ರಂದು ಬೆಂಗಳೂರಿನಲ್ಲಿ ದೈವಾಧೀನರಾದರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದ ಸರಳ ಸಜ್ಜನಿಕೆಯ ಅಮೂಲ್ಯ ಅಪರೂಪದ ಇಂಥ ಓರ್ವ ಶ್ರೇಷ್ಠ ಕಲಾವಿದ ಆಚಂದ್ರಾರ್ಕ ಅಜರಾಮರ ಎಂಬುದೇ ನಿತ್ಯಸತ್ಯ.

ಇದನ್ನೂ ಓದಿ: ಡಾ.ರಾಜಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ..

ಲೋಕೇಶ್ ನಟಿಸಿದ ಸಿನಿಮಾಗಳ ಬಗ್ಗೆ ನೋಡುವುದಾದರೆ.. ಭಕ್ತಪ್ರಹ್ಲಾದ (ಬಾಲನಟ 1958), ಅಡ್ಡದಾರಿ, ಕಾಡು, ಭೂತಯ್ಯನ ಮಗ ಅಯ್ಯು, ನಿನಗಾಗಿ ನಾನು, ದೇವರಕಣ್ಣು, ಪುನರ್ದತ್ತ, ಪರಿವರ್ತನೆ, ಕಾಕನಕೋಟೆ, ವಂಶಜ್ಯೋತಿ, ನನ್ನ ಪ್ರಾಯಶ್ಚಿತ್ತ, ಸುಳಿ, ಪರಸಂಗದ ಗೆಂಡೆತಿಮ್ಮ, ಅದಲು ಬದಲು, ಭೂಲೋಕದಲ್ಲಿ ಯಮರಾಜ, ಮುಯ್ಯಿ, ಕಮಲ, ದಾಹ, ಚಂದನದ ಗೊಂಬೆ, ಮಲ್ಲಿಗೆಸಂಪಿಗೆ, ಮಾನಿನಿ, ಭಕ್ತಸಿರಿಯಾಳ, ಹದ್ದಿನಕಣ್ಣು,  ಹುಣ್ಣಿಮೆಯ ರಾತ್ರಿಯಲ್ಲಿ, ಎಲ್ಲಿಂದಲೋ ಬಂದವರು, ಜಾರಿ ಬಿದ್ದ ಜಾಣ, ಪಟ್ಟಣಕ್ಕೆ ಬಂದ ಪತ್ನಿಯರು, ನಾರಿಸ್ವರ್ಗಕ್ಕೆ ದಾರಿ, ಸಂಗೀತ, ಯಾವ ಹೂವು ಯಾರ ಮುಡಿಗೋ, ಅವಳಿ ಜವಳಿ, ರುದ್ರಿ, ಭೂಮಿಗೆ ಬಂದ ಭಗವಂತ, ಎಡೆಯೂರು ಸಿದ್ದಲಿಂಗೇಶ್ವರ, ಅರ್ಚನಾ, ಅದೃಷ್ಟವಂತ, ಜಿಮ್ಮಿಗಲ್ಲು, ಬೆತ್ತಲೆ ಸೇವೆ, ದೇವರ ತೀರ್ಪು, ಬ್ಯಾಂಕರ್ ಮಾರ್ಗಯ್ಯ, ಇಬ್ಬನಿಕರಗಿತು.

ಕರುಣೆಯಿಲ್ಲದ ಕಾನೂನು, ಒಂಟಿಧ್ವನಿ, ಹೆಣ್ಣಿನಸೌಭಾಗ್ಯ, ಮೂರುಜನ್ಮ, ಶ್ವೇತಗುಲಾಬಿ, ಸಾವಿರಸುಳ್ಳು, ಮಾವನೋ ಅಳಿಯನೋ, ಶಿವಕೊಟ್ಟಸೌಭಾಗ್ಯ, ಲಂಚ ಲಂಚ ಲಂಚ, ಪ್ರೇಮಲೋಕ, ಸಂಗ್ರಾಮ, ತಾಯಿಕೊಟ್ಟತಾಳಿ, ಸೂರ್ಯ, ರಣಧೀರ, ಮಾಧುರಿ, ಸಂಕ್ರಾಂತಿ, ಕಿಂದರಿಜೋಗಿ, ಆಸೆಗೊಬ್ಬ ಮೀಸೆಗೊಬ್ಬ, ಅನುಕೂಲಕ್ಕೊಬ್ಬ ಗಂಡ, ಭುಜಂಗಯ್ಯನ ದಶಾವತಾರ, ರಾಮಾಚಾರಿ, ವೀರಪ್ಪನ್, ಹೊಸಮನೆ ಅಳಿಯ, ಚೈತ್ರದ ಪ್ರೇಮಾಂಜಲಿ, ಕ್ಷೀರಸಾಗರ, ಗೋಪಿಕೃಷ್ಣ, ಗುರುಬ್ರಹ್ಮ, ಬಾ ನನ್ನ ಪ್ರೀತಿಸು, ಭರ್ಜರಿಗಂಡು, ಮಾವನಿಗೆತಕ್ಕಅಳಿಯ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

ಅಂಗೈಲಿ ಅಪ್ಸರೆ, ಗುಂಡನ ಮದುವೆ, ಅಳಿಮಯ್ಯ, ಶೃಂಗಾರರಾಜ, ಬೇವುಬೆಲ್ಲ, ಚಿನ್ನಾನೀನಗುತಿರು, ಲಾಕಪ್ ಡೆತ್, ಯಾರಿಗೂ ಹೇಳ್ಬೇಡಿ, ಮಹಾಶಕ್ತಿಮಾಯೆ, ಪೂರ್ಣಸತ್ಯ, ಪಂಜರದಗಿಳಿ, ಪುಟ್ನಂಜ, ಮೋಜುಗಾರ ಸೊಗಸುಗಾರ, ಮಧುರಮೈತ್ರಿ, ಸಂಗೀತಸಾಗರ ಗಾನಯೋಗಿಪಂಚಾಕ್ಷರ ಗವಾಯೀ, ಪುಟ್ಮಲ್ಲಿ, ಕರ್ಪೂರದಗೊಂಬೆ, ಶಿವಲೀಲೆ, ಸ್ತ್ರೀ, ಈ ಹೃದಯ ನಿನಗಾಗಿ, ಮಾವನ ಮಗಳು, ಕೊಡಗಿನ ಕಾವೇರಿ, ಹಳ್ಳಿಯಾದರೇನುಶಿವ, ಭೂಮಿಗೀತ, ಮುಂಗಾರಿನಮಿಂಚು, ಪ್ರೇಮರಾಗಹಾಡುಗೆಳತಿ, ಕುರುಬನರಾಣಿ, ಮಿಸ್ಟರ್ ಪುಟ್ಸಾಮಿ, ಭೂಮಿತಾಯಿಯ ಚೊಚ್ಚಲಮಗ, ಪ್ರೀತ್ಸೋದ್ ತಪ್ಪಾ?

ತಾಯಿಯ ಋಣ, ಕೂಲಿರಾಜ, ಪಟೇಲ, ಕೃಷ್ಣಾರ್ಜುನ, ಗಟ್ಟಿಮೇಳ, ನನ್ನ ಪ್ರೀತಿಯ ಹುಡುಗಿ, ರುಸ್ತುಂ, ಭೂತಯ್ಯನ ಮಕ್ಕಳು, ನಿನ್ನೇ ಪ್ರೀತಿಸುವೆ, ಪಂಜಾಬಿ ಹೌಸ್, ನಂಜುಂಡಿ, ಶ್ರಾವಣಸಂಭ್ರಮ ಇಷ್ಟೇ ಅಲ್ಲದೆ ಬೇರೆ ಭಾಷೆಯ ಚಿತ್ರಗಳಾದ – ಭೂತಯ್ಯನ ಮಗ ಅಯ್ಯು ರೀಮೇಕ್: ಎಲ್ಲೋರುಂ ನಲ್ಲವರೆ(ತಮಿಳು), ಅಂದರೂ ಮಂಚಿವಾರೇ (ತೆಲುಗು), ಏಕ್ ಗಾಂವ್ಕಿ ಕಹಾನಿ(ಹಿಂದಿ) ನಟಿಸಿ ಗಮನಸೆಳೆದಿದ್ದಾರೆ.

admin
the authoradmin

25 Comments

  • Gendetimma LOKESH article is superb 👏 👌Thanks FOR THE AUTHOR NATRAJ SIR. Radhika Shyamalan, UDUPI

  • As usual mattondu best lekana about actor late LOKESH NAIDU bagge. Of course nice writing. Very much thanks to my brother kumarakavi nataraja sir 👏 ❤ Priyadarshini, Shivamogga.

  • KUMARAKAVI NATARAJ SIR PROVED 👏 ❤ 🙏 he writes well about Sandalwood Stories. His writing on Legend actor LOKESH (GENDETHIMMA) 👏 ❤ is extremely important and impressive to the present generation 👏 😀. I like him and I love his article. Lathadevi, Mangalore, D.K.

  • Old kannada film industry Legend actor LOKESH ARTICLE IS 👏 👌, SUCHITRA BHATT, Navi MUMBAI

  • Fantastic article on Sandalwood hero Gendethimma LOKESH, by NATRAJ sir 👏 👍 Amruta Singh, PUNE.

  • ನನಗೆ ತಿಳಿದಿರದ ಅನೇಕ ಮಾಹಿತಿಗಳಿಂದ ಕೂಡಿದ ಲೋಕೇಶ್ ಲೇಖನ ತುಂಬ ಚೆನ್ನಾಗಿ ಮೂಡಿಬಂದಿದೆ. ಲೇಖಕ ಮತ್ತು ಪ್ರಕಾಶಕರಿಗೆ ಧನ್ಯವಾದ
    ಸತ್ಯನಾರಾಯಣ, ನಿವೃತ್ತ ಅಧೀಕ್ಷಕ, ಮೈವಿವಿ, ಮೈಸೂರು.

  • Very meaningful and interesting article about old actor LOKESH 👏 😀 👌. Thanks a llott for all the crew of JANAMANA KANNADA e-newsletter and the author KUMARAKAVI NATARAJ SIR. Shylaja Chandrashekhar, Belagavi (now in Mumbai)

    • Mattondu uttama lekana kumarakavi nataraja ravarinda. Gendethimma LOKESH is an evergreen actor of Sandalwood. Dhanyavadagalu sir 🙏 Pruthvi, shirke Bengaluru

  • Mattondu uttama lekana kumarakavi nataraja ravarinda. Gendethimma LOKESH is an evergreen actor of Sandalwood. Dhanyavadagalu sir 🙏 Pruthvi, Bengaluru near Kengeri satellite city

  • LOKESH actor lekana superrrrr sir 🙏 👏
    Ramakrishna, Gamaka vidwan, Melukote, now settled in Bengaluru

  • Indian legendary actor LOKESH lekana superrrrr sir 🙏 👏
    Ramakrishna, Gamaka vidwan, Melukote, now settled in Bengaluru

  • ಗೆಂಡೆತಿಮ್ಮ ಲೋಕೇಶ್ ರವರ ಲೇಖನ ಓದಿದೆ. ಕುಮಾರಕವಿಯ ಬರವಣಿಗೆಯ ಶೈಲಿ ಅಮೋಘ ಅಧ್ಬುತ. ಧನ್ಯವಾದ.

  • ಗೆಂಡೆತಿಮ್ಮ ಲೋಕೇಶ್ ರವರ ಲೇಖನ ಓದಿದೆ. ಕುಮಾರಕವಿಯ ಬರವಣಿಗೆಯ ಶೈಲಿ ಅಮೋಘ ಅಧ್ಬುತ. ಧನ್ಯವಾದ. ಶೋಭ ರವೀಂದ್ರ, ಬೆಳಗಾವಿ

  • ನಮ್ಮ ಹೆಮ್ಮೆಯ ಗುರುಗಳಾದ ಕುಮಾರಕವಿಯವರು ಬರೆದಿರುವ ಚಂದನವನ ಚರಿತ್ರೆಯ ಉತ್ತಮ ನಟ ಲೋಕೇಶ ರವರ ಲೇಖನ ಬೊಂಬಾಟ್…..
    ಜೈಶಂಕರ್.(KAS) G.block, R.K.nagara Mysore 570022

  • My senior colleague Mr.Natraj sir written extraordinary article on kannada film old actor LOKESH 👏 👌. Prabhakar, Sharadadevi Nagara, Mysuru

  • Very good 👍 👏 article about cinema actor LOKESH. I am also one of the fan readers of kumarakavi nataraja sir.
    Chandana, chamundipuram

  • First class article 🙌 👏 👌 about kannada film actor late Lokesh, 😊 🫂 🙏 Roopeshkumar, Chennai

  • Very good 👍 👏 article about cinema actor LOKESH. I am also one of the fan readers of kumarakavi nataraja sir.
    Chandana, chamundipuram, Mysore

  • ಹಳೇ ಕಾಲದ ಸಿನಿಮ ನಟ ಗೆಂಡೆತಿಮ್ಮಲೋಕೇಶ ಕುರಿತ ಲೇಖನವನ್ನ ಕವಿ ನಟರಾಜ ಅವರು ಎಲ್ಲರಿಗೂ ಅರ್ಥವಾಗುವಂತೆ ಬರೆದಿದ್ದಾರೆ. ನಮಸ್ಕಾರ ಧನ್ಯವಾದ, ಯಶೋಧಮ್ಮ, ಬೆಂಗಳೂರು

  • ಕನ್ನಡ ಚಿತ್ರರಂಗದ ದಿಗ್ಗಜರಾದ ಲೋಕೇಶ್ ಲೇಖನ ಬಹಳ ಸೊಗಸಾಗಿದೆ. ಲೇಖಕರಿಗೂ ಜನಮನ ಪತ್ರಿಕೆಯ ಪ್ರಕಾಶಕರಿಗೂ ಧನ್ಯವಾದ, ಸುಮಾರಾಜ್, ಲಕ್ಷ್ಮೀಕಾಂತನಗರ, ಹೆಬ್ಬಾಳ, ಮೈಸೂರು.

  • ಜನಪ್ರಿಯ ಕನ್ನಡ ಪತ್ರಿಕೆಯಾದ ಜನಮನ ಬಳಗಕ್ಕೆ ನಮಸ್ಕಾರ. ಅಂದಹಾಗೆ ನಮಗೆ ಮತ್ತು ನಮ್ಮಂಥ ಅನೇಕರಿಗೆ ಗೊತ್ತಿರಲಿಲ್ಲ ದಿವಂಗತ ನಟ ಲೋಕೇಶ್ ಕನ್ನಡದ ಮೊಟ್ಟಮೊದಲ ಸಿನಿಮಾ ಹೀರೋ ದಿವಂಗತ ಸುಬ್ಬಯ್ಯನಾಯ್ಡುರ ಮಗ ಎಂದೂ ಮತ್ತು ಇವರ ಹೆಸರು ಲೋಕನಾಥನಾಯ್ಡು ಎಂದು. ಎಲ್ಲವನ್ನು ತಿಳಿಸಿಕೊಟ್ಟ ಹಿರಿಯ ಬರಹಗಾರರಾದ ಕುಮಾರಕವಿಯವರಿಗೆ ಧನ್ಯವಾದಗಳು. ಚಿದಾನಂದಮೂರ್ತಿ, ನಿವೃತ್ತ ಉಪಕುಲಸಚಿವ, ಮೈವಿವಿ, ಮೈಸೂರು

  • ಗೆಂಡೆತಿಮ್ಮ ಲೋಕೇಶ್ ಸಿನಿಮ ಲೇಖನ ಸೂಪರೋ…ಸೂಪರ್. ಎಲ್ಲರಿಗೂ ನಮಸ್ಕಾರ ಸರ್. ನಂಜುಂಡೇಗೌಡ, ದೊಡ್ಡಬಂಡಿಕೇರಿ, ನಂಜುಮಳಿಗೆ, ಚಾಮುಂಡಿಪುರಂ ಹತ್ತಿರ, ಮೈಸೂರು 570004

  • ಗೆಂಡೆತಿಮ್ಮ ಲೋಕೇಶ್ ಸಿನಿಮ ಲೇಖನ ಸೂಪರೋ…ಸೂಪರ್. ಎಲ್ಲರಿಗೂ ನಮಸ್ಕಾರ. ನಂಜುಂಡೇಗೌಡ, ದೊಡ್ಡಬಂಡಿಕೇರಿ, ನಂಜುಮಳಿಗೆ, ಚಾಮುಂಡಿ ಪುರಂ ಹತ್ತಿರ, ಮೈಸೂರು-570004.

  • South India Nadigar Lokesh article is very very 🙂 👌 👍 Gunasheelan, Golden film studio, kodambakkam, Chennai

  • South India Nadigar Lokesh article is very very 🙂 👌 👍 -Gunasheelan, Golden film studio, Kodambakkam, Chennai, Tamilnadu

Leave a Reply

Translate to any language you want