ಮೈಸೂರು: ಕಳೆದ ಮೂರು ದಶಕಗಳಿಂದ ತಳ ಸಮುದಾಯಗಳ ಪರವಾದ ಹೋರಾಟ, ನಾಡು ನುಡಿಯ ಬಗ್ಗೆ ನಿಜವಾದ ಕಾಳಜಿಯಿಂದ, ಹಳೇ ಮೈಸೂರು ಭಾಗದಲ್ಲಿ ಶೋಷಿತ ವರ್ಗಗಳ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿರುವ, ಮಡಿವಾಳ ಸಮುದಾಯದ ಆರ್ ರಘು ಕೌಟಿಲ್ಯ ರವರಿಗೆ ಭಾರತೀಯ ಜನತಾ ಪಾರ್ಟಿ, ವಿಧಾನ ಪರಿಷತ್ ಚುನಾವಣೆ ಗೆ ಅವಕಾಶ ಕಲ್ಪಿಸಿರುವುದು, ರಾಜ್ಯದ ಇಡೀ ಕಾಯಕ ಸಮುದಾಯಕ್ಕೆ ಸಂದ ಗೌರವ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮೈ ನಾ ಲೋಕೇಶ್ ಅಭಿಪ್ರಾಯ ಪಟ್ಟರು.

ಮೈಸೂರು ಜಿಲ್ಲೆಯ ಕಾಯಕ ಸಮುದಾಯಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಮಾತನಾಡುತ್ತಿದ್ದರು.. ರಘುರವರು, ಮೇಲ್ಮನೆಯಲ್ಲಿ ಇಡೀ ರಾಜ್ಯದ ಧಮನಿತ ಸಮುದಾಯಗಳ ಧ್ವನಿಯಾಗಿ, ಸಂವಿಧಾನದ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಡಿ ದೇವರಾಜ ಅರಸುರವರ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

ರಘುರವರ ಆಯ್ಕೆ ಭಾರತೀಯ ಜನತಾ ಪಕ್ಷದ, ಹಿಂದುಳಿದ ವರ್ಗಗಳ ಪರವಾದ ನೈಜ ಕಳಕಳಿ, ಬದ್ಧತೆಗೆ ಸಾಕ್ಷಿಯಾಗಿದ್ದು, ಕೆಲವು ಬೆರಳೆಣಿಕೆಯಷ್ಟು ಹಿಂದುಳಿದ ಜಾತಿಗಳಿಗೆ ಸೌಲಭ್ಯ ಕಲ್ಪಿಸಿ, ಉಳಿದ ಅತಿ ಹಿಂದುಳಿದ, ಸಮುದಾಯಗಳ ಮೂಗಿಗೆ ತುಪ್ಪ ಸವರಿ ಅವರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವ ಪ್ರಸ್ತುತ ರಾಜಕಾರಣದ ಕಾಲಮಾನದಲ್ಲಿ ಅತಿ ಸೂಕ್ಷ್ಮ ಕಾಯಕ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿರುವುದು ಶ್ಲಾಘನೀಯವಾಗಿದೆ.
ಆಯ್ಕೆಗೆ ಕಾರಣೀಭೂತರಾದ ಭಾಜಪಾ ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ, ಮಾಜಿ ಮುಖ್ಯಮಂತ್ರಿಗಳೂ ಆದ ಶ್ರೀ ಬಿ ಎಸ್ ಯಡಿಯೂರಪ್ಪ ರವರಿಗೂ, ಬಿಜೆಪಿ ರಾಜ್ಯಾಧ್ಯಕ್ಷ ರಾದ ಶ್ರೀ ಬಿ ವೈ ವಿಜಯೇಂದ್ರ ರವರಿಗೂ, ಎಲ್ಲಾ ಮುಖಂಡರಿಗೆ .. ಹಿಂದುಳಿದ ವರ್ಗಗಳ ಪರವಾಗಿ.ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರೂ, ನಿವೃತ್ತ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಕೆ.ಆನಂದ್, ರಮೇಶ್, ನಾರಾಯಣ, ರಾಚಪ್ಪ, ನಾರಾಯಣ, ಮೈ ನಾ ಲೋಕೇಶ್, ಮಂಜುನಾಥ, ಕುಂಬಾರ ಸಮಾಜದ ಮುಖಂಡರಾದ ವಿ ಚೆಲುವರಾಜು, ವಿಶ್ವಕರ್ಮ ಸಮಾಜದ ಮುಖಂಡರಾದ ಎಂ ಜೆ ರವಿಶಂಕರ್, ಮಡಿವಾಳ ಸಮಾಜದ ಮುಖಂಡರಾದ ಪಿ.ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.








