LatestMysore

ಅಖಿಲ ಭಾರತ ವೀರಶೈವ ಮಹಾಸಭಾ ಕೆ.ಆರ್.ನಗರ ಘಟಕಕ್ಕೆ ಚುನಾವಣೆ… 41 ನಾಮಪತ್ರ ಸಲ್ಲಿಕೆ

 ಕೆ.ಆರ್‌.ನಗರ(ಜಿಟೆಕ್ ಶಂಕರ್):  ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಗಳಿಗೆ ಮೇ 24 ರಂದು ಭಾನುವಾರ ನಡೆಯಲಿರುವ ಚುನಾವಣೆಗೆ ಒಟ್ಟು  41 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಬುಧವಾರ ದವರೆಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಎಲ್.ಪಿ.ರವಿಕುಮಾರ್, ಸಿ.ಪಿ.ರಮೇಶ್ ಕುಮಾರ್, ಸಣ್ಣಲಿಂಗಪ್ಪ, ಕೆ.ಎಸ್.ಮಲ್ಲಪ್ಪ, ಕೆ.ಎಸ್.ಮಹೇಶ್, ಎಸ್.ವಿ.ಪ್ರಕಾಶ್, ಎಲ್.ಎನ್.ಮಹೇಂದ್ರ, ಎ.ಎಲ್.ಮೋಹನಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

13 ಮಂದಿ ಸಾಮಾನ್ಯ ಪುರುಷ ನಿರ್ದೇಶಕ ಸ್ಥಾನಗಳಿಗೆ ಕುಪ್ಪೆಮಹದೇವಸ್ವಾಮಿ, ರಾಜಶೇಖರ, ಎಲ್.ಆರ್.ಮಹದೇವಪ್ಪ, ಸೋಮೇಶ್, ಕೆ.ಬಿ.ಪ್ರಕಾಶ್, ಹೆಚ್.ಎಸ್.ಮಂಜುನಾಥ್, ತೀರ್ಥೇಶ್, ಎ.ಆರ್.ಮಹದೇವಪ್ಪ, ಎಲ್.ಎಸ್‌.ಮಹೇಶ್, ಎ.ಸಿ‌.ವಿರೂಪಾಕ್ಷ, ಎಲ್.ಪಿ.ಉಮೇಶ್, ಸಿ.ವಿ.ಆನಂದ್, ಎನ್.ಎಸ್.ಮಂಜುನಾಥ್, ನಿಶಾಂತ್, ಸಣ್ಣಪ್ಪ, ರಾಜಶೇಖರ, ಗಣೇಶ, ನಂಜುಂಡಸ್ವಾಮಿ, ಜ್ಙಾನಾನಂದ, ಅರುಣ್ ಬಿ.ನರಗುಂದ್, ಎಂ.ಸಿ‌.ಸುರೇಶ್, ಗಂಗಾಧರ, ಕೆ.ಬಿ.ಮಂಜುನಾಥ್, ಉಮಾಶಂಕರ್ ಸ್ಪರ್ಧಾ ಕಣದಲ್ಲಿದ್ದಾರೆ‌.

7 ಮಹಿಳಾ ನಿರ್ದೇಶಕ ಸ್ಥಾನಗಳಿಗೆ ಮನೋಹರಿನಾಗರಾಜು, ಪವಿತ್ರಾ, ಎಂ.ಎಸ್‌.ರಾಜೇಶ್ವರಿ, ಸಿ.ಇ.ತ್ರೀವೇಣಿ, ಕೌಶಲ್ಯ, ಸುನಂದಮ್ಮ, ಬಸಮ್ಮಣ್ಣಿ, ವೀಣಾಕುಮಾರಿ, ನೇತ್ರಾವತಿ, ಶಿಲ್ಪಾರಾಜು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ‌.

ಮೇ, 07 ರಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಮೇ,  10 ರಂದು ಭಾನುವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಸಮಯಾವಕಾಶ ನಿಗಧಿಪಡಿಸಲಾಗಿದೆ ಎಂದು ಚುನಾವಣಾಧಿಕಾರಿ  ಹೆಚ್‌.ಎಸ್.  ಲೋಕೇಶ್, ಸಹಾಯಕ ಚುನಾವಣಾಧಿಕಾರಿ ಹೆಚ್.ಸಿ.ನಟರಾಜು ತಿಳಿಸಿದ್ದಾರೆ‌.

admin
the authoradmin

Leave a Reply

Translate to any language you want