CinemaLatest

ನೀವೊಮ್ಮೆ ‘ಸ್ವಾಮಿ ಅಯ್ಯಪ್ಪ’ನ  ಹಾಡು ಕೇಳಿ…    ‘ಮಣಿಕಂಠ’ಚಲನಚಿತ್ರದ ‘ಸ್ವಾಮಿ ಅಯ್ಯಪ್ಪ’  ಹಾಡು ಬಿಡುಗಡೆ

ಬೆಂಗಳೂರು: ಅಶ್ವಿನಿ ಪ್ರೊಡಕ್ಷನ್ಸ್ ಬೆಂಗಳೂರು ಅವರ ಸ್ವಾಮಿ ಶರಣಂ  ಅಯ್ಯಪ್ಪನ ಕುರಿತಾದ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಭಕ್ತಿಪ್ರಧಾನ ಕನ್ನಡ ಚಲನಚಿತ್ರ ‘ಮಣಿಕಂಠ’ಚಲನಚಿತ್ರದ ಮೊದಲ ಹಾಡಿನ ಪೂಜಾ ಸಮಾರಂಭ ಮತ್ತು ಬಿಡುಗಡೆ ಕಾರ್ಯಕ್ರಮ ಮಹಾಲಕ್ಷ್ಮಿ ಲೇ ಔಟ್‌ನ  ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿತು.

ಖ್ಯಾತ ಗಾಯಕರಾದ ಅಜಯ್ ವಾರಿಯರ್ ಹಾಡಿರುವ ಚಿತ್ರದ ಮೊದಲ ಹಾಡು  “ಸ್ವಾಮಿ ಅಯ್ಯಪ್ಪ” ಹಾಡನ್ನು ಮ್ಯೂಸಿಕ್ ಲೇಬಲ್ “ಆನಂದ್ ಆಡಿಯೋ ಮೈನ್ ಚಾನಲ್”  ನಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಾಯಿತು. ಈ ಚಿತ್ರದ ನಿರ್ದೇಶಕರು ಹಾಗೂ  ನಾಯಕ ನಟರಾದ ಸಂತೋಷ್ ಸಿಂಹ , ನಿರ್ಮಾಪಕರಾದ ಶ್ರೀಮತಿ ಅಶ್ವಿನಿ , ಸಂಗೀತ  ನಿರ್ದೇಶಕ ಸ್ವರೂಪ್, ಗಾಯಕ ಅಜಯ್ ವಾರಿಯರ್, ಬಾಲನಟ ಗುರು ಜೀವನ್,  ಛಾಯಾಗ್ರಾಹಕ ವರ್ಷಿತ್, ಚೇತನ್ ಕುಮಾರ್ ಎನ್, ತಿಲಕ್ ಆರ್, ದೇವರಾಜ್ ಕೇಸರಿ  ಮತ್ತು ಅಯ್ಯಪ್ಪ ಸನ್ನಿಧಿಯ ಗುರುಸ್ವಾಮಿಗಳು ಹಾಗೂ ನೂರಾರು  ಅಯ್ಯಪ್ಪಸ್ವಾಮಿ ಭಕ್ತರು ಭಾಗವಹಿಸಿದ್ದರು.

ಟೈಟಲ್‌ ರೋಲ್‌ ನಲ್ಲಿ ಗುರು ಜೀವನ್‌ಸಿಂಹ, ವೇದನೆ ಪಡುವ ಪಾತ್ರದಲ್ಲಿ ತನುಶ್ರೀ ಸಿಂಹ,  ತಾಯಿಯಾಗಿ ಬಿ.ಎಸ್.ಮಂಜುಳಾ, ವೈಷ್ಣವಿ.ಎಸ್.ಡಿ, ಶರತ್.ಎಸ್.ಎಂ, ಲೋಕೇಶ ವಿದ್ಯಾಧರ,  ಮಮತಾ, ಶಿವಣ್ಣ ಮೊದಲಾದವರು ಅಭಿನಯಿಸುತ್ತಿದ್ದಾರೆ. ಚೇತನ್‌ಕುಮಾರ್ ಸಾಹಿತ್ಯದ  ಐದು ಗೀತೆಗಳಿಗೆ ಸ್ವರೂಪ್.ಆರ್ ಸಂಗೀತ ಸಂಯೋಜಿಸಿದ್ದಾರೆ.

ಛಾಯಾಗ್ರಹಣ-ಸಂಕಲನ  ವರ್ಷಿತ್.ಎಸ್.ಎನ್, ಸಾಹಸ ಗಣೇಶ್, ಕಲೆ ಶರತ್.ಎಸ್ ಎಂ, ವರ್ಣಾಲಂಕಾರ ನಾರಾಯಣಸ್ವಾಮಿ, ಪಿಆರ್‌ಓ  ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಅಶ್ವಿನಿ ಸಂತೋಷ ಸಿಂಹ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..

ಬೆಂಗಳೂರು, ಶಬರಿಮಲೆ, ಪಂಪ, ದೊಡ್ಡಪಾದ  ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದೆ. ಸಧ್ಯ ಬಿಡುಗಡೆಯಾದ ಹಾಡು ಎಲ್ಲೆಡೆ  ವೈರಲ್ ಆಗಿದೆ. ಮತ್ತು ವಿಶೇಷವಾಗಿ ಅಯ್ಯಪ್ಪಸ್ವಾಮಿ ಭಕ್ತರ ಮನಮುಟ್ಟಿದೆ ಎಂದು ನಿರ್ಮಾಪಕಿ ಅಶ್ವಿನಿ ಹೇಳಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ