ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಬೇಕು… ಹೆಚ್.ಪಿ.ಅಮರ್ ನಾಥ್ ಒತ್ತಾಯ
ಸಿದ್ದರಾಮಯ್ಯರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು- ಹಂಪಲು ವಿತರಣೆ

ಹುಣಸೂರು(ಮನುಕುಮಾರ್/ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 79ನೇ ಜನ್ಮ ದಿನವನ್ನು ಬುಧವಾರ ವಿವಿಧ ಸಮಾಜ ಸೇವಾ ಕಾರ್ಯವನ್ನು ನಡೆಸುವ ಮೂಲಕ ಅವರ ಅಭಿಮಾನಿಗಳು ಅರ್ಥ ಪೂರ್ಣವಾಗಿ ಆಚರಿಸಿದರು.
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ, ನಗರದ ದೇವರಾಜ್ ಅರಸ್ ಆಸ್ಪತ್ರೆಯಲ್ಲಿ ನಗರದ ಬ್ಲಾಕ್ , ಬಿಳಿಕೆರೆ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹುಡಾ ಅದ್ಯಕ್ಷ ಹೆಚ್.ಪಿ.ಅಮರ್ ನಾಥ್ ರವರ ನೇತ್ರತ್ವದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಜೈಕಾರ ಹಾಕಿದರು.
ಸಾಯಿಬಾಬಾ ಹಾಗೂ ಮುತ್ತುಮಾರಮ್ಮ ದೇವಸ್ಥಾನದಲ್ಲಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯ ಅವರಿಗೆ ಆಯುರ್ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸಿದರು. ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು- ಹಂಪಲು ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್ ಸಿದ್ದರಾಮಯ್ಯರವರು ಯಾವುದೇ ಕಾರಣಕ್ಕೂ ರಾಜಕೀಯ ಜೀವನದಿಂದ ದೂರ ಸರಿಯಬಾರದು.

ಹಿಂದುಳಿದ ವರ್ಗಗಳ, ಶೋಷಿತರ, ಅಲ್ಪಸಂಖ್ಯಾತ ಸಮುದಾಯದ ಏಳಿಗೆಗಾಗಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳು ಇಂದಿನ ನಮ್ಮಂತ ಯುವರಾಜಕಾರಣಿಗಳು ಹಾಗೂ ಎಲ್ಲಾ ರಾಜಕಾರಣಿಗಳಿಗೂ ಮಾರ್ಗದರ್ಶಕರಾಗಿದ್ದಾರೆ ಆದ್ಧರಿಂದ ನಾನು ಹಾಗೂ ನಮ್ಮ ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಕೈ ಮುಗಿದ್ದು ಮನವಿ ಮಾಡಿಕೊಳ್ಳುತ್ತೇವೆ, ಅವರು ಯಾವಾಗಲೂ ಸಕ್ರಿಯ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಸದಾ ಇರಬೇಕೆಂದರು.
ಮಾಜಿ.ಜಿ.ಪಂ.ಸದಸ್ಯ ಹಾಗೂ ತಾಲ್ಲೂಕು ಕುರುಬ ಸಂಘದ ಅದ್ಯಕ್ಷ ಡಿ.ಕೆ.ಕುನ್ನೇಗೌಡ ಮಾತನಾಡಿ, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಸಾಮಾಜಿಕ ನ್ಯಾಯದಡಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಹಾಗೂ ಕುವೆಂಪು ರವರ ಮಾರ್ಗದರ್ಶನಂತೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಆಡಳಿತ ನೀಡಿರುವ ಸಿದ್ದರಾಮಯ್ಯ ಅವರು ಸತಾಯಿಷ್ಯಗಳಾಗಿ ನೂರು ವರ್ಷಗಳ ಕಾಲ ದಿನ ದಲಿತರ ಹಿಂದುಳಿದ ವರ್ಗಗಳ, ಶೋಷಿತರ ಕಲ್ಯಾಣಕ್ಕಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಜಯರಾಮ್ ಮಾತನಾಡಿ, ಸಿದ್ದರಾಮಯ್ಯರವರು ತಮ್ಮ ಅಧಿಕಾರ ಅವಧಿಯಲ್ಲಿ ಹುಣಸೂರು ತಾಲೂಕಿಗೆ ಹೆಚ್.ಪಿ. ಮಂಜುನಾಥ್ ರವರ ನೇತೃತ್ವದಲ್ಲಿ ಸಾವಿರಾರು ಕೋಟಿ ಅನುದಾನವನ್ನ ಕೊಟ್ಟು ತಾಲೂಕಿನ ಅಭಿವೃದ್ಧಿಗೆ ಸಹಕರಿಸಿದ್ದಾರೆ.
2013, 2018ರ ಸಿದ್ದರಾಮಯ್ಯ ಹಾಗೂ ಮಂಜುನಾಥ್ ರವರ ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಿದೆ ಇಂತಹ ಮಹಾನ್ ವ್ಯಕ್ತಿ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ರೋಗಿಗಳು ಬೇಗ ಗುಣಮುಖರಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯದ್ಯಕ್ಷ ಗದ್ದಿಗೆ ದೇವರಾಜ್, ಬ್ಲಾಕ್ ಅದ್ಯಕ್ಷರುಗಳಾದ ರವಿಪ್ರಸನ್ನ, ಬಾಲಸುಂದರ್, ಪ್ರೇಮ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಅಕ್ರಮ- ಸಕ್ರಮ ಸಮಿತಿ ಸದಸ್ಯ ಹೆಚ್.ಎಸ್. ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪೈಸಲ್, ದರ್ಶನ್, ಮಹಿಳಾ ರಕ್ಷ ಸಮಿತಿ ಸದಸ್ಯ ನೇತ್ರಾವತಿ, ಮೈಸೂರು ಜಿಲ್ಲಾ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಕಲ್ಪನಾ , ಸದಸ್ಯೆ ಸುಕನ್ಯಾ, ಅಕ್ರಮ- ಸಕ್ರಮ ಸಮಿತಿ ಸದಸ್ಯೆ ಲತಾ, ಮುಖಂಡರಾದ. ಹರೀಶ್, ನೆಲ್ಸನ್ ಬಾಬು, ದಿಲೀಪ್, ಪ್ರದೀಪ್, ನಾಗರಾಜು, ಮನೋಜ್(ಗುಂಡ) ಮುಜೀಬ್, ಸುಭಾಷ್, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.







