LatestMysore

ಅಪ್ರಾಪ್ತ ಮಕ್ಕಳಿಗೆ ಕಾರು ಕೊಡುವ ಮುನ್ನ ಹುಷಾರ್… ಬೀಳಲಿದೆ ನಿಮಗೆ ದಂಡ…

ಮಡಿಕೇರಿ: ಪೋಷಕರೇ ಹುಷಾರ್ ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡುವ ಮುನ್ನ ಎಚ್ಚರ ವಹಿಸಿ.. ಇಲ್ಲಾಂದ್ರೆ ನಿಮಗೆ ಬೀಳಲಿದೆ ದಂಡ… ಇದೀಗ ಅಪ್ರಾಪ್ತ ಮಗನಿಗೆ ಕಾರು ಚಲಾಯಿಸಲು ಕೀ ಕೊಟ್ಟ ತಪ್ಪಿಗೆ ಹೆತ್ತವರು 25ಸಾವಿರ ದಂಡ ಕಟ್ಟಿರುವ ಘಟನೆ ಕೊಡಗಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ಭಾನುವಾರ ಸಂತೆ ದಿನ, ಪೊಲೀಸರನ್ನು ಕಂಡು ಅಂಗಡಿಗೆ ಡಿಕ್ಕಿ ಪಡಿಸಿದ್ದನು. ಈ ಸಂಬಂಧ ಪೋಷಕರ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವಿರಾಜಪೇಟೆ  ನ್ಯಾಯಾಲಯವು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೋಷಕರಿಗೆ 25ಸಾವಿರ  ರೂ ದಂಡ ವಿಧಿಸಿದೆ. ಈ ಕುರಿತು ಮಾತನಾಡಿದ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ “ಪಾಲಕರೇ, ನಿಮ್ಮ ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ನೀಡಬೇಡಿ. ಹಾಗೆ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.

ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನವನ್ನು ಚಲಾಯಿಸಲು ಕೊಡಬೇಡಿ ಎಂದು ಪೊಲೀಸ್ ಇಲಾಖೆ ಎಚ್ಚರಿಸುತ್ತಲೇ ಬಂದಿದ್ದರೂ  ಪೊಲೀಸರ ಮಾತಿಗೆ ಸೊಪ್ಪು ಹಾಕದೆ ಕೆಲವೆಡೆ ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗಿ ಸಾವು ನೋವು ಸಂಭವಿಸುವುದು ನಡೆಯುತ್ತಲೇ ಇದೆ. ಈ ತಪ್ಪಿಗಾಗಿ ಕೆಲ ಪೋಷಕರು ಜೈಲು ಶಿಕ್ಷೆ ಹಾಗೂ ದಂಡ ತೆತ್ತಿದ್ದಾರೆ.  ಇನ್ನಾದರೂ ಪೋಷಕರು ವಾಹನಗಳನ್ನು ಅಪ್ರಾಪ್ತ ಮಕ್ಕಳಿಗೆ ನೀಡುವ ಮುನ್ನ ಎಚ್ಚರ ವಹಿಸಿ..

admin
the authoradmin

Leave a Reply