LatestMysore

ರಾಜ್ಯದಲ್ಲಿ ಬರದ ಛಾಯೆ.. ಸರ್ಕಾರಗಳು ಕೂಡಲೇ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಘೋಷಿಸಲು ಆಗ್ರಹ

ಮೈಸೂರು: ರಾಜ್ಯದಲ್ಲಿನ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಪರಿಹಾರ ಘೋಷಿಸಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆ ಕಳೆದ ಸಾಲಿನ ಬಾಕಿ ಕೂಡಲೇ ರೈತರಿಗೆ ನೀಡಬೇಕು ಎಂಬಿವೇ ಮೊದಲಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು.27ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು ಜಾನುವಾರುಗಳಿಗೆ ಮೇವು ನೀರು, ಜನರಿಗೆ ಕುಡಿಯಲು ನೀರು ಸಾಕಷ್ಟು ಇಲ್ಲ. ಹಾಕಿರುವ ಬೆಳೆ ರಾಗಿ ಜೋಳ ಮೆಕ್ಕೆಜೋಳ ಹತ್ತಿ ಸೂರ್ಯಕಾಂತಿ  ಸಹ ನಷ್ಟವಾಗಿದೆ. ಅಂತರ್ಜಲ ಕುಸಿತದಿಂದ ಕೃಷಿ ಪಂಪ್ ಸೆಟ್ ಗಳಲ್ಲಿ ಸಹ ನೀರು ನಿಂತುಹೋಗಿದೆ ಇದರಿಂದ ಬೆಳೆದಿರುವಂತಹ ಕಬ್ಬು, ಬಾಳೆ, ಅರಿಶಿಣ, ತೆಂಗು ಇಳುವರಿಯಲ್ಲಿ ನಷ್ಟವೆ ಹೊಂದಿವೆ. ಆದ್ದರಿಂದ ತಕ್ಷಣ ಬರಪೀಡಿತ  ಘೋಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್  ಮಾನದಂಡಗಳನ್ನು ಬದಲಾಯಿಸಿ ವೈಜ್ಞಾನಿಕ ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಬೆಳೆ ನಷ್ಟ  ಘೋಷಣೆ ಮಾಡಬೇಕು ಇದರಿಂದ ರೈತರ ಬದುಕು ಜೀವನ ಉಳಿಯುವಂತಾಗುತ್ತದೆ. ರಾಜ್ಯ ಸರ್ಕಾರ ವ್ಯಾಪ್ತಿ ಬರುವ ಸುಮಾರು 25,000  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 30,000 ಕೋಟಿ ರೂಪಾಯಿಯ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಕೇಂದ್ರ ಸರ್ಕಾರ ಬರಗಾಲ ಜಿಲ್ಲೆಗಳ ರಾಷ್ಟ್ರೀಕೃತ ಬ್ಯಾಂಕ್  ಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಖಾಸಗಿ ಫೈನಾನ್ಸ್ ಗಳ ಅಟ್ಟಹಾಸ ಮುಂದುವರೆದಿದ್ದು ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ಇದು ನಿಲ್ಲಬೇಕು ಗ್ರಾಮ ಪಂಚಾಯತ್ ಮಟ್ಟ ದಲ್ಲಿ ಮೇವು ಬ್ಯಾಂಕು ಸ್ಥಾಪನೆ ಆಗಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯೂ ಕಳೆದ ಸಾಲಿನ ಬಾಕಿ ಸರ್ಕಾರದ ಆದೇಶ ಪ್ರತಿ ಟನ್ ಗೆ 50 ರೂ. ನಂತೆ ಮೈಸೂರು ಮತ್ತು ಚಾಮರಾಜನಗರ ದಲ್ಲಿ ಸುಮಾರು ಎಂಟು ಕೋಟಿ ರೂ ಬಾಕಿ ಪಾವತಿ ಆಗಬೇಕು ತಕ್ಷಣ ಇದನ್ನು ಪಾವತಿ ಮಾಡಬೇಕು. ಅದಕ್ಕೂ ಮುನ್ನ ಕಾರ್ಖಾನೆ ಆರಂಭಕ್ಕೆ ಸರ್ಕಾರ, ಜಿಲ್ಲಾಡಳಿತ ರಹದಾರಿ ನೀಡಬಾರದು. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆ ಮಾಲೀಕರ ಜೊತೆ ಕಬ್ಬು ಬೆಳೆಗಾರರ ಸಭೆ ನಡೆಸಿ ರೈತರಿಗೆ ಹಣ ಪಾವತಿ ಸೂಚನೆ ನೀಡಬೇಕು ಎಂದರು.

ಉತ್ತರ ದಕ್ಷಿಣ ಎಂಬ ತಾರತಮ್ಯ ಇರಬಾರದು ಕೇಂದ್ರ ಸರ್ಕಾರ FRP ದರ ಪ್ರತಿ ಟನ್ ಗೆ 3650 ರೂ.10.25 ಕ್ಕೆ ನಿಗದಿ ಮಾಡಿದೆ ಅದರಂತೆ ಕಟಾವು ಸಾಗಾಣಿಕೆಯನ್ನು ಕಾರ್ಖಾನೆಯವರೇ ಭರಿಸಲಿ ಅದನ್ನು ಬಿಟ್ಟು ಕರ್ನಾಟಕ ದಲ್ಲಿ ದಕ್ಷಿಣ ಭಾಗದ ಕಾರ್ಖಾನೆ ಗಳು ಮಂಡ್ಯ, ಮೈಸೂರು,  ಚಾಮರಾಜನಗ, ರ ದಾವಣಗೆರೆ ವರೆಗೆ ರೈತರೆಕಬ್ಬು ಕಟಾವು ಮಾಡಿ ಕಾರ್ಖಾನೆ ಗೇಟ್ ಗೆ ಸಾಗಿಸುವ  ನಿಯಮ ರದ್ದು ಆಗಬೇಕು, ಇದರಿಂದ ರೈತರಿಗೆ ಪ್ರತಿ ಟನ್ ಗೆ 1000 ರೂ. ಕಡಿಮೆ ಸಿಗುತ್ತದೆ.

ಈ ಭಾಗದ ರೈತರಿಗೆ  FRP ಆಧಾರದಂತೆ 3650 ರಲ್ಲಿ ಶೇ.1ರಷ್ಟು ಕಳೆದು 3300 ರೂ.ರೈತರಿಗೆ ಜಮಾ ಆಗಬೇಕು, ಇಲ್ಲಿ 2000 ರೂ.ಮಾತ್ರ ರೈತರಿಗೆ ಜಮಾ ಆಗುತ್ತಿದೆ ಇದು ನಿಲ್ಲಬೇಕು, ಕೇಂದ್ರ FRP ಯಂತೆ ರೈತರಿಗೆ ಹಣ ಪಾವತಿ ಆಗಬೇಕು. ತೂಕದ ಯಂತ್ರ ಕಾರ್ಖಾನೆ ಮುಂದೆ ಹಾಕಬೇಕು. ಇಳುವರಿಯಲ್ಲಿ ಮೋಸ    ಸ್ಥಳೀಯರ ತಂಡ ರಚಿಸಬೇಕು ದ್ವಿಪಕ್ಷಿಯ ಒಪ್ಪಂದ  ಪತ್ರ ಜಾರಿ ಆಗಬೇಕು ಪ್ರಸಕ್ತ ಸಾಲಿಗೆ ಪ್ರತಿ ಟನ್ ಗೆ ಮುಂಗಡ 4000 ರೂ. ನಿಗದಿ ಮಾಡಬೇಕು. ಕಬ್ಬು ಬೆಳೆ ಸಾಕಷ್ಟು ಕುಸಿದಿದ್ದು ಸುಮಾರು 20 ರಷ್ಟು ಕೊರತೆ ಇದೆ

ನೀಟ್ ಅಕ್ರಮ ಕೋರರಿಗೆ ಉನ್ನತ ಮಟ್ಟದ ತನಿಖೆ ಯಿಂದ ಗಲ್ಲು ಶಿಕ್ಷೆ ನೀಡಬೇಕು, ಲಕ್ಷಾಂತರ ಮಕ್ಕಳ ಭವಿಷ್ಯದಲ್ಲಿ ಆಟ ಆಡಿದ್ದಾರೆ.  ಬಲಿ ಪಡೆದ್ದಿದಾರೆ ಅರ್ಹ ಆತ್ಮಹತ್ಯೆ    ಬಲಿಯಾದ ಮಕ್ಕಳ ಕುಟುಂಬ ಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು ಕೇಂದ್ರ ಸಚಿವ ದರ್ಮೆಂದ್ರ ಪ್ರದಾನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರಾಜ್ಯ ಗೌರವ ಅಧ್ಯಕ್ಷ ಹಂಡುವಿನಹಳ್ಳಿ  ರಾಜು, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ, ಖಜಾಂಚಿ ಕೆರೆಹುಂಡಿ ರಾಜಣ್ಣ, ಜಿಲ್ಲಾ ಖಜಾಂಚಿ ಹೊಸಪುರ ಮಾದಪ್ಪ, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ ಜಿಲ್ಲಾ ಉಪಾಧ್ಯಕ್ಷ ಗೌಡಿಕೆಶಿವಣ್ಣ ಇತರರು ಹಾಜರಿದ್ದರು.

admin
the authoradmin

Leave a Reply