LatestMysore

ಸೇವಾ ಕಾರ್ಯದೊಂದಿಗೆ ಸಾ ರಾ ಮಹೇಶ್ ಹುಟ್ಟುಹಬ್ಬಾಚರಣೆಗೆ ಅಭಿಮಾನಿಗಳ ನಿರ್ಧಾರ

ಕೆ.ಆರ್.ನಗರ(ಜಿಟೆಕ್ ಶಂಕರ್) : ಮಾಜಿ ಸಚಿವ ಸಾ.ರಾ.ಮಹೇಶ್ ಅವರ 60 ನೇ ವರ್ಷದ ಜನ್ಮ ದಿನಾಚರಣೆಯನ್ನು ವಿವಿಧ ಸಮಾಜ ಸೇವಾ ಕಾರ್ಯಗಳೊಂದಿಗೆ ವಿನೂತನವಾಗಿ  ಆಚರಿಸಲು ತೀರ್ಮಾನಿಸಲಾಗಿದೆ ಎಂದು ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.

ಪಟ್ಟಣದ ಪಿಎಲ್ ಡಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆದ ಸಾ.ರಾ.ಮಹೇಶ್ ಅವರ ಜನ್ಮ‌ ದಿನಾಚರಣೆ ಸಂಬಂಧ  ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಆಗಸ್ಟ್ 10ರಂದು ನಗರದ ಪುರಸಭೆ ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮವನ್ನು ಯಾವುದೇ ದುಂದು ವೆಚ್ಚ ಮಾಡದೆ ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

ಜನ್ಮ ದಿನಾಚರಣೆಯ ಜತೆಗೆ ಪಕ್ಷ ಸಂಘಟನೆಗೂ ಆದ್ಯತೆ ನೀಡಿ ಮುಂದಿನ ವಿಧಾನ ಸಭಾ ಚುನಾವಣೆಗೂ ಸನ್ನದ್ಧ ರಾಗಲು ಕರೆ ನೀಡುವ ಅನಿವಾರ್ಯತೆ ಇರುವುದರಿಂದ ಕಾರ್ಯಕರ್ತರು ಮತ್ತು‌ ಮುಖಂಡರು ಸಕ್ರಿಯವಾಗಬೇಕೆಂದು ತಿಳಿಸಿದ ಅವರು ಕಾರ್ಯಕ್ರಮಕ್ಕೆ ಸಾ.ರಾ.ಮಹೇಶ್ ಅವರ ಬಳಿ ಆರ್ಥಿಕ ಸಹಾಯ ಪಡೆಯದೆ ಕಾರ್ಯಕರ್ತರೆ ಧನ ಸಂಗ್ರಹ ಮಾಡಿ ಜನ್ಮ‌ ದಿನಾಚರಣೆಯನ್ನು ಆಚರಿಸೋಣ ಎಂದು ಕರೆ ನೀಡಿದರು.

ಜಿ.ಪಂ.ಮಾಜಿ ಸದಸ್ಯ ಅಮಿತಿ ವಿ.ದೇವರಹಟ್ಟಿ ಮಾತನಾಡಿ ಮಾಜಿ ಸಚಿವರ ಹುಟ್ಟು ಹಬ್ಬದ ದಿನದಂದು ಪಟ್ಟಣದ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದ ಮತ್ತು ಕಟ್ಟ ಕಡೆಯ ಸಮಾಜದ ಕೆಲವರನ್ನು‌ ಗುರುತಿಸಿ ಅವರಿಗೆ ಆರ್ಥಿಕ ಸಹಾಯ ಮಾಡುವುದರ ಜತೆಗೆ ಬಡ ಕುಟುಂಬದಲ್ಲಿ ಉನ್ನತ‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಹಸ್ತಚಾಚುವ ಮೂಲಕ‌ ಜನ್ಮ‌ದಿನಾಚರಣೆ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ,  ಸಿ.ಜೆ.ದ್ವಾರಕೀಶ್, ಎಸ್.ಟಿ.ಕೀರ್ತಿ, ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಂ.ಟಿ.ಅಣ್ಣೇಗೌಡ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಕೆ.ಆರ್.ನಗರ ತಾಲೂಕು ಅಧ್ಯಕ್ಷ ಕುಮಾರ್, ಸಾಲಿಗ್ರಾಮ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಯುವ ಘಟಕದ ಅಧ್ಯಕ್ಷ ಸಿ.ವಿ.ಗುಡಿ ಯೋಗೇಶ್, ಪ್ರಧಾನಕಾರ್ಯದರ್ಶಿ ಉಮೇಶ್,  ಸಾಲಿಗ್ರಾಮ ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳುಮಧು ಮಾತನಾಡಿದರು.

ಪುರಸಭೆ ಮಾಜಿ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ರಾಜ ಶ್ರೀಕಾಂತ್, ಕೆ.ಆರ್.ಗಿರೀಶ್, ಸಂತೋಷ್ ಗೌಡ,  ಮಹಿಳಾ ಘಟಕದ ಪದಾಧಿಕಾರಿಗಳಾದ ದ್ರಾಕ್ಷಾಯಿಣಿ, ರೂಪಸತೀಶ್, ರಾಜಲಕ್ಷ್ಮಿ, ಮೋಹನ್ ಕುಮಾರಿ, ಪಿಎಲ್ ಡಿ ಬ್ಯಾಂಕ್ ಸದಸ್ಯ‌ ಹರಿಚಿದಂಬರ್, ಮುಖಂಡರಾದ ತಮ್ಮಣ್ಣ, ಹೆಚ್.ಪಿ.ಗೋಪಾಲ್, ಹನಸೋಗೆ ನಾಗರಾಜು, ಕೆ.ಜೆ.ಕುಚೇಲ, ಕೋಳಿಕಿಟ್ಟಿ, ಹಳಿಯೂರುಜಗದೀಶ್, ಶಂಭು, ಬಾಲಾಜಿಗಣೇಶ್, ವಕೀಲರಾದ ಅಂಕನಹಳ್ಳಿ ತಿಮ್ಮಪ್ಪ, ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply

Translate to any language you want